ಪೆರ್ನಾಜೆ: ಸುಮ್ಮನೆ ಕುಳಿತವರು ಹೆಜ್ಜೆ ಗುರುತನ್ನು ಮೂಡಿಸಲಾರರು ಹೆಜ್ಜೆ ಗುರುತು ಮೂಡಿಸಬೇಕೆಂದರೆ ಎದ್ದು ನಡೆಯಲೇಬೇಕು. ಕಲಾತ್ಮಕ ಅರ್ಥಪೂರ್ಣವಾದ ಹೆಜ್ಜೆ ಗೆಜ್ಜೆಯ ಸದ್ದಿಗೆ ಅದ್ಭುತ ಭರತನಾಟ್ಯದ ರಂಗಪ್ರವೇಶವು ಏ.24ರಂದು ನಾಟ್ಯ ಸಿಂಚನ ಲಕ್ಷ್ಮಿ ಕೊಡಂದೂರ್ ರವರು ವಿಟ್ಲ ಗಾರ್ಡನ್ ಆಡಿಟೋರಿಯಂನಲ್ಲಿ ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಲಿದ್ದಾರೆ.
ಕುಮಾರ್ ಪೆರ್ನಾಜೆ ನಿರ್ದೇಶನದಲ್ಲಿ ಜಾಲ್ಸೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ,ಶ್ರೀ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಮತ್ತು ಕಾವು ಅಯ್ಯಪ್ಪ ಸ್ವಾಮಿ ಕಾರ್ಯಕ್ರಮದಲ್ಲಿ, ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಭರತನಾಟ್ಯ ಇದ್ದು ಅಲ್ಲದೆ ಕೋಟೆ ಸುಬ್ರಮಣ್ಯ ಸ್ವಾಮಿ ಷಷ್ಠಿ ಮಹೋತ್ಸವದಲ್ಲಿ, ಸುಬ್ರಮಣ್ಯ ದೇವಸ್ಥಾನ ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿ ಮಹೋತ್ಸವದಲ್ಲಿ ಸತತ ಐದು ವರ್ಷಗಳಿಂದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಇವಳ ಹೆಗ್ಗಳಿಕೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಕಾರ್ಯಕ್ರಮ ನೀಡಿದ್ದರು.
ವೇದಮೂರ್ತಿ ಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಿರ್ದೇಶಕರು ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್, ಕರ್ನಾಟಕ ಕಲಾ ಶ್ರೀ ವಿದ್ವಾನ್ ಕೆ ಚಂದ್ರಶೇಖರ್ ನಾವಡ ಅಧ್ಯಕ್ಷತೆಯನ್ನು ವಹಿಸಲಿದ್ದು, ಮೃದಂಗವಾದಕರು ಡಾ . ವಿ ಆರ್ ನಾರಾಯಣ್ ಪ್ರಕಾಶ್ ಕಲ್ಲಿಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು , ನಿರ್ದೇಶಕರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು, ವಿದ್ವಾನ್ ದೀಪಕ್ ಕುಮಾರ್, ಪ್ರಾಂಶುಪಾಲರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಡಾ. ಮಹೇಶ್ ಪ್ರಸನ್ನ ಪುತ್ತೂರು ಕೆ ಕೃಷ್ಣಯ್ಯ ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನ ವಿಟ್ಲ ಶ್ರೀ ಕೇಶವ ಆರ್ ವಿ, ಕಲಾ ನಿರ್ದೇಶಕ ಬರಹಗಾರ ರಾಷ್ಟ್ರ ಪ್ಶಶಸ್ತಿ ವಿಜೇತ ಕುಮಾರ್ ಪೆರ್ನಾಜೆ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತಲಿರಲಿದ್ದಾರೆ.
ಹಿಮ್ಮೇಳನ ಕಲಾವಿದರು ನಟುವಾಂಗ ವಿದುಷಿ ಡಾ. ವಿದ್ಯಾ ಲಕ್ಷ್ಮಿ ಕುಂಬ್ಳೆ ಹಾಡುಗಾರಿಕೆ ವಿದ್ವಾನ್ ಸಿಜು ಕರುಣಾಕರನ್ ಕಣ್ಣೂರ್, ಸಿ ವಸಂತಕುಮಾರ ಗೋ ಸಾಡ ಮೃದಂಗ ವಿದ್ವಾನ್ ಸುರೇಶ್ ಬಾಬು ಕಣ್ಣೂರ್, ಕೊಳಲು ಶ್ರೀ ರಾಹುಲ್ ಪಯ್ಯನೂರ್, ಫ್ರೀಡಂ ಪ್ಯಾಡ್ನಲ್ಲಿ ಶ್ರೀ ಪ್ರಭಾಕರ್ ಮಲ್ಲ, ಮಲ್ಲಿಕಾ ಸಿದ್ದ ಕಟ್ಟೆ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಎಂದು ಸವಿತಾ ಕೋಡoದೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.