ಪುತ್ತೂರು: ದರ್ಬೆ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ “ಅಭಿವ್ಯಕ್ತ -2025ಮಕ್ಕಳ ಬೇಸಿಗೆ ಶಿಬಿರದ ಐದನೇ ದಿನವು ಪತಂಜಲಿ ಯೋಗ ಸಮಿತಿಯ ಜ್ಞಾನೇಶ್ ವಿಶ್ವಕರ್ಮ,ಮುರಳೀಧರ ಆಚಾರ್ಯ, ಅಶ್ವಿನಿ , ಇವರ ಧ್ಯಾನ ಮತ್ತು ಯೋಗಾಸನ ತರಬೇತಿಯೊಂದಿಗೆ ಆರಂಭಗೊಂಡಿತು.
ಸಭಾಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ ಶಂಕರನಾಯಕ್ ಆಜೇರು , ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು ನಿರ್ದೇಶಕಿ ದೇವಕಿ ಸಂಟ್ಯಾರು ,ಹಿರಿಯರಾದ ವಾಸುದೇವ ಕಾಮತ್ ಸಂಟ್ಯಾರ್ ,ಉಪನ್ಯಾಸಕಿ ಅಶ್ವಿನಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು .
ಬಳಿಕ ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮಿ ಸಂಪ್ಯ ವಿವಿಧ ಚಟುವಟಿಕೆಗಳ ಮೂಲಕ ಮೋಜಿನ ಗಣಿತದ ಕಾರ್ಯಾಗಾರ ನಡೆಸಿಕೊಟ್ಟರು.ನಂತರ ಸಂಪನ್ಮೂಲ ವ್ಯಕ್ತಿಯಾದ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ,ಮತ್ತು ಶಿಕ್ಷಕಿ ಶ್ವೇತ ‘ಬದುಕಿನಲ್ಲಿ ಶಿಸ್ತು” ಎಂಬ ವಿಷಯವನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸಿದರು .

ಮಲ್ಲಿಕಾ ಕುಕ್ಕಾಡಿ ಚಿತ್ರಕಲೆ ,ಕ್ರಾಪ್ಟ್ ,ಅಭಿನಯ ಗೀತೆಯ ಮೂಲಕ ಪುಟಾಣಿಗಳನ್ನು ರಚಿಸಿದರು. ಅಪರಾಹ್ನದ ನಂತರ ಶ್ರೀವತ್ಸ ವಿರಾಜಪೇಟೆ ‘ವಿಜ್ಞಾನದೊಂದಿಗೆ -ನಾವು ನೀವು “ವಿಷಯದ ಕುರಿತು ದೃಕ್ ಶ್ರವಣೋಪಕರಣ ಬಳಸಿ ಅತ್ಯಂತ ಪರಿಣಾಮಕಾರಿ ಕಾರ್ಯಾಗಾರ ನಡೆಸಿಕೊಟ್ಟರು. ಭವ್ಯಶ್ರೀ ಮರಿಕೆ, ಯಶೋಧ ಮರಿಕೆ ಸಹಕರಿಸಿದರು .ಶಿಬಿರ ಸಂಯೋಜಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು .