ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪೇಟ ಸವಾರಿಯಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲೂ ಕಬಕ ಪುತ್ತೂರು ರೈಲು ಹಳಿಯನ್ನು ದಾಟಿ, ರೈಲ್ವೇ ಪ್ಲ್ಯಾಟ್ ಫಾರ್ಮ್‌ನಲ್ಲೇ ಶ್ರೀ ದೇವರ ಪೇಟೆ ಸವಾರಿ ಎ.15ರ ರಾತ್ರಿ ನಡೆಯುತ್ತದೆ.
ಎ.15ರಂದು ಶ್ರೀ ದೇವರ ಪೇಟೆ ಸವಾರಿ ಬನ್ನೂರು, ಪಡೀಲ್ ಕಡೆ ಹೋಗಿ ರೈಲ್ವೇ ನಿಲ್ದಾಣದ ಮುಂದಿರುವ ಕೊನೆಯ ಕಟ್ಟೆಯ ಪೂಜೆ ಸ್ವೀಕರಿಸಲು ನಿಲ್ದಾಣದ ಬಳಿಯ ಮೂರು ರೈಲ್ವೇ ಹಳಿಯನ್ನು ದಾಟಿ, ಬಳಿಕ ರೈಲ್ವೇ ಪ್ಲ್ಯಾಟ್ ಫಾರ್ಮ್‌ನಲ್ಲೇ ಮುಂದೆ ಸಾಗಿ ರೈಲ್ವೇ ನಿಲ್ದಾಣದ ದ್ವಾರದ ಮೂಲಕ ಹೊರಗೆ ಬಂದು ಕಟ್ಟೆ ಸ್ವೀಕರಿಸುತ್ತಾರೆ.