ಪುತ್ತೂರು: ಪುತ್ತೂರು ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಮತ್ತು ದರ್ಬೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ನಡೆಯುತ್ತಿರುವ “ಅಭಿವ್ಯಕ್ತ -2025 ಮಕ್ಕಳ ಬೇಸಿಗೆ ಶಿಬಿರದ ಎರಡನೇ ದಿನವು ಧ್ಯಾನ ಮತ್ತು ಯೋಗಾಸನದೊಂದಿಗೆ ಆರಂಭಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ ವಸಂತ್ ಶಂಕರ್ ಮತ್ತು ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಕೋಶಾಧಿಕಾರಿ ಗೋಪಾಲಕೃಷ್ಣ ಕುಂಟುನಿ ದೀಪ ಪ್ರಜ್ವಲಿಸಿ, ಶುಭಹಾರೈಸಿದರು. ಬಳಿಕ ಸಂಪನ್ಮೂಲ ವ್ಯಕ್ತಿ ಉಲ್ಲಾಸ್ ಪೈ ಮಕ್ಕಳೊಂದಿಗೆ ಕುಣಿದು,ಹಾಡು ಹಾಡಿ ರಂಜಿಸಿದರು.
ಸಂಪನ್ಮೂಲ ವ್ಯಕ್ತಿ ನವೀನ್ ಪುತ್ತೂರು ನಾಯಕತ್ವ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಭವ್ಯ ಮರಿಕೆ ಹಾಗೂ ಯಶೋಧ ಮರಿಕೆ ಕಥೆ ಕಟ್ಟೋಣ ಬನ್ನಿ ಹಾಗೂ ಆಟ ರಂಗಾಟ ಕಾರ್ಯಕ್ರಮ ನಡೆಸಿಕೊಟ್ಟರು .ಶಿಬಿರ ಸಂಯೋಜಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.