ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿದಾಯ ಕೂಟ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿದಾಯಕೂಟ ಹಮ್ಮಿಕೊಳ್ಳಲಾಗಿತ್ತು. ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ನಾತಕೋತ್ತರ ವಿಭಾಗ ಹಾಗೂ ಕುಲ ಸಚಿವರು ಪರೀಕ್ಷಾಂಗ ವಿಭಾಗ ವಿವೇಕಾನಂದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಶ್ರೀಧರ್ ಎಚ್‌ ಜಿ ಮಾತನಾಡುತ್ತಾ “ಇದೊಂದು ಭಾವನಾತ್ಮಕ ದಿನ ಸಂಸ್ಥೆ ಸದೃಢವಾಗಿರುವುದು ವಿದ್ಯಾರ್ಥಿಗಳ ಮೂಲಕ. ವಿದ್ಯಾರ್ಥಿಗಳೆಲ್ಲರೂ ಸಂಸ್ಥೆಯ ಸಂಪತ್ತು. ವಿದ್ಯೆ ಎನ್ನುವುದು ಕಾಮಧೇನುವಿನ ಹಾಗೆ ಎಲ್ಲಾ ಕಾಲದಲ್ಲೂ ಫಲವನ್ನು ಕೊಡುತ್ತದೆ. ಯಂತ್ರಗಳ ಜೊತೆಗೆ ಕೆಲಸ ಮಾಡುವವರಾದರೂ ಯಂತ್ರಗಳಾಗಬೇಡಿ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿ ಸಂಸ್ಥೆಯನ್ನು ಗೌರವಿಸಿ ಪ್ರೀತಿಸಿ” ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ ಮುಂದಿನ ನಿಮ್ಮ ಪ್ರಯಾಣದಲ್ಲಿ ಪ್ರಯತ್ನ ನಿಮ್ಮದೇ ಆಗಿರಬೇಕು ಆ ಶಕ್ತಿಯ ಆಧಾರದಲ್ಲಿ ನಿಮ್ಮ ಪ್ರಯೋಗ ಯಶಸ್ವಿಯಾಗಲಿ ಎಂದು ನುಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಮುರಳೀದರ ಅತಿಥಿಗಳನ್ನು ಸ್ವಾಗತಿಸುತ್ತಾ ನಿಮಗೆ ಕೊಟ್ಟ ಸಂಸ್ಕಾರ ಮೌಲ್ಯಗಳನ್ನು ಅಳವಡಿಸಿಕೊಂಡು ಉಳಿಸಿ ಬೆಳೆಸಿಕೊಳ್ಳಿ ಹೆತ್ತವರನ್ನು ಗುರುಹಿರಿಯರನ್ನು ಸ್ಮರಿಸುವುದು ನಿಮ್ಮ ಧರ್ಮ ಎಂದರು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಂದ ಅಖಂಡ ಭಾರತದ ನಕ್ಷೆಗೆ ದೀಪ ಪ್ರಜ್ವಲನ ನಡೆಯಿತು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಮಹಾದೇವಶಾಸ್ತ್ರಿ ಮಣಿಲ ಖಜಾಂಚಿ ನರಸಿಂಹ ಪೈ ಸದಸ್ಯರಾದ ರವಿ ಮುಂಗ್ಲಿ ಮನೆ ಹಾಗೂ ಈಶ್ವರ ಚಂದ್ರ, ರವಿರಾಮ್ ಎಸ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕ ವೃಂದದವರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಸೃಜನ್ಯ ತಂಡದವರು ಪ್ರಾರ್ಥಿಸಿದರು. ಸುಧಾ ಕುಮಾರಿ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗ ಮುಖ್ಯಸ್ಥರು ಸ್ವಾಗತಿಸಿದರು. ಪ್ರಶಾಂತ್ ಉಪನ್ಯಾಸಕರು ಮೆಕ್ಯಾನಿಕಲ್ ವಿಭಾಗ ವಂದಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಗುರುರಾಜ್ ಉಪನ್ಯಾಸಕರು ಆಟೋಮೊಬೈಲ್ ವಿಭಾಗ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here