ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮಾರಾವ್ ಅಂಬೇಡ್ಕರ್ ರವರ 134 ನೆಯ ಜನ್ಮ ದಿನಾಚರಣೆಯನ್ನು ಆಚರಿಸಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ಎಸ್ ಡಿ ಎಂ ಸಿ ಅದಕ್ಷರಾದ ರವಿಚಂದ್ರ ಇವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದರು. ಶಾಲಾ ಮುಖ್ಯಗುರು ತಾರಾನಾಥ ಪಿ ಇವರು ಅಂಬೇಡ್ಕರ್ ರವರ ಬಾಲ್ಯ ಜೀವನವನ್ನು ಅವರ ಶೈಕ್ಷಣಿಕ ಬದುಕನ್ನು ವಿವರಿಸಿದರು.
ಸಂವಿಧಾನದ ದಾಖಲಿಸಿದ ಸಂಗತಿಗಳನ್ನು ವಿವರಿಸಲಾಯಿತು.ಶಾಲಾ ಶಿಕ್ಷಕರಾದ ಹರಿಣಾಕ್ಷಿ, ಶೋಭಾ,ಶ್ರೀಲತಾ, ಕವಿತಾ,ಹೇಮಾವತಿ,ಶಿಲ್ಪರಾಣಿ, ಸೌಮ್ಯ ಉಪಸ್ಥಿತರಿದ್ದರು.