15ನೇ ವರ್ಷಕ್ಕೆ ಯಶಸ್ವಿ ಪಾದಾರ್ಪಣೆ -ಕುಂಬ್ರ ಹೋಟೆಲ್ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ – ವನ್‌ಡೇ ಆಫರ್, ಸವಿಯಿರಿ…ಕೇವಲ ರೂ.79 ಕ್ಕೆ ಚಿಕನ್ ಬಿರಿಯಾನಿ…

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕುಂಬ್ರದಲ್ಲಿರುವ ಹೊಟೇಲ್ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ ಯಶಸ್ವಿ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಶುಭ ಸಂದರ್ಭದಲ್ಲಿ ಹೊಟೇಲ್‌ನ ಯಶಸ್ವಿಗೆ ಸಹಕರಿಸಿದ ಸಮಸ್ತ ಗ್ರಾಹಕ ಬಂಧುಗಳಿಗೆ ರೆಸ್ಟೋರೆಂಟ್ ಮಾಲಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಹೋಟೆಲ್ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ ಎ.17 ಕ್ಕೆ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ನಾರ್ತ್ ಇಂಡಿಯನ್, ಸೌತ್ ಇಂಡಿಯನ್ ಹಾಗೂ ಚೈನೀಸ್ ಖಾದ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಈ ಹೋಟೆಲ್ ತನ್ನ ಅಲ್‌ರಾಯ ಬಿರಿಯಾನಿಯಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದೆ. ಶುಚಿ ಮತ್ತು ರುಚಿಗೆ ಅಲ್‌ರಾಯ ಹತ್ತೂರಲ್ಲೂ ಫೇಮಸ್ ಆಗಿದ್ದು ಇಲ್ಲಿನ ಬಿರಿಯಾನಿ ಸವಿಯಲೇಂದು ದೂರದೂರಿನಿಂದ ಗ್ರಾಹಕರು ಬರುತ್ತಿದ್ದಾರೆ.


ಹವಾ ನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್
ಅಲ್‌ರಾಯ ಒಂದು ಫ್ಯಾಮಿಲಿ ರೆಸ್ಟೋರೆಂಟ್ ಆಗಿದ್ದು ಕುಟುಂಬ ಸಮೇತರಾಗಿ ಇಲ್ಲಿ ಬಂದು ತಮ್ಮಿಷ್ಟದ ಖಾದ್ಯಗಳನ್ನು ಸವಿಯಬಹುದಾಗಿದೆ. ವಿಶೇಷವಾಗಿ ಹವಾ ನಿಯಂತ್ರಿತ ಫ್ಯಾಮಿಲಿ ರೂಮ್ ಕೂಡ ಇದೆ. ಎನ್‌ಎಚ್-275 ಕ್ಕೆ ತಾಗಿಕೊಂಡೇ ಇರುವ ಈ ಹೋಟೇಲ್ ಪ್ರವಾಸಿಗರ ನೆಚ್ಚಿನ ರೆಸ್ಟೋರೆಂಟ್ ಕೂಡ ಆಗಿದೆ.

ವೆಜ್,ನಾಜ್ ಖಾದ್ಯಗಳು ಲಭ್ಯ
ಅಲ್‌ಫಾಮ್, ಟಿಕ್ಕ, ಕಬಾಬ್, ಶವರ್ಮ, ಚಿಕನ್ ಫ್ರೈಡ್‌ರೈಸ್, ನೂಡೆಲ್ಸ್, ಗೋಬಿ ಮಂಚೂರಿಯನ್ ಸೇರಿದಂತೆ ಚಿಕನ್, ಮಟನ್ ಹಾಗೂ ಮೀನಿನ ವಿವಿಧ ಬಗೆಯ ಖಾದ್ಯಗಳು, ಎಲ್ಲಾ ಬಗೆಯ ಫ್ರೆಶ್ ಜ್ಯೂಸ್‌ಗಳು ಲಭ್ಯವಿದೆ.

ವನ್‌ಡೇ ಆಫರ್..ರೂ.79 ಕ್ಕೆ ಚಿಕನ್ ಬಿರಿಯಾನಿ
ಪುತ್ತೂರು ಜಾತ್ರೆ ಹಾಗೂ 15ನೇ ವರ್ಷದ ಪಾದಾರ್ಪಣೆಯ ಅಂಗವಾಗಿ ತನ್ನೆಲ್ಲಾ ಗ್ರಾಹಕರಿಗೆ ಒಂದು ದಿನದ ಆಫರ್ ನೀಡಲಾಗುತ್ತಿದ್ದು ಕೇವಲ ರೂ.79ಕ್ಕೆ ಚಿಕನ್ ಬಿರಿಯಾನಿ ಸವಿಯಬಹುದಾಗಿದೆ. ಈ ಆಫರ್ ಕೇವಲ ಎ.17ಕ್ಕೆ ಮಾತ್ರ ಸೀಮಿತವಾಗಿದೆ. ಹೋಂ ಡೆಲಿವರಿ ಕೂಡ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಮೊ.9535627300 ಗೆ ಸಂಪರ್ಕಿಸಬಹುದಾಗಿದೆ.

“ ಗ್ರಾಹಕರ ತೃಪ್ತಿಯೇ ನಮಗೆ ಸಂತೃಪ್ತಿಯಾಗಿದ್ದು ಈ 14 ವರ್ಷಗಳ ಪಯಣದಲ್ಲಿ ಗ್ರಾಹಕರೇ ನಮ್ಮ ಯಶಸ್ವಿಗೆ ಕಾರಣೀಕರ್ತರಾಗಿದ್ದಾರೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲಾ ಗ್ರಾಹಕರಿಗೆ ಹತ್ತೂರು ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಶುಭಾಶಯಗಳೊಂದಿಗೆ, ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.”

ರಫೀಕ್ ಅಲ್‌ರಾಯ
ಮಾಲಕರು ಹೋಟೆಲ್ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್

LEAVE A REPLY

Please enter your comment!
Please enter your name here