ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು… – ಜೇಸಿಐ ವತಿಯಿಂದ ಜಾತ್ರೆ ಗದ್ದೆಯಲ್ಲಿ “ನಳಪಾಕ -2025ಕ್ಕೆ ಚಾಲನೆ…

0

ಮಳಿಗೆ ಉದ್ಘಾಟಿಸಿದ ನಳಪಾಕ ಆರಂಭದ ರೂವಾರಿ ಕೇಶವ ಪ್ರಸಾದ್ ಮುಳಿಯ

ರೂಮಾಲಿ ರೋಟಿ, ತಾಜಾ ಹಣ್ಣಿನ ರಸ , ಐಸ್ ಕ್ರೀಮ್ ಹಾಗೂ ಪಾನಿಪುರಿ ಇಲ್ಲಿನ ಸ್ಪೆಶಲ್…

ಪುತ್ತೂರು: ಸ್ವಚ್ಚ, ಸ್ವಾದಿಷ್ಠಭರಿತ ಜೊತೆಗೆ ರುಚಿಯಾದ ರುಮಾಲಿ ರೋಟ, ತಾಜಾ ಹಣ್ಣಿನ ರಸಗಳು, ನ್ಯಾಚುರಲ್ ಐಸ್ ಕ್ರೀಂ ಜೊತೆಗೆ ಬಾಯ್ತುಂಬಾ ನೀರೂರಿಸುವ ಶುಚಿ -ರುಚಿಯಾದ ಪಾನಿಪುರಿ ಇವನ್ನೆಲ್ಲಾ ಒಳಗೊಂಡ ಪುತ್ತೂರು ಜೇಸಿಐ ಇದರ ಹದಿನೆಂಟನೇಯ ವರ್ಷದ ಜೇಸಿ ನಳಪಾಕ – 2025 ಏ.15ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆ ಗದ್ದೆಯಲ್ಲಿ ಪ್ರಾರಂಭಗೊಂಡಿದ್ದು, ಏ.18ರ ತನಕ ಮಳಿಗೆ ವ್ಯವಹರಿಸಲಿದೆ.


ನಳಪಾಕ ಮಳಿಗೆ ಉದ್ಘಾಟನೆಯನ್ನು ಏಳಿಗೆಯನ್ನು 2008ರಲ್ಲಿ ಮೊದಲ ಬಾರಿಗೆ ಆರಂಭಿಸಿ, ಎಲ್ಲಾ ವರ್ಗದ ಜನತೆಯ ಮೆಚ್ಚಿನ ಆಹಾರ ಮಳಿಗೆಯೆಂದು ಖ್ಯಾತಿ ಪಡೆಯುವಲ್ಲಿ ಕಾರಣಕರ್ತರಾದಂತಹ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಇದರ ಮಾಜಿ ಅಧ್ಯಕ್ಷರು ಹಾಗೂ ಜೇಸಿಐ ನ ಪೂರ್ವಾಧ್ಯಕ್ಷರಾದ ಸ್ವರ್ಣೋದ್ಯಮಿ ಮುಳಿಯ ಕೇಶವ ಪ್ರಸಾದ್ ದೀಪ ಪ್ರಜ್ವಲನೆ ಮೂಲಕ ಮಳಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 2008 ರಲ್ಲಿ ನಾನು ಜೇಸಿ ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ಶುಭಾರಂಭಗೊಂಡಿರುವ ಜೇಸಿ ನಳಪಾಕವು ಇಂದು ಹದಿನೆಂಟನೇಯ ಸಂಭ್ರಮಕ್ಕೆ ಸಾಕ್ಷಿಯಾಗಿ ಪಕ್ವಕ್ಕೆ ಬಂದು ನಿಂತಿರುವುದು ಸಂತಸದ ವಿಚಾರ. ಖಂಡಿತವಾಗಿಯೂ ಈ ನಳಪಾಕ ಮಳಿಗೆ ಮುಂದೆ ಸಾಗುವಲ್ಲಿ ಸಂದೇಹವಂತೂ ಇಲ್ಲ. ಯಾವುದೇ ರೀತಿಯ ವ್ಯವಹಾರದ ಪ್ರಾರಂಭವೂ ಅವಶ್ಯಕತೆಯ ಮೇಲೆ ನಿಂತಿದ್ದು , ಜೇಸಿಐ ಇದರ ಸಮಾಜಮುಖಿ ಸೇವೆ – ಕಾರ್ಯಗಳಿಗೆ ಜನತೆಯ ಬೆಂಬಲ, ಸಹಕಾರ ಇನ್ನಷ್ಟೂ ಸಿಗುತ್ತಿರಲಿಯೆಂದು ಹಾರೈಸಿದರು.


ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಪನಾ ಸಮಿತಿ ಸದಸ್ಯ ವಿನಯ್, ಜೇಸಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ , ಜೇಸಿ ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ, ಕಾರ್ಯದರ್ಶಿ ಮನೋಹರ್ , ಜೇಸಿ ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ , ಜೇಸಿ ಲೇಡಿ ಕೋ ಆರ್ಡಿನೇಟರ್ ಆಶಾ ಮೋಹನ್ , ಜೇಸಿ ಪೂರ್ವಾಧ್ಯಕ್ಷರುಗಳಾದ ಕೃಷ್ಣ ಪ್ರಸಾದ್ ಆಳ್ವ , ಜಗನ್ನಾಥ್ ರೈ , ರವಿ ಮುಂಗ್ಲಿಮನೆ ,ಪುರುಷೊತ್ತಮ ಶೆಟ್ಟಿ , ವಿಶ್ವ ಪ್ರಸಾದ್ ,ಸ್ವಾತಿ ಶೆಟ್ಟಿ ,ಶಶಿರಾಜ್ ರೈ ,ಸೂರಪ್ಪ ಗೌಡ ಇವರುಗಳ ಸಹಿತ ಗುರುರಾಜ್ ಅಲಂಕಾರು , ಜೇಸಿ ಅನೂಪ್ , ಕಾರ್ಯಕ್ರಮ ನಿರ್ವಾಹಕರುಗಳಾದ ಜೇಸಿ ಸತೀಶ್ , ಜೇಸಿ ಶರತ್ , ಜೇಸಿ ಸಂದೇಶ್ ರೈ ಸಹಿತ ಜೇಸಿಐ ಬಂಧುಗಳು ಹಾಜರಿದ್ದರು. ಜೇಸಿ ಅಧ್ಯಕ್ಷ ಭಾಗ್ಯೇಶ್ ರೈ ಪ್ರಾಸ್ತಾವಿಕ ಮಾತನಾಡಿದರು. ಜೇಸಿಐ ನ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿದ್ದರು.

LEAVE A REPLY

Please enter your comment!
Please enter your name here