*ವಿದ್ಯೆಗೆ ವಯಸ್ಸು ಇಲ್ಲ-ಮನಸ್ಸು ಮಾತ್ರ ಬೇಕಾಗಿರುವುದು: ಅಶೋಕ್ ಕುಮಾರ್ ರೈ
*ಜ್ಞಾನ, ಸ್ಕಿಲ್, ಮನೋ ಧರ್ಮ ಮಕ್ಕಳಿಗೆ ಕೊಡಿ : ಮಹೇಶ್ ಕಜೆ
*ಭವಿಷ್ಯದ ಚಿಂತನೆ ಕಟ್ಟಿ ಬೆಳೆಸಲು ವಿದ್ಯೆ ದೊಡ್ಡ ಮಾರ್ಗ: ಎ.ವಿ.ನಾರಾಯಣ
*ಪೋಷಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಆಗಿದೆ: ಹನೀ- ಮಧುರಾ
*ಶೈಕ್ಷಣಿಕ ಮೇಳದ ಮಾಹಿತಿ ಪಡೆದುಕೊಳ್ಳಿ :ನಂಜೇಗೌಡ ನಂಜುಂಡ
*ಅವಕಾಶಗಳಿಗೆ ಲಿಮಿಟ್ ಇಲ್ಲ-ಮುಂದೆ ದೊಡ್ಡ ಕಾರ್ಯಕ್ರಮ ನಡೆಸಲಿದ್ದೇವೆ: ಡಾ. ಯು.ಪಿ ಶಿವಾನಂದ
*ಶೈಕ್ಷಣಿಕ ಮೇಳ ಆಯೋಜನೆ ಉತ್ತಮ ವಿಚಾರ: ಡಿವೈಎಸ್ಪಿ ಅರುಣ್ ನಾಗೇಗೌಡ
ಪುತ್ತೂರು: ಎಸ್‌ಎಸ್‌ಎಲ್‌ಸಿ, ಪಿಯುಸಿ, ಇಂಜಿನಿಯರಿಂಗ್, ಐಟಿಐ, ಡಿಪ್ಲೊಮಾ ನಂತರ ಮುಂದೇನು? ಎಂಬ ವಿದ್ಯಾರ್ಥಿಗಳ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಪುತ್ತೂರಿನ ನೆಹರುನಗರದಲ್ಲಿರುವ ಸುದಾನ ವಸತಿಯುತ ಶಾಲೆಯಲ್ಲಿ 2 ದಿನ ನಡೆಯುವ, ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ವಿವಿಧ ಶಿಕ್ಷಣ ಸಂಸ್ಥೆಗಳ ಮಾಹಿತಿ ಮತ್ತು ಸಂಪರ್ಕಕ್ಕಾಗಿ ಅವಕಾಶ ಕಲ್ಪಿಸಲಾದ ‘ಶೈಕ್ಷಣಿಕ ಮೇಳ-2025’ರ ಉದ್ಘಾಟನೆ ಕಾರ್ಯಕ್ರಮ ಏ.12ರಂದು ನಡೆಯಿತು. ಸುದ್ದಿ ಮಾಹಿತಿ ಟ್ರಸ್ಟ್, ಒಕ್ಕಲಿಗ ಯುವ ಬ್ರಿಗೇಡ್, ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುದಾನ ವಸತಿಯುತ ಶಾಲೆಯ ಸಹಯೋಗದೊಂದಿಗೆ ಶೈಕ್ಷಣಿಕ ಮೇಳ ನಡೆಯುತ್ತಿದೆ.
