ಪುತ್ತೂರು : ನಗರಸಭಾ ವ್ಯಾಪ್ತಿಯ ಕಬಕ 1ನೇ ವಾರ್ಡ್ ಭಾಗ ಸಂಖ್ಯೆ 68ರ ರಕ್ತೇಶ್ವರಿ ಅಶ್ವತ್ಥ ಕಟ್ಟೆ ಬಳಿ 7 ಲಕ್ಷ ರೂ ವೆಚ್ಚದಲ್ಲಿ ರಸ್ತೆಗೆ ನಿರ್ಮಿತವಾದ ಇಂಟರ್ ಲಾಕ್ ಹಾಗು ಒಳಚರಂಡಿ ಇದರ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಅವರು ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಈ ವಾರ್ಡಿನಲ್ಲಿ ದಿನೇಶ್ ಕೆ ಅವರು ಶಾಸಕರಿಗೆ ಒತ್ತಡ ನೀಡಿ ಹಲವಾರು ಯೋಜನೆಗಳನ್ನು ತಂದು ಕೊಟ್ಟಿದ್ದಾರೆ. ಈ ವಾರ್ಡಿನ ನಗರಸಭಾ ಸದಸ್ಯರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳಿಧರ ರೈ, ಪುತ್ತೂರು ಪೂಡ ಸದಸ್ಯ ನಿಹಾಲ್ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಮಹಾಲಿಂಗೇಶ್ವರ ವ್ಯವಸ್ಥಾಪನ ಸಮಿತಿ ಸದಸ್ಯೆ ಕೃಷ್ಣವೇಣಿ, ಆರ್ಯಾಪು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ರಂಜಿತ್ ಬಂಗೇರ, ನಗರಸಭಾ ಸದಸ್ಯ ದಿನೇಶ ಕೆ ಶೇವಿರೆ, ರಕ್ತೇಶ್ವರಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ಶೇವಿರೆ, ಬೂತ್ ಅಧ್ಯಕ್ಷ ಹರಿಪ್ರಸಾದ್,ವಿನಾಯಕ ಪ್ಯಾಬ್ರಿಕೇಟರ್ಸ್, ರಕ್ತೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಶ್ಯಾಮಪ್ರಸಾದ್ ,ಸುಜಿತ್ ಶೆಟ್ಟಿ, ವಾರಿಜ ಶೇವಿರೆ, ಆನಂದ ನಾಯಕ್, ಶೇಖರ, ಪುತ್ತೂರು ಆರೋಗ್ಯ ರಕ್ಷ ಸಮಿತಿ ಸದಸ್ಯ ಚಂದ್ರಶೇಖರ, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ, ಈಶ್ವರ ನಾಯ್ಕ, ಅನಿಲ್ ಸುವರ್ಣ, ಬೂತ್ ಪದಾಧಿಕಾರಿಗಳಾದ ಉಪಾಧ್ಯಕ್ಷ ಕುಮಾರ್ ದೇವಾಂಗ, ಪ್ರಧಾನ ಕಾರ್ಯದರ್ಶಿ ನವೀನ್ ಕೆ ಶೇವಿರೆ, ಕೋಶಾಧಿಕಾರಿ ಶೋಭಗೋಪಾಲ್, ಸದಸ್ಯರಾದ ಕುಸುಮ, ಹರೀಶ, ಜಿನ್ನಪ್ಪ ನಾಯ್ಕ, ಕೃಷ್ಣಪ್ಪ ನಾಯ್ಕ, ಬೇಬಿ ಶೇವಿರೆ, ಜಾನಕಿ ಶೇವಿರೆ ಉಪಸ್ಥಿತರಿದ್ದರು.
ಕಲಾವಿದ ಕೃಷ್ಣಪ್ಪ ಸ್ವಾಗತಿಸಿ, ನಿರೂಪಿಸಿದರು. ನಗರಸಭಾ ಸದಸ್ಯ ದಿನೇಶ್ ಕೆ ಶೇವಿರೆ ವಂದಿಸಿದರು.