ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಷು ಆಚರಣೆ ಅಂಗವಾಗಿ ಎ.14 ಬೆಳಗ್ಗೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವರಿಗೆ ಕಣಿ ಪೂಜೆ, ನಿತ್ಯ ಪೂಜೆ ನಡೆಯಿತು. ಬಳಿಕ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ಸಾಂಸ್ಕೃತಿಕ ಸಮಿತಿ ವತಿಯಿಂದ ಜಿಲ್ಲಾ ನುರಿತ ಯಕ್ಷಗಾನ ಕಲಾವಿದರಿಂದ ಜಾಂಬವತಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣಿ ನಡೆಯಿತು.
ಈ ಸಂದರ್ಭದಲ್ಲಿ ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಚಂದ್ರಶೇಖರ ಅಳ್ವ ಗಿರಿಮನೆ, ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು ಶ್ರೀ ಕೂವೆ ಶಾಸ್ತಾರ ಸಾಂಸ್ಕೃತಿಕ ಸಮಿತಿ ಸದಸ್ಯ ಸುಬ್ಬಯ್ಯ ರೖೆ ಹಲಸಿನಡಿ, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೖೆ ಜಾರಾತ್ತಾರು, ಬಡಗನ್ನೂರು ಗ್ರಾ. ಪಂ ಸದಸ್ಯ ಸಂತೋಷ ಅಳ್ವ ಗಿರಿಮನೆ, ಸ್ಥಳೀಯರಾದ ಅನಂತ ಮಾಸ್ಟರ್ ಮೂಡಾಯೂರು, ಉದಯ ಕುಮಾರ್ ಪಡುಮಲೆ, ಪುರಂದರ ರೖೆ ಕುದ್ಕಾಡಿ, ಬಾಲಕೃಷ್ಣ ರೖೆ ಏರಾಜೆ, ಪಡುಮಲೆ ಶಾಸ್ತಾರ ಸ್ಫೋಟ್ಸ್ ಕ್ಲಬ್ ನ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಕೋಶಾಧಿಕಾರಿ ಶಂಕರಿ ಪಟ್ಟೆ,ಬಡಗನ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.