ಐಕ್ಯಂ ಅಕಾಡೆಮಿ ಆಪ್ ಆರ್ಟ್ಸ್ ನಲ್ಲಿ ಬೇಸಿಗೆ ಶಿಬಿರ

0

ಪುತ್ತೂರು: ಭಾರತನಾಟ್ಯ ಮತ್ತು ಚಿತ್ರಕಲಾ ತರಬೇತಿಯನ್ನು ನೀಡುವ ಐಕ್ಯಂ ಅಕಾಡೆಮಿ ಆಪ್ ಆರ್ಟ್ಸ್ ನಲ್ಲಿ ಮಕ್ಕಳಿಗಾಗಿ ಒಂದು ವಾರದ ಬೇಸಿಗೆ ಶಿಬಿರ ನಡೆಯಿತು.‌ ಈ ಶಿಬಿರವು ‘ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್’ ನಲ್ಲಿ ಶಿಕ್ಷಕಿ ನಿಖಿತಾ ಪಾಣಾಜೆ ಅವರ ನೇತ್ರಾವತಿಯಲ್ಲಿ ನಡೆಯಿತು.

ಪುತ್ತೂರಿನ ಬೈಪಾಸ್ ರಸ್ತೆಯ ಎಂ. ಆರ್ . ಪಿ. ಎಲ್ ಪೆಟ್ರೋಲ್ ಪಂಪ್ ನ ಎದುರು ಇರುವ ಈ ಅಕಾಡೆಮಿಯಲ್ಲಿ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಶಿಬಿರದಲ್ಲಿ ಕಲಿಯುವ ನಿಟ್ಟಿನಲ್ಲಿ ಗ್ಲಾಸ್ ಪೇಂಟಿಂಗ್, ಕೀ ಚೈನ್, ಕ್ಲೇ ಆರ್ಟ್, ಪೇಪರ್ ಕ್ರಾಫ್ಟ್, ಫ್ರಿಡ್ಜ್ ಮ್ಯಾಗ್ನೆಟ್, ಸ್ಯಾಂಡ್ ಆರ್ಟ್ಅನ್ನು ಶಿಬಿರದಲ್ಲಿ ಮಕ್ಕಳಿಗೆ ನಡೆಸಲಾಗಿತ್ತು.


ಸಮಾರೋಪ ಸಮಾರಂಭದಲ್ಲಿ ಅಥಿತಿಯಾಗಿ ಆಗಮಿಸಿದ ಎ. ವಿ. ಜಿ ಶಾಲೆಯ ಅಧ್ಯಕ್ಷರು ಹಾಗು ಬಾಲಾಜಿ ಪೇಂಟ್ಸ್ ಇದರ ಮಾಲಕ ವೆಂಕಟ್ರಮಣ ಕಳುವಾಜೆ ಮಕ್ಕಳಿಗೆ ಆಶೀರ್ವದಿಸಿ ಶುಭನುಡಿಗಳನ್ನು ಆಡಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರವನ್ನು ನೀಡಲಾಯಿತು. ಅಲ್ಲದೇ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ್ ಇವರು ನಡೆಸುವ ಮೊದಲ ಹಂತದ ಪ್ರಾರಂಭಿಕ್ ಭರತನಾಟ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here