ಪುತ್ತೂರು: ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲ್ಲೂಕು ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆದಿ ದ್ರಾವಿಡ ಸಂಘದ ತಾಲ್ಲೂಕು ಕಚೇರಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಆದಿ ಸಂಘದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸೋಮನಾಥ್ ಉಪ್ಪಿನಂಗಡಿ ಸಂಘದ ಮಾಜಿ ಜಿಲ್ಲಾಧ್ಯಕ್ಷರು ಮೋಹನ್ ನೆಲ್ಲಿಗುಂಡಿ, ಸಂಘದ ತಾಲ್ಲೂಕು ಅಧ್ಯಕ್ಷ ಬಾಬು ಮರಿಕೆ, ಸಂಘದ ಪ್ರಧಾನ ಕಾರ್ಯದರ್ಶಿ ಕೆ ಕೆ ಮಾಸ್ಟರ್ ಈಶ್ವರಮಂಗಲ, ಸಂಘದ ಯುವವೇದಿಕೆಯ ಕ್ರೀಡಾ ಕಾರ್ಯದರ್ಶಿ ಸತೀಶ್ ಪರ್ಲಡ್ಕ, ಸಂಘಟನಾ ಕಾರ್ಯದರ್ಶಿ, ಶಶಿಕೆರೆಮೂಲೆ ತಾಲ್ಲೂಕು ಪದಾಧಿಕಾರಿಗಳಾದ ರಂಜನ್ ಕಾವು, ಸಂತೋಷ್ ಕುಮಾರ್ ಅಮ್ಚಿನಡ್ಕ, ಪ್ರಕಾಶ್ ಹಾರಡಿ, ಶಿವಾನಂದ್ ಸಿದ್ಯಾಳ ಹಲವು ಮಂದಿ ಉಪಸ್ಥಿತರಿದ್ದರು.