ವಿದ್ಯೆಗೆ ವಯಸ್ಸು ಇಲ್ಲ-ಮನಸ್ಸು ಮಾತ್ರ ಬೇಕಾಗಿರುವುದು: ಶೈಕ್ಷಣಿಕ ಮೇಳವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಇವತ್ತು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬೇಸಿಕ್ ಫೌಂಡೇಶನ್ ಗಟ್ಟಿಯಾಗಿರಬೇಕು. ಇದಕ್ಕಾಗಿ ಎಸ್‌ಎಸ್‌ಎಲ್‌ಸಿಯಲ್ಲೇ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಅವರು ಮುಂದೆ ಉತ್ತಮ ಶೈಕ್ಷಣಿಕ ರಂಗಕ್ಕೆ ಹೋಗುತ್ತಾರೆ. ಮಕ್ಕಳಿಗೆ ಶಾಲೆ, ಕಾಲೇಜು ಮತ್ತು ಪೋಷಕರ ಸಹಕಾರ ಅಗತ್ಯ.ಮಕ್ಕಳ ಮನಸ್ಸಿಗೆ ಹೇಗೆ ನಾವು ತುಂಬುತ್ತೇವೋ ಅದೇ ರೀತಿ ಮಕ್ಕಳು ಬೆಳೆಯುತ್ತಾರೆ.ಇವತ್ತಿನ ಕಾಲದಲ್ಲಿ ಕ್ಯಾರಿಯರ್ ಗೈಡ್‌ಲೈನ್ ಬಹಳ ಅಗತ್ಯ ಎಂದರು.ಇವತ್ತು ಮಕ್ಕಳಲ್ಲಿ ಪ್ರತಿಭೆ ಇದೆ.ಅವರಿಗೆ ಇತರ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಿಸಬೇಕು.ನಾನು ಬಿಕಾಂ ಮಾಡಿದ್ದೆ.ಆಗ ನಮಗೆ ಕ್ಯಾರಿಯರ್ ಗೈಡ್‌ಲೈನ್ ಇರಲಿಲ್ಲ.ನಾವೇ ನಮಗೆ ಗೈಡ್‌ಲೈನ್ ಆಗಿದ್ದೆವು. ಪ್ಲ್ಯಾನಿಂಗ್ ಮತ್ತು ಶ್ರದ್ಧೆ ಇದ್ದರೆ ಯಾವುದನ್ನು ಕೂಡಾ ಅಚೀವ್ ಮಾಡಬಹುದು. ಇದಕ್ಕೆ ನಾನೇ ಉದಾಹರಣೆ ಎಂದ ಶಾಸಕರು, ನಾನು ಆರಂಭದಲ್ಲಿ ಲೈನ್‌ಸೇಲ್ಸ್, ಬಿಸಿನೆಸ್ ಆರಂಭ ಮಾಡಿದೆ. ಜ್ಯೂಸ್ ಮಾರುತ್ತಿದ್ದೆ.ಆಟೋ ಡ್ರೈವಿಂಗ್, ಮೆಟಡೋರ್ ಡ್ರೈವಿಂಗ್ ಮಾಡಿದ್ದೆ.ಹಂತ ಹಂತವಾಗಿ ಉದ್ಯಮದಲ್ಲಿ ಯಶಸ್ವಿ ಕಂಡೆ. ನಾನು ಮದುವೆಯಾಗಿ ಮಗುವಾದ ಬಳಿಕ ಎಂ.ಎ.ಪೊಲಿಟಿಕಲ್ ಸಯನ್ಸ್ ಮಾಡಿದೆ.ವಿದ್ಯೆಗೆ ವಯಸ್ಸು ಇಲ್ಲ. ಮನಸ್ಸು ಮುಖ್ಯ ಎಂಬುದಕ್ಕೆ ಇದು ಉದಾಹರಣೆ ಎಂದರಲ್ಲದೆ,ನಮ್ಮಲ್ಲಿಯೂ ಐಎಎಸ್, ಐಪಿಎಸ್ ಅಽಕಾರಿಗಳಾಗಬೇಕು.ಆ ಮಾರ್ಗದಲ್ಲಿ ಮಕ್ಕಳ ಬೆಳವಣಿಗೆ ಆಗಬೇಕಾಗಿದೆ ಎಂದರು.
