ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ

0

ಪುತ್ತೂರು: ಪಿಗ್ಮಿ ಸಂಗ್ರಾಹಕ, ಮುಕ್ವೆ ನಿವಾಸಿ ವಿಜಯ್ ರೆಬೆಲ್ಲೋ (48ವ.) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಅವಿವಾಹಿತರಾಗಿರುವ ವಿಜಯ್ ರೆಬೆಲ್ಲೋರವರು ಮುಕ್ವೆ  ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಸೋಮವಾರ ರಾತ್ರಿ ಮಲಗಿದ್ದವರು ಬೆಳಿಗ್ಗೆ ಏಳಲಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಯಾಕೆ ಬಂದಿಲ್ಲವೆಂದು ವಿಜಯ್ ರವರ ಮೊಬೈಲಿಗೆ ಗ್ರಾಹಕರು ಕರೆ ಮಾಡಿದ್ದರು. ಆದರೆ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಗ್ರಾಹಕರು ಮನೆ ಮಾಲಕರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.

ಮನೆ ಮಾಲಕರು ವಿಜಯ್ ರವರ ರೂಮಿಗೆ ಹೋಗಿ ನೋಡಿದಾಗ ವಿಜಯ್ ರವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಅವಿವಾಹಿತರಾಗಿರುವ ವಿಜಯ್ ರೆಬೆಲ್ಲೋರವರು ಕಳೆದ ಹಲವು ವರ್ಷಗಳಿಂದ ಕಣ್ಣನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಒಡಿಯೂರು ವಿವಿದ್ದೋದ್ದೇಶ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ವಿಜಯ್ ರವರು ತಂದೆ ಗಾಯಕ ಕಾಡುಮನೆ ನಿವಾಸಿ ಚಾಲ್ಸ್೯ ರೆಬೆಲ್ಲೋ, ತಾಯಿ ಲೂಸಿ ರೆಬೆಲ್ಲೋ, ಸಹೋದರ ಮನೋಜ್ ಡ್ರೈವಿಂಗ್ ಸ್ಕೂಲ್ ಮಾಲಕ ಮನೋಜ್ ರೆಬೆಲ್ಲೋ, ಅತ್ತಿಗೆ ಬೀನಾರವರನ್ನು ಅಗಲಿದ್ದಾರೆ. ವಿಜಯ್ ರವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

LEAVE A REPLY

Please enter your comment!
Please enter your name here