ಪುತ್ತೂರು: ಇಲ್ಲಿನ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಮತ್ತು ವಾರ್ಷಿಕ ಮಹಾಸಭೆಯು ಎ.12ರಂದು ನಡೆಯಿತು. ಬೆಳಿಗ್ಗೆ ಶುದ್ದಿ, ನಂತರ ಅಷ್ಟ ವಿಧ ಅರ್ಚನೆ ಪೂಜೆ, ಮಹಾಸ್ವಾಮೀಗೆ 24 ಕಲಶ ಅಭಿಷೇಕ, ಪದ್ಮಾವತಿ ಮಾತೆಗೆ ಅಲಂಕಾರ ಪೂಜೆ, ಕ್ಷೇತ್ರಪಾಲ ದೇವರಿಗೆ ಕ್ಷೀರಾಭಿಷೇಕ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಮುತ್ತು ಭಾರತೀಯ ಜೈನ್ ಮಿಲನ್ ಪುತ್ತೂರು ಇದರ ಸದಸ್ಯರು ಮತ್ತು ಶ್ರಾವಕರು ಅಷ್ಟ ವಿಧ ಅರ್ಚನ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಪುತ್ತೂರು ಶಾಂತಿನಾಥ ಸ್ವಾಮಿ ಬಸದಿಯ ಪುರೋಹಿತರಾದ ಸಂತೋಷ್ ಕುಮಾರ್ ಇಂದ್ರ ಇವರು ನೆರವೇರಿಸಿದರು.

ಮಹಾವೀರ ಸ್ವಾಮಿಗೆ ಪುತ್ತೂರಿನ ಶ್ರಾವಕ ಶ್ರಾವಕಿಯರಿಂದ ಜಲ ಅಭಿಷೇಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವರ್ಷಂಪ್ರತಿಯಂತೆ ನಡೆಯಬೇಕಾದ ವಾರ್ಷಿಕ ಮಹಾಸಭೆಯು ಭರತ್ ಕುಮಾರ್ ಆರಿಗ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಹಿಂದಿನ ಸಾಲಿನ ವರದಿಯನ್ನು ಸಮಿತಿ ಸದಸ್ಯರಾದ ಯು ಶ್ರೀಧರ್ ಹೆಗ್ಡೆ ವಾಚಿಸಿ, ಸಭೆಯಲ್ಲಿ ಕಳೆದ ವರುಷದ ಲೆಕ್ಕಪತ್ರಗಳನ್ನು ಮಂಡಿಸಿದರು. ಸದಸ್ಯರು ತಮ್ಮ ಅಭಿಪ್ರಾಯಗಳ ವಿಚಾರ ವಿನಿಮಯ ನಡೆಸಿದರು.ಮಹಾಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.