ಸುದ್ದಿ ಮಾಹಿತಿ ಟ್ರಸ್ಟ್‌ನವರು ಮಾಡಿದಂತೆ ಶೈಕ್ಷಣಿಕ ಮೇಳ ಬಹಳ ಅಗತ್ಯ: ಬಸ್ ಕಂಡಕ್ಟರ್, ಪೊಲೀಸ್ ಕೆಲಸ, ಮೆಸ್ಕಾಂ, ಕೆಲಸದಲ್ಲಿ ಅವಕಾಶವಿದ್ದರೂ ನಮ್ಮ ಜಿಲ್ಲೆಯಿಂದ ಒಬ್ಬರೇ ಒಬ್ಬರು ಇಲ್ಲ.ನಮ್ಮವರಿಗೆ ಕೆಲಸ ಸಿಗಬೇಕೆಂಬುದು ನನ್ನ ಕಲ್ಪನೆ. ಒಂದು ವೇಳೆ ನನ್ನ ಗಮನಕ್ಕೆ ಬಂದರೆ ನಾನು ಅವರಿಗೆ ಪಕ್ಷಾತೀತವಾಗಿ ಸಹಾಯ ಮಾಡುತ್ತೇನೆ.ಇವತ್ತು ಎಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳು ಹೆಚ್ಚಿನವರು ಬಿಹಾರದವರು.ಇವತ್ತು ಸರಕಾರಿ ಕೆಲಸದಲ್ಲೂ ನಾರ್ತ್ ಕರ್ನಾಟಕದವರು ಇದ್ದಾರೆ.ಅವರಿಗೆ ಶೇ.90 ಅಂಕ ಇರುತ್ತದೆ.ನಮ್ಮವರಿಗೆ ಶೇ.60 ಅಂಕ ಮಾತ್ರ.ಇದನ್ನು ನಾನು ಪರಿಶೀಲಿಸಿದಾಗ ಶೇ.90, ಅವರೆಲ್ಲ ಬುಕ್ ನೋಡಿ ಬರೆಯುವುದು. ನಮ್ಮ ಮಕ್ಕಳಿಗೆ ಪರೀಕ್ಷೆಯಲ್ಲಿ ಭಾರೀ ಸ್ಟ್ರಿಕ್ಟ್ ಇರುತ್ತದೆ. ನಮ್ಮ ಮಕ್ಕಳು ಕೂಡಾ ನೋಡಿ ಬರೆಯಬೇಕೆಂದು ನಾನು ಹೇಳುವುದಲ್ಲ. ಆದರೆ, ವ್ಯವಸ್ಥೆಗಳು ಒಂದೇ ರೀತಿಯಲ್ಲಿ ಇರಬೇಕೆಂದು ಹೇಳುವುದು.ಇಲ್ಲಾಂದ್ರೆ ನಮ್ಮವರಿಗೆ ಒಂದೇ ಒಂದು ಸರಕಾರಿ ಕೆಲಸವಿಲ್ಲ. ಎಲ್ಲಾ ಅವರೆ ಎಂದು ಹೇಳಿದ ಶಾಸಕರು, ಐಎಎಸ್, ಐಪಿಎಸ್ ಆಗಲು ಉತ್ತರದಲ್ಲಿ ಮಕ್ಕಳಿಗೆ ಆರಂಭದಲ್ಲೇ ತರಬೇತಿ ನೀಡುತ್ತಾರೆ. ಅದೇ ರೀತಿ ನಮ್ಮ ಮಕ್ಕಳಿಗೂ ಎಳೆಯ ವಯಸ್ಸಿನಲ್ಲೇ ಏನು ಬೇಕೋ ಅದನ್ನೇ ಕೊಡಿಸಬೇಕು ಎಂದರು. ನಾನು ಸುಮಾರು ೨೫ ಮಕ್ಕಳನ್ನು ಐಎಎಸ್ ಓದಿಸಿದೆ. ಆದರೆ ಒಬ್ಬರೇ ಒಬ್ಬರು ಐಎಎಸ್ ಆಗಿಲ್ಲ.ಆದರೆ ಎಲ್ಲರೂ ಕೆಎಎಸ್ ಪಾಸಾಗಿ ಸರಕಾರಿ ಉದ್ಯೋಗದಲ್ಲಿದ್ದಾರೆ. ಕೆಲವರು ತಹಶೀಲ್ದಾರ್ ಆಗಿದ್ದಾರೆ. ಹಾಗಾಗಿ ಮಕ್ಕಳಿಗೆ ಸುದ್ದಿ ಮಾಹಿತಿ ಟ್ರಸ್ಟ್‌ನವರು ಮಾಡಿದಂತೆ ಶೈಕ್ಷಣಿಕ ಮೇಳ ಬಹಳ ಅಗತ್ಯ.ಇಲ್ಲಿ ಸಿಗುವ ಗೈಡ್‌ಲೈನ್ ಅವರ ಮುಂದಿನ ಭವಿಷ್ಯ ರೂಪಿಸುತ್ತದೆ ಎಂದು ಹೇಳಿ ಶುಭಹಾರೈಸಿದರು.
