ತಿಂಗಳಾಡಿ ಶಂಸುಲ್ ಉಲಮಾ ಎಜುಕೇಶನ್ ಸೆಂಟರ್ ವತಿಯಿಂದ ಧಾರ್ಮಿಕ ಮತ ಪ್ರಭಾಷಣ

0


ಸ್ವಾರ್ಥ ಬಿಟ್ಟು ಸಾರ್ಥಕ ಜೀವನ ನಡೆಸಿ-ಹನೀಫ್ ನಿಝಾಮಿ

ಪುತ್ತೂರು: ತಿಂಗಳಾಡಿ ಶಂಸುಲ್ ಉಲಮಾ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ನೂತನ ಮದ್ರಸ ಕಟ್ಟಡ ಉದ್ಘಾಟನೆ ಪ್ರಯುಕ್ತ ಧಾರ್ಮಿಕ ಪ್ರಭಾಷಣ ಎ.14ರಂದು ನಡೆಯಿತು.

ಮುಖ್ಯ ಪ್ರಭಾಷಣ ನಡೆಸಿದ ಹನೀಫ್ ನಿಝಾಮಿ ಮೊಗ್ರಾಲ್‌ರವರು ನಮ್ಮ ಜೀವನ ಅಲ್ಲಾಹು ಇಷ್ಟಪಡುವ ರೀತಿಯಲ್ಲಿರಬೇಕು, ಸ್ವಾರ್ಥ ಬಿಟ್ಟು ಸಾರ್ಥಕ ಜೀವನ ನಡೆಸಲು ಪ್ರಯತ್ನಿಸಬೇಕು, ಮದರಸ, ಮಸೀದಿಗಳಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕೂಡುರಸ್ತೆ ಖತೀಬ್ ಬದ್ರುದ್ದೀನ್ ರಹ್ಮಾನಿ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಅನೀಸ್ ಕೌಸರಿ, ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ , ಸಿ.ಕೆ ಮಹಮ್ಮದ್ ದಾರಿಮಿ, ಪಿ. ಕೆ. ಮಹಮ್ಮದ್ ಕೂಡುರಸ್ತೆ, ಅಶ್ರಫ್ ಸಾರೆಪುಣಿ, ನೌಫಲ್ ಅಜ್ಜಿಕಲ್ಲು, ಮಜೀದ್ ಬಾಳಾಯ, ಶರೀಫ್ ಅಜ್ಜಿಕಲ್ಲು, ಮಹಮ್ಮದ್ ಅಝರುದ್ದೀನ್, ಹನೀಫ್ ಹಾಜಿ ಮಾಡಾವು, ಝೈನುದ್ದೀನ್ ಹಾಜಿ ರೆಂಜಲಾಡಿ ಉಪಸ್ಥಿತರಿದ್ದರು.


ಸಂಸ್ಥೆಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಪ್ರ.ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಅಬ್ದುಲ್ಲ ಪಟ್ಟೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ದರ್ಬೆ, ನಿರ್ದೇಶಕರಾದ ಅಬ್ದುಲ್ ಲತೀಫ್ ಆದ್ರೋಡಿ, ಲತೀಫ್ ಅಂಙನ್ತಡ್ಕ, ಸಯೀದ್ ತೋಟ, ಹಾರಿಸ್ ತ್ಯಾಗರಾಜೆ, ಹಾರಿಸ್ ಬೋಳೋಡಿ, ಅಬ್ದುಲ್ ರಝಾಕ್ ದರ್ಬೆ, ಶಕೀಲ್ ಅಹ್ಮದ್ ಬೇರಿಕೆ, ಹಾಗೂ ಸಲೀಂ ರೆಂಜಲಾಡಿ, ಸುಫಿಯಾನ್, ಇಸ್ಮಾಯಿಲ್ ಸಹಕರಿಸಿದರು. ಸತ್ತಾರ್ ಕೌಸರಿ ಸ್ವಾಗತಿಸಿದರು. ಶುಹೈಬ್ ಕೊಳ್ತಿಗೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮ:
ಮಾ.13ರಂದು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ವಹಿಸಿದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಮಾತನಾಡಿ ಯುವ ಸಮೂಹ ದಾರಿ ತಪ್ಪಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಯುವ ಸಮುದಾಯ ಮಾದಕ ವ್ಯಸನಗಳತ್ತ ಆಕರ್ಷಿತರಾಗದಂತೆ ವಿದ್ಯಾಕೇಂದ್ರಗಳ ಮೂಲಕ ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಹೇಳಿದರು.


ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿದರು. ಸಂಸ್ಥೆಗೆ ಕೊಡುಗೆ ನೀಡಿದ ಅಶೋಕ್ ಪೂಜಾರಿ ಬೊಳ್ಳಾಡಿ, ಹರೀಶ್ ಕೋಟ್ಯಾನ್, ಉದ್ಯಮಿಗಳಾದ ಸನದ್ ಯೂಸುಫ್ ಹಾಗೂ ಹಾರಿಸ್ ಕೂಡುರಸ್ತೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕುಂಬ್ರ ವರ್ತಕ ಸಂಘದ ಅದ್ಯಕ್ಷರಾದ ಪಿ.ಕೆ ಮಹಮ್ಮದ್ ಕುಡುರಸ್ತೆ, ಸಂಸ್ಥೆಯ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ , ಕಾರ್ಯದರ್ಶಿ ಅಬ್ದುಲ್ಲ ಪಟ್ಟೆ, ಉದ್ಯಮಿ ಯೂಸುಫ್ ಗೌಸಿಯಾ ಸಾಜ, ಉದ್ಯಮಿ ಹಾಜಿ ಇಬ್ರಾಹಿಂ ಅಜ್ಜಿಕಲ್ಲು, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಮೊಂತೆರೋ, ಉದ್ಯಮಿ ರಝಾಕ್ ಬಿ. ಜಿ ರೆಂಜಲಾಡಿ ಉಪಸ್ಥಿತರಿದ್ದರು. ಸತ್ತಾರ್ ಕೌಸರಿ ಸ್ವಾಗತಿಸಿದರು, ಶುಹೈಬ್ ಕೊಳ್ತಿಗೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here