ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶಾಲಾ ಹಿತೈಷಿ ಹಾಗೂ ಖ್ಯಾತ ನೃತ್ಯ ಕಲಾವಿದ ಕಾರ್ತಿಕ್ ಹಾಗೂ ಊರ ಉದ್ಯಮಿ ಬಿಸ್ಮಿ ಪ್ಯಾಬ್ರೀಕೇಶನ್ ಮಾಲಿಕ ಮೊಹಮ್ಮದ್ ಶರೀಫ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿಯರಾದ ಜಯಶ್ರೀ ಸಾಲ್ಯಾನ್ ,ಎಲ್ಸಿ ಲಸ್ರಾದೋ, ಶೇಖ್ ಜಲಾಲುದ್ದೀನ್,ಚೇತನಾ ಜೈನ್, ಮಮತಾ ಆರ್, ಪ್ರತೀಕ್ಷಾ ಹರೀಶ್, ಚಂದ್ರಾವತಿ, ಅನ್ನಪೂರ್ಣೇಶ್ವರಿ, ದಿವ್ಯ, ಹಾಫಿಳಾ,ನೀಲಮಕ್ಕ ಉಪಸ್ಥಿತರಿದ್ದರು.
ಜಯಶ್ರೀ ಸಾಲ್ಯಾನ್ ಸ್ವಾಗತಿಸಿದರು.ಚೇತನಾ ಎಲ್ಲರನ್ನು ವಂದಿಸಿದರು. ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.