ಜ್ಞಾನ, ಸ್ಕಿಲ್, ಮನೋಧರ್ಮ ಮಕ್ಕಳಿಗೆ ಕೊಡಿ: ಜನಪ್ರಿಯ ವಕೀಲರಾಗಿರುವ ಮಹೇಶ್ ಕಜೆ ಅವರು ಮಾತನಾಡಿ, ಎಲ್ಲೋ ದೂರದಲ್ಲಿರುವ ವಿಚಾರವನ್ನು ನಮ್ಮ ಮನೆಯಂಗಳಕ್ಕೆ ತಂದಿಡುವುದು ಮಾಧ್ಯಮ.ಇವತ್ತು ಸುದ್ದಿ ಸಂಸ್ಥೆ ನಿಜವಾಗಿಯೂ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದೆ.ಎಲ್ಲೋ ವಿದ್ಯಾರ್ಥಿಗಳ ಕೈಗೆ ನಿಲುವಿನಲ್ಲಿ ಇಲ್ಲದಂತಹ ಶೈಕ್ಷಣಿಕ ಸಂಸ್ಥೆಯನ್ನು ಪುತ್ತೂರಿನ ಮನೆ ಬಾಗಿಲಿಗೆ ತಂದು ಇಡುತ್ತಿರುವುದು ನಿಜವಾದ ಅರ್ಥದಲ್ಲಿ ಸುದ್ದಿ ಸಂಸ್ಥೆ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಇವತ್ತು ಜ್ಞಾನ, ಸ್ಕಿಲ್,ಆಟಿಟ್ಯೂಡ್(ಮನೋಧರ್ಮ) ಎಂಬ ಮೂರು ಮುತ್ತನ್ನು ಮಕ್ಕಳಿಗೆ ನೀಡಬೇಕು.ಇದು ಶೈಕ್ಷಣಿಕ ವ್ಯವಸ್ಥೆಗೆ ಹಿಡಿದಂತಹ ಕೈಗನ್ನಡಿಯಾಗಿದೆ.ಜ್ಞಾನ, ಸ್ಕಿಲ್ ಇವತ್ತು ಸಹಜವಾಗಿ ಸಿಗುತ್ತದೆ.ಮನೋಧರ್ಮ ಸಿಗುತ್ತದೆಯೋ ಎಂದು ಚಿಂತಿಸಬೇಕಾಗಿದೆ.ನಾವು ಮೆದುಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಶಿಕ್ಷಣ ಕೊಡಬೇಕು ಎಂದು ಹೇಳಿ ಶುಭಹಾರೈಸಿದರು.
ಭವಿಷ್ಯದ ಚಿಂತನೆ ಕಟ್ಟಿ ಬೆಳೆಸಲು ವಿದ್ಯೆ ದೊಡ್ಡ ಮಾರ್ಗ: ಎವಿಜಿ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ ಅವರು ಮಾತನಾಡಿ, ಡಾ. ಯು.ಪಿ.ಶಿವಾನಂದ ಅವರು ಮುಂದೊಂದು ದಿನ ಜಗತ್ತು ನಮ್ಮ ಕೈಯಲ್ಲೇ ಸಿಗುತ್ತದೆ ಎಂದು 10 ವರ್ಷದ ಮೊದಲೇ ಹೇಳಿದ್ದರಲ್ಲದೆ ಪತ್ರಿಕೆಯನ್ನು ವೆಬ್‌ಸೈಟ್ ಮೂಲಕ ಪ್ರಥಮವಾಗಿ ಜಗತ್ತಿಗೆ ತೋರಿಸಿದರು. ಶಿಕ್ಷಿತರು ಮುಂದೆ ಕೃಷಿ ಕಡೆಗೆ ವಾಲುತ್ತಾರೆ ಹಾಗಾಗಿ ಕೃಷಿಗೆ ಆದ್ಯತೆ ಕೊಡುವ ನಿಟ್ಟಿನ ಚಿಂತನೆ ಮಾಡಿದರು.ಕೊರೋನಾ ಬಂದಾಗ ಎಲ್ಲರೂ ಕೃಷಿಯತ್ತ ವಾಲಿದರು.ಅದೇ ರೀತಿ ಕೆಲವೇ ವರ್ಷದ ನಂತರ ಕಾನರೆನ್ಸ್‌ನಲ್ಲೇ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿ ಆಗುತ್ತದೆ ಎಂದು ಈಗ ತಾನೆ ಹೇಳಿದ್ದಾರೆ.ಅದು ಕೆಲವೇ ವರ್ಷದಲ್ಲಿ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಭವಿಷ್ಯದ ಜೀವನ ಕಟ್ಟಿ ಬೆಳೆಸಲು ವಿದ್ಯೆ ದೊಡ್ಡ ಮಾರ್ಗ.ಆ ವಿದ್ಯೆಗೆ ಸುದ್ದಿ ಮಾಧ್ಯಮ ಶೈಕ್ಷಣಿಕ ಮೇಳ ಆಯೋಜನೆ ಮಾಡಿದ್ದಾರೆ.ಸುದ್ದಿಯವರು ಯಾವುದೇ ಕಾರ್ಯಕ್ರಮ ಮಾಡಿದರೂ ಅದರಲ್ಲಿ ಭವಿಷ್ಯದ ಚಿಂತನೆ ಇದೆ.ಡಾ.ಶಿವಾನಂದರದ್ದು ವಿಶೇಷವಾದ ಚಿಂತನೆ ಎಂದರು.
ಪೋಷಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಆಗಿದೆ: ಮಧುರಾ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಹನೀಫ್ ‘ಮಧುರಾ’ ಅವರು ಮಾತನಾಡಿ ಪೋಷಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಸುದ್ದಿಯಿಂದ ಆಗಿದೆ.ಇವತ್ತು ಎಲ್ಲವೂ ತಮ್ಮ ಕಾಲಿನಡಿಗೇ ಬರುತ್ತಿದೆ.ಅದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ಹೇಳಿದರು.
ಶೈಕ್ಷಣಿಕ ಮೇಳದ ಮಾಹಿತಿ ಪಡೆದು ಕೊಳ್ಳಿ: ಒಕ್ಕಲಿಗ ಯುವ ಬ್ರಿಗೇಡ್‌ನ ಸಂಸ್ಥಾಪಕ ನಂಜೇಗೌಡ ನಂಜುಂಡ ಅವರು ಮಾತನಾಡಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದೇ ನಮ್ಮ ಉದ್ದೇಶ.ಮೌಲ್ಯಾಧಾರಿತ ಶಿಕ್ಷಣ ಇವತ್ತು ಅಗತ್ಯ. ಎಲ್ಲರೂ ಪದವಿ ತನಕ ಮಾತ್ರ ಫೋಕಸ್ ಮಾಡುತ್ತಾರೆ. ಆದರೆ ಮತ್ತೇನು ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಮೊನ್ನೆ ತಾನೆ ಪಿಯುಸಿ ಫಲಿತಾಂಶ ಬಂದಿತ್ತು. ಅದರಲ್ಲಿ 18 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1 ಅಂಕ ಕಡಿಮೆ ಆಗಿದ್ದಕ್ಕೂ ಆತ್ಮಹತ್ಯೆ ಮಾಡಬೇಕಾದ ಪರಿಸ್ಥಿತಿ ಬಂತಾ ಎಂಬುದರ ಕುರಿತು ಚಿಂತನೆ ಮಾಡಬೇಕಾಗಿದೆ. ಇಲ್ಲಿ ಬಹಳ ಜನಕ್ಕೆ ಅಂಕ ಅಂದರೆ ಹುಚ್ಚು ಹಿಡಿದಿದೆ. ಅದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಐಎಎಸ್, ಕೆಎಎಸ್ ಹೇಗೆ ತೆಗೆದು ಕೊಳ್ಳಬೇಕೆಂಬುದನ್ನೂ ಚಿಂತನೆ ಮಾಡಬೇಕು. ನಾವು ಶಿಕ್ಷಣ ಮತ್ತು ಉದ್ಯೋಗ ಎಂಬ ಎರಡು ಕ್ಷೇತ್ರವನ್ನು ತೆಗೆದು ಕೊಳ್ಳಬೇಕು.ಈ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಇನ್‌ಸ್ಟಿಟ್ಯೂಟ್ ಮಾಡೋಣ.ಅದರ ಮೂಲಕ ಕನಿಷ್ಠ ನೂರು ಮಕ್ಕಳಿಗಾದರೂ ಸರಕಾರಿ ಉದ್ಯೋಗ ಕೊಡಿಸುವ ಕೆಲಸ ಆಗಬೇಕು ಎಂದರು.ಸುದ್ದಿ ಅರಿವು ಸಂಸ್ಥೆ ಬಹಳಷ್ಟು ಕೆಲಸ ಮಾಡುತ್ತಿದೆ.ಎಲ್ಲರೂ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿ ಉತ್ತಮ ಮಾಹಿತಿ ಪಡೆದುಕೊಳ್ಳಿ ಎಂದವರು ಕರೆ ನೀಡಿದರು.
