ರಾಮಕುಂಜ: ಆಲಂಕಾರು ಗ್ರಾಮದ ನೆಕ್ಕರೆ ನಿವಾಸಿ ಕೊರಗು ಮುಗೇರ(85 ವ.)ರವರು ವಯೋ ಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಆದಿ ಮುಗೇರ್ಕಳ ದೈವದ ಪಾತ್ರಿಯಾಗಿದ್ದರು. ಮೃತರು ಪತ್ನಿ ಹುಕ್ರು, ಪುತ್ರ ಗಿರಿಯಪ್ಪ, ಪುತ್ರಿ ಲಕ್ಷ್ಮೀ, ಸೊಸೆ ಲೀಲಾ, ಮೊಮ್ಮಕ್ಕಳಾದ ಪವಿತ್ರ, ದೀಕ್ಷಾ, ಶ್ರೇಯಸ್‌ರವರನ್ನು ಆಗಲಿದ್ದಾರೆ.
ಮೃತರ ಮನೆಗೆ ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಾತ ಕೆ., ಕಾರ್ಯದರ್ಶಿ ವಸಂತ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು, ಸದಸ್ಯರಾದ ಸದಾನಂದ ಆಚಾರ್ಯ, ಕಾಂಗ್ರೆಸ್ ಮುಖಂಡರಾದ ಅಬೂಬಕ್ಕರ್ ನೆಕ್ಕರೆ, ಚೆರಿಯಮೋನು, ಹುಸೈನ್ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.