ಪುತ್ತೂರು: ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನದನ್ವಯ ಪುತ್ತೂರಿನಾದ್ಯಂತ ಧರ್ಮಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮಸಮಿತಿಗಳು ರೂಪುದಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಸಮಿತಿಯನ್ನು ಭಾನುವಾರ ರಚಿಸಲಾಯಿತು.
ಬೆಳ್ಳಿಪ್ಪಾಡಿಯ ಸುಬ್ರಹ್ಮಣ್ಯ ಭಜನಾ ಮಂಡಳಿ ಕೇಂದ್ರಿತವಾಗಿ ಸಮಿತಿ ರಚಿಸಲಾಗಿದೆ. ಸ್ಥಳೀಯರಾದ ಜಿನ್ನಪ್ಪ ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಗೌಡ ಡಿ.ವಿ., ಉಪಾಧ್ಯಕ್ಷರಾಗಿ ಲಕ್ಷ್ಮಣ ಗೌಡ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ, ಜತೆ ಕಾರ್ಯದರ್ಶಿಯಾಗಿ ಮೋಹನ್ ಪಕಳ, ಸಂಚಾಲಕರಾಗಿ ವಸಂತ ಕೈಲಾಜೆ, ಖಜಾಂಚಿಯಾಗಿ ಚಂದನ್ ತೆಂಕಪಾಡಿ, ಉಪಾಧ್ಯಕ್ಷರಾಗಿ ಮಲ್ಲಿಕಾ ಅಳ್ವ ಹಾಗೂ ಸಂಧ್ಯಾ ರಾಮಚಂದ್ರ, ಜತೆ ಕಾರ್ಯದರ್ಶಿಯಾಗಿ ಕುಸುಮಾಧರ, ಸಂಘಟನ ಕಾರ್ಯದರ್ಶಿಯಾಗಿ ಗಣೇಶ್ ಬಾರ್ತಿಹೊಲು ಆಯ್ಕೆಯಾದರು. ಪುತ್ತೂರು ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃ? ಬೋರ್ಕರ್, ಮಾಧವ ಸ್ವಾಮಿ ಮತ್ತು ದಿನೇಶ್ ಕುಮಾರ್ ಜೈನ್ ಹಾಗೂ ಬೆಳ್ಳಿಪ್ಪಾಡಿ ಭಾಗದ ಧರ್ಮ ಭಕ್ತರು ಉಪಸ್ಥಿತರಿದ್ದರು.