ಅವಕಾಶಗಳಿಗೆ ಲಿಮಿಟ್ ಇಲ್ಲ-ಮುಂದೆ ದೊಡ್ಡ ಕಾರ್ಯಕ್ರಮ ನಡೆಸಲಿದ್ದೇವೆ: ಸುದ್ದಿ ಮಾಹಿತಿ ಟಸ್ಟ್‌ನ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಣ ಸಂಸ್ಥೆಯವರು, ಮಕ್ಕಳು, ಪೋಷಕರು ಇವತ್ತು ತಮ್ಮ ಮುಂದಿನ ನಡೆಯ ಕುರಿತು ಮಾತನಾಡಲು ಬಯಸುತ್ತಾರೆ. ಮಕ್ಕಳು ಮುಂದೆ ತಮಗೆ ಯಾವ ಶಿಕ್ಷಣ ಸಂಸ್ಥೆ ಬೇಕೆಂದು ಯೋಚನೆ ಮಾಡುತ್ತಾರೆ.ಅವಕಾಶಗಳಿಗೆ ಇವತ್ತು ಲಿಮಿಟ್ ಇಲ್ಲ. ಸುದ್ದಿ ಮಾಹಿತಿ ಟ್ರಸ್ಟ್ ಮೂಲಕ ಕೆಲವು ವರ್ಷಗಳ ಹಿಂದೆ ಶಿಕ್ಷಣ ಮೇಳ ಮಾಡಿದ್ದೆವು. ಈ ಬಾರಿ ಯಾವುದೇ ಶಿಕ್ಷಣ ಸಂಸ್ಥೆಯಿರಲಿ. ಅದರ ಸಂಪೂರ್ಣ ಮಾಹಿತಿಯನ್ನು ಅರಿವು ಶಿಕ್ಷಣ ಕೇಂದ್ರದ ಮೂಲಕ ನೀಡುತ್ತೇವೆ. ಇವತ್ತು ಕೂತಲ್ಲೇ ಯಾವುದೇ ಸಂಸ್ಥೆಯನ್ನು ಬೇಕಾದರೂ ನೋಡಬಹುದು. ವೀಡಿಯೋ ಕಾನ್ಪರೆನ್ಸ್ ಕೂಡಾ ಮಾಡಬಹುದು. ಮುಂದಿನ ದಿನ ಅಂತಹ ವ್ಯವಸ್ಥೆಯನ್ನೂ ಕೂಡಾ ಮೇಳದಲ್ಲಿ ಮಾಡಲಿದ್ದೇವೆ. ಶಿಕ್ಷಣ ಸಂಸ್ಥೆಗಳಿಗೆ ಬೇಕಾದ ಮಾಹಿತಿ, ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಮಾಧ್ಯಮವಾಗಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಹಾಗೆ ಕೆರಿಯರ್ ಗೈಡೆನ್ಸ್ ಮಾರ್ಗದರ್ಶನ ನೀಡುವ ವ್ಯವಸ್ಥೆ, ಕರಾಟೆ, ಸಂಗೀತ, ನೃತ್ಯ, ಚೆಸ್ ಸಹ ಇದರಲ್ಲಿ ಸೇರ್ಪಡೆಯಾಗುತ್ತದೆ. ವಿದ್ಯೆಗೆ ತುಂಬಾ ಅವಕಾಶವಿದೆ.ಅಭಿವೃದ್ಧಿ ಎಂದರೆ ಕಟ್ಟಡ ನಿರ್ಮಾಣ ಮಾತ್ರ ಅಲ್ಲ.ಅಭಿವೃದ್ಧಿ ಎಂದರೆ ಜನರು, ಅವರಿಗೆ ಬೇಕಾದ ಅವಕಾಶಗಳನ್ನು ಕೊಡಬೇಕು.ಪುತ್ತೂರು ಎಜ್ಯುಕೇಶನ್ ಹಬ್ ಆಗಬೇಕು.ಈ ನಿಟ್ಟಿನಲ್ಲಿ ಇವತ್ತಿನ ಕಾರ್ಯಕ್ರಮ ನಾಂದಿಯಾಗಬೇಕು ಎಂದರಲ್ಲದೆ, ಮುಂದಿನ ಎರಡು ಮೂರು ತಿಂಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ.ಶಿಕ್ಷಣ ಸಂಸ್ಥೆಗಳ ಮಾಹಿತಿಯನ್ನು ಪತ್ರಿಕೆ ಮಾತ್ರವಲ್ಲ ನಮ್ಮ ಚಾನೆಲ್‌ನಲ್ಲೂ ಪ್ರಚಾರ ಮಾಡುವ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆ ಎಂದರು.
ಶೈಕ್ಷಣಿಕ ಮೇಳ ಆಯೋಜಿಸಿರುವುದು ಉತ್ತಮ ವಿಚಾರ: ಸಭಾ ಕಾರ್ಯಕ್ರಮದ ಬಳಿಕ ಆಗಮಿಸಿದ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಮಳೆ ಕೊಯ್ಲು ಘಟಕವನ್ನು ಉದ್ಘಾಟಿಸಿದರು.ಇವತ್ತು ಸಾಕಷ್ಟು ಜನರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಲು ತೊಂದರೆ ಆಗುತ್ತಿರುವ ಸಂದರ್ಭದಲ್ಲಿ ಅದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಶೈಕ್ಷಣಿಕ ಮೇಳವನ್ನು ಆಯೋಜಿಸಿರುವುದು ತುಂಬಾ ಉತ್ತಮ ವಿಚಾರ ಎಂದು ಹೇಳಿದ ಡಿವೈಎಸ್ಪಿಯವರು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಕರೆ ನೀಡಿ ಶುಭ ಹಾರೈಸಿದರು.ಡಿವೈಎಸ್ಪಿಯವರು ವಿವಿಧ ಶಿಕ್ಷಣ ಸಂಸ್ಥೆಗಳ ಮಳಿಗೆಗೆ ಭೇಟಿ ನೀಡಿದರು.ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಮಳಿಗೆಗೆ ಭೇಟಿ ನೀಡಿದ ಸಂದರ್ಭ ಕಾಲೇಜಿನ ಉಪನ್ಯಾಸಕರು ಮಾಹಿತಿ ನೀಡಿದರು.
