ಪೆಟ್ರೋಲ್ ಪಂಪ್‌ನಲ್ಲಿ ಸಿಕ್ಕಿದ ಪರ್ಸ್ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

0

ಪುತ್ತೂರು: ವ್ಯಕ್ತಿಯೊಬ್ಬರು ತನಗೆ ಸಿಕ್ಕಿದ ಪರ್ಸ್‌ವೊಂದನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಕುಂಟಿಕಾನ ನಿವಾಸಿ ನಾರಾಯಣ ಕೆ. ಎಂಬವರೇ ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ.

ನಾರಾಯಣ ಕೆ. ಮತ್ತು ಜನಾರ್ಧನ ಎಂಬವರು ಪುತ್ತೂರು ಜಾತ್ರೆಗೆ ಆಗಮಿಸುವ ಸಂದರ್ಭದಲ್ಲಿ ದರ್ಬೆ ಪೆಟ್ರೋಲ್ ಪಂಪ್‌ನಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿ ಟಾಯ್ಲೆಟ್‌ಗೆ ಹೋಗಿದ್ದರು. ಅಲ್ಲಿ ವಾಷಿಂಗ್ ಬೆಸಿನ್ ಮೇಲೆ ವಾರೀಸುದಾರರು ಇಲ್ಲದ ಪರ್ಸ್‌ನ್ನು ತಂದು ಸುದ್ದಿ ಬಿಡುಗಡೆ ಕಚೇರಿಗೆ ತಂದೊಪ್ಪಿಸಿದ್ದರು. ಪರ್ಸ್‌ನಲ್ಲಿ ರೂ.10,000/- ದವರೆಗೆ ನಗದು ಹಣ ಹಾಗೂ ಆಧಾರ್ ಕಾರ್ಡ್, ವಾಹನದ ದಾಖಲೆಗಳು ಇದ್ದವು. ದಾಖಲೆಗಳ ಮೂಲಕ ಸವಣೂರು ಇಡ್ಯಾಡಿ ನಿವಾಸಿ ಪ್ರಸಾದ್ ಎಂಬವರು ವಾರಿಸುದಾರರೆಂದು ತಿಳಿದು ಬಂದಿದ್ದು ಬಳಿಕ ಫೋನ್ ನಂಬರ್ ಮೂಲಕ ಸಂಪರ್ಕಿಸಿ ಸುದ್ದಿ ಬಿಡುಗಡೆ ಕಛೇರಿಯಲ್ಲಿ ಪರ್ಸ್ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here