ಮಂಚಿ: ಕ್ಯಾಂಪ್ಕೋ ಸಂಸ್ಥೆಯ ʼಸಾಂತ್ವನʼ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮಂಚಿ ಶಾಖೆಯ ಸಕ್ರಿಯ ಸದಸ್ಯ ಸುರೇಶ ಕುಮಾರ್ ಕೆ ಅವರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಧನಸಹಾಯ ₹ 45318/- ನ್ನು ಕ್ಯಾಂಪ್ಕೋ ಸಂಸ್ಥೆಯ ಮಾನ್ಯ ನಿರ್ದೇಶಕರಾದ ಯಸ್ ಆರ್ ಸತೀಶ್ಚಂದ್ರ ರವರು ಫಲಾನುಭವಿಗೆ ಏ.12ರಂದು ಮಂಚಿ ಶಾಖೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಪ್ರಾಂತೀಯ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ, ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೇಶವ ರಾವ್, ಮಂಚಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ಕಲ್ಲಾಡಿ, ಪ್ರಮುಖರಾದ ರಮೇಶ್ ರಾವ್ ಪತ್ತುಮುಡಿ, ಮಂಚಿ ಶಾಖಾ ಪ್ರಭಂದಕ ಸಂತೋಷ್, ಶಾಖಾ ಸಿಬ್ಬಂದಿಗಳು ಹಾಗು ಸ್ಥಳೀಯರು ಉಪಸ್ಥಿತರಿದ್ದರು.