ಅಪಾಯಕಾರಿ ಸ್ಥಿತಿಯಲ್ಲಿ ಕರ್ನಾಟಕ-ಕೇರಳ ಗಡಿ ಪ್ರದೇಶದ ಸುಳ್ಳಪದವು-ಮುಳ್ಳೇರಿಯ ಸಂಪರ್ಕ ರಸ್ತೆ – ರಸ್ತೆ ಮೇಲ್ದರ್ಜೆಗೇರಿಸಲು ಆಗ್ರಹ

0

*ಪುತ್ತೂರು- ಕಾಸರಗೋಡು ಸರಕಾರಿ ಬಸ್ ಆರಂಭಿಸಿ

ಬಡಗನ್ನೂರು: ಕರ್ನಾಟಕ ಕೇರಳ ಗಡಿ ಪ್ರದೇಶ ಸುಳ್ಳಪದವು -ಮುಳ್ಳೇರಿಯ ಸಂಪರ್ಕ ರಸ್ತೆಯ ಕಾಯರ್ ಪದವು ಎಂಬಲ್ಲಿ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು  ಹಳೆಯ ಸೇತುವೆ ಕೆಡವಿ ಹೊಸದಾಗಿ ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೇರಳ ಕರ್ನಾಟಕ ಸಂಪರ್ಕ ರಸ್ತೆ ಹರಿಕಾರ:
1980 ರಲ್ಲಿ ಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರಾದ ಜನಾರ್ದನ ಪೂಜಾರಿ ರವರ ನೇತೖತ್ವದಲ್ಲಿ  ಕೇರಳ ಕರ್ನಾಟಕ ಗಡಿ ಸಮಸ್ಯೆ ಬಗ್ಗೆಹರಿಸಿ ತಮ್ಮ ಕ್ಷೇತ್ರಾಭಿವೖದ್ಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಳಿಸಿ ಸೇತುವೆ ನಿರ್ಮಾಣಗೊಳಿಸುವ ಮೂಲಕ ಎರಡು ರಾಜ್ಯಗಳನ್ನು ಸಂಪರ್ಕ ಕಲ್ಪಿಸಿದ ಹರಿಕಾರ ಅನ್ನುವ ಹೆಗ್ಗಳಿಕೆ ಪಾತ್ರರಾದರು.

 45 ವರ್ಷ ಹಳೆಯ ಸೇತುವೆ:
ಸೇತುವೆ  ಸುಮಾರು 45 ವರ್ಷ ಹಳೆಯದಾಗಿದ್ದು ಸೇತುವೆಯ ಎರಡು ಭಾಗದಲ್ಲಿ ನಿರ್ಮಾಣಗೊಂಡ ತಡೆಗೋಡೆ ಮುರಿದು ಹೋಗಿದ್ದು ಮತ್ತು  ಸೇತುವೆ ಮೇಲೆ ದೊಡ್ಡ ದೊಡ್ಡ ಹೂಂಡ ಬಿದ್ದು  ವಾಹನ ಸಂಚಾರಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

ರಸ್ತೆ ಮೇಲ್ದರ್ಜೆಗೇರಿಸಲು ಆಗ್ರಹ
ಸುಳ್ಯಪದವು -ಕಾಯರ್ ಪದವು ಸುಮಾರು 1.5ಕಿ. ಮೀ ಸಂಪರ್ಕ ರಸ್ತೆ ಜಿ.ಪಂ ರಸ್ತೆಯಾಗಿದ್ದು ಅಗಲ ಕಿರಿದಾಗಿದ್ದು  45 ವರ್ಷಗಳ ಬಳಿಕ ಎಂ.ಡಿ.ಆರ್.ಟಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸಿಲಾಗಿದೆ. ಆದರೆ ಅಗಲೀಕರಣ ಪಡಿಸದೆ ಘನ ವಾಹನ ಚಲಾಯಿಸುವಲ್ಲಿ ಚಾಲಕರು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದ್ದು, ಜಿ. ಪಂ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣ ಪಡಿಸುವ ಆನಿವಾರ್ಯತೆ ಇದೆ. ಕೇರಳ ಭಾಗದ ಕಾಯರ್ ಪದವು -ಮುಳ್ಳೇರಿಯ ಹಾಗೂ ಕಾಯರ್ ಪದವು- ಬದಿಯಡ್ಕ ಎರಡೂ ರಸ್ತೆಗಳು ಅಗಲೀಕರಣಗೊಂಡು ಸಂಪೂರ್ಣ ಅಭಿವೃದ್ಧಿಗೊಂಡಿದೆ. ಸೇತುವೆ  ಕರ್ನಾಟಕ ಭಾಗಕ್ಕೆ ಸೇರಿದ್ದು ಆದುದರಿಂದ ಅಭಿವೃದ್ಧಿಯಲ್ಲಿ ಈ ಭಾಗದ ಸಂಸದರು, ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಸೂಕ್ತ ಕ್ರಮ ಕೖಗೊಂಡು ಸೇತುವೆ ನಿರ್ಮಾಣ ಪಡಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕ ಒಕ್ಕರಳಕೂಗು.