ಶಾರದಾ ಹಿಂದೂಸ್ತಾನಿ ಸಂಗೀತ ವಿದ್ಯಾಲಯದ ಚಂದನಾ ಮತ್ತು ದೇವಿಕಾ ಪ್ರಾರ್ಥಿಸಿದರು.ಸುದ್ದಿ ಮೀಡಿಯಾ ಬೆಳ್ತಂಗಡಿ ಮುಖ್ಯಸ್ಥ ದಾಮೋದರ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ, ರಾಕೇಶ್ ನಾಯಕ್, ಶಿವಕುಮಾರ್, ಚೈತ್ರಾ, ಹರಿಣಿ, ರಕ್ಷಾ, ರಮ್ಯಾಸತೀಶ್ ಸುಳ್ಯ, ಕುಶಾಲಪ್ಪ, ಹೊನ್ನಪ್ಪ, ಪ್ರಜ್ವಲ್, ಎವಿಜಿ ಇಂಗ್ಲೀಷ್ ಮಿಡಿಯಂ ಸ್ಕೂಲ್‌ನ ಶಿಕ್ಷಕರಾದ ಹರ್ಷಿತಾ, ಪ್ರಕ್ಷುತ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಮಾರಂಭದ ಬಳಿಕ ಕಾರ್ಯಾಗಾರ ನಡೆಯಿತು.
೧೮ ಸಂಸ್ಥೆಗಳು ಭಾಗಿ: ಎರಡು ದಿನಗಳ ಕಾಲ ನಡೆಯುವ ಶೈಕ್ಷಣಿಕ ಮೇಳ-2025ರಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಆಯೋಜಿಸಲಾಗಿದೆ.ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಶಿಕ್ಷಣ ಸಂಸ್ಥೆಗಳ ಮಾಹಿತಿ ಮತ್ತು ಸಂಪರ್ಕಕ್ಕಾಗಿ ನಡೆಯುತ್ತಿರುವ ಶೈಕ್ಷಣಿಕ ಮೇಳದಲ್ಲಿ ವಿವಿಧ ವಿಭಾಗದ ‘8 ಸಂಸ್ಥೆಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡರು.
16 ಕೊಠಡಿಗಳಲ್ಲಿ ಮಾಹಿತಿ, ವಿನಿಮಯ: ಶೈಕ್ಷಣಿಕ ಮೇಳದಲ್ಲಿ ಒಟ್ಟು 16 ಕೊಠಡಿಗಳಲ್ಲಿ 18 ವಿವಿಧ ಸಂಸ್ಥೆಗಳು ತಮ್ಮ ತಮ್ಮ ಸಂಸ್ಥೆಗಳಿಗೆ ಸಂಬಂಧಿಸಿ ಮಾಹಿತಿ ವಿನಿಮಯ ಮಾಡಿಕೊಂಡರು. ಸುದ್ದಿ ಮಾಹಿತಿ ಟ್ರಸ್ಟ್ ಅರಿವು ಶಿಕ್ಷಣ ಮಾಹಿತಿ ಕೇಂದ್ರ ರೂಮ್ ನಂ.೧, Akshaya College Sampya, Puttur, ರೂಮ್ ನಂ.2, Sri Pragathi Vistara, College For Aviation & Management, ರೂಮ್ ನಂ.3, KVG College Of Engineering, Kurunjibag, Sullia ರೂಂ.4,Sampoorna Group Of Institution Bengaluru ರೂಮ್ ನಂ..5, Allen Neet Academy, Manasa Tower Circle, Kodailbail, Mangalore ರೂಮ್ ನಂ.6, HPR Nursing & Paramedical,
Science, Puttur ರೂಮ್ ನಂ.7, Government Of Tool Room And Training Center (GTTC), Baikampady Mangalore ರೂಮ್ ನಂ.9, Universal Group Of Institutions Bengalore ರೂಮ್ ನಂ.10 A, Aryabhata Paramedical College, Bengaloreರೂಮ್ ನಂ..10 B, Pragathi College of Nursing Science, Bolwar, Putturರೂಮ್ ನಂ.11, Indian Group Of Institution, Pumpwell, Mangaloreರೂಮ್ ನಂ.12, Lakshmi Institute Of Typing & Computer Darbe, Puttur ರೂಂ.13 A, Shree Sharadha Hindustani Sangeetha Vidyalaya, Nehru Nagara Puttur ರೂಮ್ ನಂ.13 B, GTEC Computer Education, Puttur ರೂಮ್ ನಂ.14 A, Academy For Creative Learning, (Deepa Book House, Puttur) ರೂಮ್ ನಂ.14 B, ಈಶ ವಿದ್ಯಾಲಯ ಪುತ್ತೂರು ರೂಮ್ ನಂ.16, ಮೊಜಂಟಿ, ಜೇನು, ಅಣಬೆ ಕೃಷಿ ಮಾಹಿತಿ ತರಬೇತಿ, ಮಳೆ ನೀರು ಕೊಯ್ಲು ಘಟಕ, ಉದ್ಯಮಶೀಲತೆ, ಅಭಿವೃದ್ಧಿ ಮಾಹಿತಿ ಕಾರ್ಯಗಾರ ರೂಮ್ ನಂ.8 ರಲ್ಲಿದೆ.
