ಪುತ್ತೂರು: ಪುಟಾಣಿ ಬಾಲಕ ವಿಹಾನ್ ಲೋಹಿತ್ ಹಾಡಿರುವ ಭಕ್ತಿ ಪ್ರಧಾನ ದಾಸರ ಪದ ಎ.14ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿದೆ.
ಕೊಕ್ಕಡ ಗ್ರಾ.ಪಂ.ನಿಕಟಪೂರ್ವಧ್ಯಕ್ಷರು ಯೋಗೀಶ್ ಆಳಂಬಿಲ ಬಿಡುಗಡೆಗೊಳಿಸಿ ಶುಭ, ಹಾರೈಸಿದರು. ಕೋಮರ ಕುಂಜಿ ಕಣ್ಣನ್, ಸಾವಿತ್ರಿ, ವಿಶ್ವನಾಥ ಪಾಟಾಳಿ ಅರಂತನಡ್ಕ, ವಿಶಾಲಾಕ್ಷಿ, ವಿಶ್ವಕಲಾನಿಕೇತನ ನೃತ್ಯ ಶಾಲಾ ಗುರು ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ, ಛಾಯಾಗ್ರಾಹಕ ಹಾಗೂ ಚಲನಚಿತ್ರ ನಿರ್ದೇಶಕ ಕರೋಪಾಡಿ ಅಕ್ಷಯ್ ನಾಯಕ್, ರಂಜಿನಿ ಲೋಹಿತ್, ವಿಹಾನ್ ಲೋಹಿತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಹಾಡಿಗೆ ಸಾಥ್ವಿಕ್ ಪಡಿಯಾರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಕೊಳಲು ಸಾಥ್ವಿಕ್ ಪ್ರಭು, ವಾಯಲಿನ್‌ನಲ್ಲಿ ಜಗದೀಶ ಕುಂಬ್ರ, ಮೃದಂಗ & ಮೋರ್ಸಿಗ್‌ನಲ್ಲಿ ಬಾಲಕೃಷ್ಣ ಹೊಸಮನೆ ಸಹಕರಿಸಿರುತ್ತಾರೆ.
ವಿಹಾನ್ ಲೋಹಿತ್ 8 ವರ್ಷದ ಬಾಲಕನಾಗಿದ್ದು, ಸಂಗೀತ ಮತ್ತು ಕಲೆಯ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದು, ಪ್ರಸ್ತುತ ಕರ್ನಾಟಕ ಸಂಗೀತ, ಪಿಟೀಲು ಮತ್ತು ಕೀಬೋರ್ಡ್ ಕಲಿಯುತ್ತಿದ್ದಾನೆ, ಜೊತೆಗೆ ಫುಟ್ಬಾಲ್, ಈಜು ಮತ್ತು ಲೈವ್ ಸ್ಕೆಚ್ ಕಲಾವಿದನಾಗಿರುತ್ತಾನೆ.