*ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಗೋದಾಮು
*ಸಂಪರ್ಕದ ಕಾಂಕ್ರೀಟ್ ರಸ್ತೆ ಉದ್ಘಾಟನೆ,
*ಸಹಕಾರಿ ಸಂಸ್ಥೆಗಳಿಂದ ರೈತರ ಬಾಳು ಬೆಳಗಿದೆ- ಭಾಗೀರಥಿ

ಪುತ್ತೂರು: ಸವಣೂರು ಪ್ರಾ,ಕೃ.ಪತ್ತಿನ ಸಹಕಾರ ಸಂಘದ ಗೋದಾಮಿಗೆ ಸಂಪರ್ಕಮಾಡುವ ರಸ್ತೆಯನ್ನು ಸಂಘದ ಮೂಲಕ ಕ್ರಾಂಕ್ರೀಟ್‌ಕರಣಗೊಳಿಸಲಾಗಿದ್ದು, ಇದರ ಉದ್ಘಾಟನೆಯನ್ನು ಏ.16ರಂದು ಶಾಸಕಿ ಭಾಗೀರಥಿ ಮುರುಳ್ಯರವರು ನೇರವೇರಿಸಿದರು, ಬಳಿಕ ಸಂಘದ ಸಭಾಭವನದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಉತ್ತಮವಾದ ಕಾಂಕ್ರೀಟ್ ರಸ್ತೆಯನ್ನು ಮಾಡುವ ಮೂಲಕ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘವು ಮಾದರಿ ಸಂಸ್ಥೆಯಾಗಿದೆ. ಉತ್ತಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಇರುವ ಇಲ್ಲಿನ ಸಂಸ್ಥೆಯ ಸಾಧನೆಯನ್ನು ಕಂಡು ಸಂತೋಷವಾಗಿದೆ, ಸಹಕಾರಿ ಸಂಸ್ಥೆಗಳಿಂದ ಗ್ರಾಮೀಣ ರೈತಾಪಿ ವರ್ಗದ ಬಾಳು ಬೆಳಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿ, ಸಂಘದ ಅಭಿವೃದ್ಧಿಗೆ ನನ್ನ ಸಹಕಾರ ನೀಡುತ್ತೇನೆ ಎಂದರು.
ಸವಣೂರು ಪ್ರಾ, ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ತೆಂಗಿನಕಾಯಿ ಒಡೆಯುವ ಮೂಲಕ ಕಾಂಕ್ರೀಟ್ ರಸ್ತೆಗೆ ಚಾಲನೆಗೈದರು. ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಗಣೇಶ್ ನಿಡ್ವಣ್ಣಾಯರವರು ದೀಪ ಬೆಳಗಿಸಿದರು.
ರೈತ ಸದಸ್ಯರುಗಳ ಬೇಡಿಕೆಯಾಗಿತ್ತು- ತಾರಾನಾಥ ಕಾಯರ್ಗ
ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಸ್ವಾಗತಿಸಿ, ಮಾತನಾಡಿ ನಮ್ಮ ಸಂಘದ ರೈತ ಸದಸ್ಯರುಗಳ ಬೇಡಿಕೆಯಾಗಿದ್ದ ಈ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ. ಅಚ್ಚುಕಟ್ಟಾಗಿ ಕಾಂಕ್ರೀಟ್ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಅತ್ಯಂತ ಸುಸಜ್ಜಿತವಾಗಿ ಕಾಂಕ್ರೀಟ್ ಮಾಡಲಾಗಿದೆ- ಚಂದ್ರಶೇಖರ್
ಸಂಘದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್‌ಪಿರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಗೋದಾಮು ಕಟ್ಟಡಕ್ಕೆ ತೆರಳುವ ರಸ್ತೆಯನ್ನು ಸಂಘದ ವತಿಯಿಂದ ಅತ್ಯಂತ ಸುಸಜ್ಜಿತವಾಗಿ ಕಾಂಕ್ರೀಟ್ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್‍ಯಗಳು ನಡೆಯಲಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಪ್ರಕಾಶ್ ರೈ ಸಾರಕರೆ, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಶಿವಪ್ರಸಾದ್ ಕಳುವಾಜೆ, ಜ್ಞಾನೇಶ್ವರಿ ಬರೆಪ್ಪಾಡಿ, ಸೀತಾಲಕ್ಷ್ಮಿ, ತಿಮ್ಮಪ್ಪ ಬನಾರಿ, ಮಾಜಿ ನಿರ್ದೇಶಕರುಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ನಾರಾಯಣ ಗೌಡ ಪೂವ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಕಡಬ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ ಸವಣೂರು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಂಬಿಲ, ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರುಗಳಾದ ರಾಜೀವಿ ಶೆಟ್ಟಿ, ಚಂದ್ರಾವತಿ, ರಫೀಕ್ ಎಂ.ಎ, ಶೀನಪ್ಪ ಶೆಟ್ಟಿ ನೆಕ್ರಾಜೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರೀತ್ ರೈ ಖಂಡಿಗ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಉಪಕಾರ್‍ಯನಿವರ್ಹಣಾಧಿಕಾರಿ ಜಲಜಾ ಎಚ್ ರೈ, ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ, ಸವಣೂರು ಬೆನಸ ರಬ್ಬರ್ ಸೊಸೈಟಿಯ ಕಾರ್‍ಯದರ್ಶಿ ಅಚ್ಚುತ ಎ, ಮಾಸ್ ಸವಣೂರು ಶಾಖಾ ವ್ಯವಸ್ಥಾಪಕ ಯತೀಶ್, ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖಾ ವ್ಯವಸ್ಥಾಪಕರಾದ ಜಯಂತಿ, ಸಾಮಾಜಿಕ ಮುಂದಾಳು ಉಮೇಶ್ ಎಂ, ಬೇರಿಕೆ ಕುಮಾರಮಂಗಲ, ರಾಮಕೃಷ್ಣ ಪ್ರಭು, ಸತ್ಯಪ್ರಸಾದ್ ರೈ ನೆಕ್ಕರೆ, ಪ್ರಮೋದ್ ಕುಮಾರ್ ರೈ ನೂಜಾಜೆ, ಶೇಷಪ್ಪ ನಾಯ್ಕ ಕನಡಕುಮೇರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ಸಾಲಮನ್ನಾ ಹಣ ಬಿಡುಗಡೆಗೊಳಿಸಲು ಒತ್ತಾಯ- ಮನವಿ ಸಲ್ಲಿಕೆ
ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ 39 ಸದಸ್ಯರಿಗೆ ಇನ್ನೂ ಸಾಲಮನ್ನಾದ ಹಣ ಬಂದಿಲ್ಲ, ಇದನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಒತ್ತಡ ತರುವಂತೆ ಹಾಗೂ ಯಶಸ್ವಿನಿ ವಿಮಾ ಯೋಜನೆಯ ಸೌಲಭ್ಯಕ್ಕೆ ಈಗ ಮಂಗಳೂರಿನಲ್ಲಿ ಇದ್ದು, ಪುತ್ತೂರಿನಲ್ಲಿ ಯಾವುದೇ ಆಸ್ಪತ್ರೆ ಸೌಲಭ್ಯ ಇಲ್ಲದೇ ಇರುವುದರಿಂದ ಈ ಕೂಡಲೇ ಪುತ್ತೂರಿನಲ್ಲಿ ಆಸ್ವತ್ರೆ ಸೌಲಭ್ಯವನ್ನು ಮಾಡುವಂತೆ ಸರಕಾರದ ಮೇಲೆ ಒತ್ತಡ ತರುವಂತೆ ಶಾಸಕಿ ಭಾಗೀರಥಿಯವರಿಗೆ ಸವಣೂರು ಪ್ರಾ.ಕೃ, ಪತ್ತಿನ ಸಹಕಾರ ಸಂಘದ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