ಏ.13ರಂದೂ ಮೇಳ ಮುಂದುವರಿಯಲಿದೆ.
ಮಾಹಿತಿ ಕಾರ್ಯಗಾರ: ಮೇಳದ ಮೊದಲ ದಿನದ ಕಾರ್ಯಕ್ರಮದಲ್ಲಿ ಮೂರು ಮಾಹಿತಿ ಕಾರ್ಯಗಾರ ನೆರವೇರಿತು.ಪ್ರಾರಂಭದಲ್ಲಿ ಸಿಇಟಿ, ಎನ್‌ಇಇಟಿ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?, ಅಪರಾಹ್ನ ಪಿಯುಸಿ ನಂತರ ಮುಂದೇನು? ಹಾಗೂ ಸಂಜೆ ಇನ್‌ಸ್ಟಿಟ್ಯೂಟ್ ಒರಿಯಂಟೇಷನ್ ಎಂಬ ವಿಷಯದಲ್ಲಿ ಮಾಹಿತಿ ಕಾರ್ಯಗಾರ ನೆರವೇರಿತು. ತರಬೇತುದಾರರಾದ ಬೆಂಗಳೂರು ಅಲೆನ್ ಇನ್‌ಸ್ಟಿಟ್ಯೂಟ್‌ನ ಪ್ರಗ್ಯಾಢಾಕಾ, ಬೆಂಗಳೂರು ಅಕಾಡೆಮಿ ಕೋಚ್, ಯುನಿವರ್ಸಲ್ ಅಕಾಡೆಮಿಯ ಪ್ರಭುಲಿಂಗ ಬಿ.ಕೆ.ಕಾರ್ಯಾಗಾರ ನಡೆಸಿಕೊಟ್ಟರು.
ಇಂದು ಸಮಾರೋಪ
ಏ.13ರಂದು ಬೆಳಿಗ್ಗೆ 10.30ರಿಂದ 12 ಗಂಟೆಯ ತನಕ ವಿಶೇಷವಾಗಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ, ಪಿಯುಸಿ ನಂತರ ಮುಂದೇನು?, 12ರಿಂದ 1.30ರ ತನಕ ವೃತ್ತಿಪರ ಶಿಕ್ಷಣಗಳು ಮತ್ತು ಅದರ ಅವಕಾಶಗಳು, ಅಪರಾಹ್ನ 2ರಿಂದ 5 ಗಂಟೆಯ ತನಕ ಇನ್‌ಸ್ಟಿಟ್ಯೂಟ್ ಒರಿಯಂಟೇಷನ್ ನಡೆಯಲಿದೆ.ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|ನಿರೀಕ್ಷನ್ ಸಿಂಗ್ ಗೌಗಿ ಹಾಗೂ ಮಂಗಳೂರು ಜಿಟಿಟಿಸಿಯ ಪ್ರಾಂಶುಪಾಲ ಡಾ|ಲಕ್ಷ್ಮೀನಾರಾಯಣ ಸಿ.ಆರ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಲಿದ್ದಾರೆ.ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಶಿಕ್ಷಣ ಸಂಸ್ಥೆಗಳ ಮಾಹಿತಿ ಮತ್ತು ಸಂಪರ್ಕಕ್ಕಾಗಿ ಉಚಿತವಾಗಿ ನಡೆಯುತ್ತಿರುವ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿ, ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳುವಂತೆ ಸುದ್ದಿ ಮಾಹಿತಿ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.