ಪುತ್ತೂರು: ಬಲ್ನಾಡು ದಂಡನಾಯಕ ಉಳ್ಳಾಲ್ತಿ ಅಮ್ಮನವರ ಹಾಗೂ ದೈವ ದೇವರ ಭೇಟಿಯ ಬಗ್ಗೆ ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಜನಾರ್ದನ್ ಪುತ್ತೂರು ಸಾಹಿತ್ಯ ಬರೆದಿರುವ ಡಾ.ಹರ್ಷ ಕುಮಾರ್ ರೈ ಮಾಡಾವುರವರ ಜನ್ಮ ಕ್ರಿಯೇಷನ್ಸ್ನಲ್ಲಿ ನಿರ್ಮಾಣಗೊಂಡಿರುವ ‘ಸತ್ಯೊದ ಬೊಲ್ಪು ಮೂಡುಂಡುಯೇ..’ ತುಳು ಆಲ್ಬಂ ಸಾಂಗ್ ಪುತ್ತೂರು ಜಾತ್ರೆಯ ಪ್ರಯುಕ್ತ ಎ.15ರಂದು ಸಂಜೆ ಪುತ್ತೂರು ನಟರಾಜ ವೇದಿಕೆಯಲ್ಲಿ ಬಿಡುಗಡೆಗೊಂಡಿತು. ಸ್ವರ ಮಾಧುರ್ಯ ಸಂಗೀತ ಬಳಗದ ವತಿಯಿಂದ ಬಿಡುಗಡೆಗೊಂಡ ಈ ಆಲ್ಬಂ ಸಾಂಗ್ ಅನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ವಿನಯ ಸುವರ್ಣರವರು ಬಿಡುಗಡೆಗೊಳಿಸಿದರು. ಪುತ್ತೂರಿನ ವಕೀಲರಾದ ಮಹೇಶ್ ಕಜೆಯವರು ಮಾತನಾಡಿ, ಉಳ್ಳಾಲ್ತಿ ಅಮ್ಮನಿಗೆ ಮೆಚ್ಚುಗೆಯಾಗುವ ಹಾಡು ಇದಾಗಿದ್ದು ಒಳ್ಳೆಯ ಸಾಹಿತ್ಯ ಹಾಡಿನಲ್ಲಿದೆ. ಕಲಾವಿದರ ಕುಟುಂಬದಿಂದ ಬಂದಿರುವ 5 ರ ಪುಟ್ಟ ಬಾಲೆ ಸೋನಿಕಾ ಜನಾರ್ದನ್ ಹಾಗೂ ಪುಟ್ಟ ಹುಡುಗಿಗೆ ಉಳ್ಳಾಲ್ತಿ ಅಮ್ಮನವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕರು, ಹಿರಿಯರಾದ ಸುರೇಶ್ ಶೆಟ್ಟಿಯವರು ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಮತ್ತು ಕಾವ್ಯಶ್ರೀ ಗಡಿಯಾರ್ರವರುಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಮಹಾಬಲ ರೈ ವಳತ್ತಡ್ಕ, ಈಶ್ವರ್ ಬೇಡೆಕಾರ್, ಕೃಷ್ಣವೇಣಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಹರಿಣಿ ಪುತ್ತೂರಾಯ, ಶುಭಾ ರೈ, ಡಾ.ರಾಜೇಶ್ ಬೆಜ್ಜಂಗಳ, ಕೃಷ್ಣ ಪ್ರಸಾದ್ ಆಳ್ವ, ಸಂಗೀತ ಕಲಾವಿದ ಬಾಬಣ್ಣ ಪುತ್ತೂರು, ಪತ್ರಕರ್ತ ಸಿಶೇ ಕಜೆಮಾರ್ ಸೇರಿದಂತೆ ಸಾಂಸ್ಕೃತಿಕ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ನಿರ್ಮಾಪಕರಾದ ಜನ್ಮ ಕ್ರಿಯೇಷನ್ಸ್ನ ಡಾ.ಹರ್ಷ ಕುಮಾರ್ ರೈ ಮಾಡಾವು ಅತಿಥಿಗಳಿಗೆ ಶಾಲು,ಹೂ ನೀಡಿ ಸ್ವಾಗತಿಸಿ, ವಂದಿಸಿದರು. ಸ್ವರ ಮಾಧುರ್ಯ ಸಂಗೀತ ಬಳಗದ ಜನಾರ್ದನ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
5ರ ಬಾಲೆ ಸೋನಿಕಾ ಜನಾರ್ದನ್
ಈ ಆಲ್ಬಂ ಸಾಂಗ್ಗೆ ಧ್ವನಿ ನೀಡಿದ ಸೋನಿಕಾ ಜನಾರ್ದನ್ರವರು 5ರ ಪುಟ್ಟ ಬಾಲೆ. ಈಗಾಗಲೇ ಮಧೂರು, ಕಟೀಲ್ ಸೇರಿದಂತೆ ಹಲವು ಕಡೆಗಳಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಈಕೆ ಹಲವು ವಿಡಿಯೋ ಆಲ್ಬಂ ಸಾಂಗ್ಗೆ ಧ್ವನಿ ನೀಡಿದ್ದಾರೆ. ಇವರು ಮೈಸೂರಿನಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಜನಾರ್ದನ್ ಪುತ್ತೂರು ಮತ್ತು ಪ್ರಮೀಳಾರವರ ಪುತ್ರಿಯಾಗಿದ್ದಾರೆ.
ಜನ್ಮ ಕ್ರಿಯೇಷನ್ಸ್ ಸಂಸ್ಥೆ ಹೊಸ ಪ್ರತಿಭೆಗಳನ್ನು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳ ಹಲವು ಕಿರುಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿ ಮುದ್ರಿಕೆ ಗಳನ್ನು ನಿರ್ಮಾಣ ಮಾಡಿ ದೇಶ ವಿದೇಶ ಗಳಲ್ಲಿ ಬಿಡುಗಡೆ ಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್ ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಹಾಗೂ ಅಷ್ಟ ಕ್ಷೇತ್ರ ಗಾನ ವೈಭವ ಈ ಸಂಸ್ಥೆಯ ನಿರ್ಮಾಣದ ಪ್ರಮುಖವಾದವು ಆಗಿವೆ.
ಹರ್ಷ ಕುಮಾರ್ ರೈ ಮಾಡಾವು
ಜನ್ಮ ಕ್ರಿಯೇಷನ್ಸ್ ಪುತ್ತೂರು.