ಪುತ್ತೂರು- ಕಾಸರಗೋಡು ಸರಕಾರಿ ಬಸ್ ಆರಂಭಿಸಿ
ಕಳೆದ 5 ವರ್ಷದ ಮೊದಲು ಪುತ್ತೂರು- ಕಾಸರಗೋಡು ಸರಕಾರಿ ಬಸ್ ಸಂಚಾರ ಆರಂಭಗೊಂಡು ಸುಮಾರು ಒಂದು ವರ್ಷ ಕಾಲ ಬಸ್ ಸಂಚರಿಸುತ್ತಿತ್ತು. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ಇಂದಿನ ತನಕ ಪುತ್ತೂರು- ಕಾಸರಗೋಡು ಬಸ್ ಆರಂಭಗೊಂಡಿಲ್ಲ. ಸುಳ್ಯಪದವು ಈ ಭಾಗ ಕೇರಳ ಕರ್ನಾಟಕ ಗಡಿ ಪ್ರದೇಶವಾಗಿರುವುದರಿಂದ ಈ ಭಾಗದ ಹೆಚ್ಚು ಜನರು ಕಾಸರಗೋಡಿಗೆ ಹೋಗಬೇಕಾದ ಆನಿವಾರ್ಯತೆ ಇದೆ. ಈ ಭಾಗದಿಂದ ಕಾಸರಗೋಡು ಭಾಗಕ್ಕೆ ವಾಹನ ಸಂಚಾರ ಬಹಳ ವಿರಳ. ದಿನದಲ್ಲಿ ಮೂರು ಹೊತ್ತು ಮಾತ್ರ ಖಾಸಗಿ ಬಸ್ ಓಡಾಡುತ್ತಿದೆ. ಇದರಿಂದ ಸಾರ್ವಜನಿಕ ತೊಂದರೆ ಉಂಟಾಗುತ್ತಿದ್ದು, ಬಸ್ ಸಂಚಾರ ವ್ಯವಸ್ಥೆಯನ್ನು ಪುನಃ ಆರಂಭಿಸುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

1980ರಲ್ಲಿ  ಜನಾರ್ದನ ಪೂಜಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರ ಕಾಲದಲ್ಲಿ ಸೇತುವೆ ನಿರ್ಮಾಣ ಮಾಡಿ ಕೇರಳ ಕರ್ನಾಟಕ ರಸ್ತೆ ಸಂಪರ್ಕ ಕಲ್ಪಿಸಿದರು. ಈಗ ಸೇತುವೆಗೆ ಸುಮಾರು 45 ವರ್ಷ ತುಂಬಿದೆ. ಇಷ್ಟು ವರ್ಷ ಬಾಳಿಕೆ ಬಂದಿದೆ ಅದು ನಮ್ಮ ಪುಣ್ಯ, ಕಳೆದ ಕೆಲವು ವರ್ಷಗಳಿಂದ ಸೇತುವೆ ಎರಡು ಬದಿ ನಿರ್ಮಾಣಗೊಂಡ ತಡೆಗೋಡೆ ಮುರಿದು ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಂದು ನೋಡಿ ಹೋಗುತ್ತಾರೆಯೇ ಹೊರತು ಕಾಮಗಾರಿ ನಡೆಸುವ ಯಾವ ಲಕ್ಷಣ ಕಾಣುತ್ತಿಲ್ಲ. ಈ ಬಾರಿಯಾದರೂ ಸೇತುವೆ ನಿರ್ಮಾಣ ಮಾಡಿ ಕೇರಳ ಕರ್ನಾಟಕ ರಸ್ತೆ ಸಂಪರ್ಕ ಸುಗಮಗೊಳಿಸಬೇಕೆಂಬುದೇ ನಮ್ಮ ಆಗ್ರಹ.
ಶ್ರೀಧರ ಮಣಿಯಾಣಿ ಕಾಯರ್ ಪದವು
ಸಾರ್ವಜನಿಕರು

LEAVE A REPLY

Please enter your comment!
Please enter your name here