ಪುತ್ತೂರು: ಪುತ್ತೂರಿನ ಸ್ವರ ಮಾಧುರ್ಯ ಸಂಗೀತ ಬಳಗದ ವತಿಯಿಂದ ಡಾ. ಹರ್ಷ ಕುಮಾರ್ ರೈ ಮಾಡಾವು ಇವರ ಜನ್ಮ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಬಾಲ ಕಲಾವಿದೆ ಸೋನಿಕ ಜನಾರ್ದನ್ ಮತ್ತು ಕಾವ್ಯಶ್ರೀ ಗಡಿಯಾರ ಇವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ಇತಿಹಾಸ ಪ್ರಸಿದ್ಧ ಬಲ್ನಾಡು ದಂಡ ನಾಯಕ ಉಳ್ಳಾಲ್ತಿ ದೈವ – ದೇವರ ಭೇಟಿಯ ಕುರಿತ ತುಳು ವೀಡಿಯೋ ಆಲ್ಬಂ ಹಾಡು
“ಸತ್ಯೋದ ಬೊಲ್ಪು ಮೂಡುಂಡುಯೇ” ಎ.15 ರಂದು ರಾತ್ರಿ 7.30 ಕ್ಕೆ ಪುತ್ತೂರು ನಟರಾಜ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿದೆ. ಡಾ.ಹರ್ಷ ಕುಮಾರ್ ರೈ ಮಾಡಾವು ಇವರ ಜನ್ಮ ಕ್ರಿಯೇಷನ್ಸ್ನಲ್ಲಿ ನಿರ್ಮಾಣಗೊಂಡ ಈ ಹಾಡಿಗೆ ಜನಾರ್ದನ್ ಪುತ್ತೂರುರವರ ಸಾಹಿತ್ಯವಿದ್ದು ಹಿನ್ನೆಲೆ ಸಂಗೀತ ಮತ್ತು ರೆಕಾರ್ಡಿಂಗ್ ಅಶ್ವಿನ್ ಪುತ್ತೂರು ಸವಿ ಸಂಗೀತ ಸ್ಟುಡಿಯೋ ನೀಡಿದ್ದಾರೆ. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರವಿದ್ದು ಚಿದಾನಂದ ಬೈಲಾಡಿ ನೋಟರಿ ವಕೀಲರು ,ಮಹೇಶ್ ಕಜೆ ವಕೀಲರು,ಭಾಸ್ಕರ್ ಕೋಡಿಂಬಳ ನೋಟರಿ ವಕೀಲರು,ಮನೋಹರ ಕೆ.ವಿ ವಕೀಲರು,ಸುರೇಶ್ ರೈ ಪಡ್ದoಬೈಲು ವಕೀಲರು, ಹರೀಶ್ ಕುಮಾರ್ ಬಳಕ್ಕ ವಕೀಲರು, ದೀಪಕ್ ಬೊಳ್ವರ್ ವಕೀಲರು, ಜಯಪ್ರಕಾಶ್ ಪುತ್ತೂರು ವಕೀಲರು, ವಿಜೇತ್ ಮಾಚಿಲ ವಕೀಲರು,ಉದಯ ಚಂದ್ರ ಕೆ ವಕೀಲರು, ರಾಕೇಶ್ ಜೆ. ಮಸ್ಕರೇನಸ್ ವಕೀಲರು ಹಾಗೇ ಪತ್ರಕರ್ತ ಸಿಶೇ ಕಜೆಮಾರ್ ರವರ ಮಾಧ್ಯಮ ಸಹಕಾರದಲ್ಲಿ ಆಲ್ಬಂ ಸಾಂಗ್ ಮೂಡಿಬಂದಿದೆ.