ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಳೆ ನಡೆಯುವ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಿಗೊಳಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲೆ ಕರೆ

0

ಪುತ್ತೂರು: ಮುಸಲ್ಮಾನರ ಬದುಕಿಗೆ, ಅವರ ಆರಾಧನಾಲಯಗಳಿಗೆ ಪೂರ್ವಿಕರು ದೇಣಿಗೆಯಾಗಿ ನೀಡಿದ ಜಮೀನು ಸ್ವತ್ತುಗಳಾಗಿವೆ ವಕ್ಫ್. ಅವುಗಳು ಯಾವತ್ತೂ ಇತರರ ಸ್ವತ್ತು ಅಲ್ಲ. ಸರಕಾರದ ಸ್ವತ್ತೂ ಅಲ್ಲ. ಸರಕಾರವೋ ಇತರರೋ ಅದರಲ್ಲಿ ಹಸ್ತಕ್ಷೇಪ ಸಲ್ಲಿಸುವಂತಿಲ್ಲ, ಆ ಸ್ವತ್ತುಗಳೆಲ್ಲವೂ ಅಲ್ಲಾಹನ ಮಾರ್ಗದಲ್ಲಿ ಮೀಸಲಿಟ್ಟದ್ದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಾರಿಗೆ ತಂದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ಕರ್ನಾಟಕ ಉಲಮಾ ಕೋರ್ಡಿನೇಶನ್ ವತಿಯಿಂದ ಉಭಯ ಖಾಝಿಗಳ ನೇತೃತ್ವದಲ್ಲಿ ನಾಳೆ (ಎ.18) ಮಂಗಳೂರು ಅಡ್ಯಾರ್ ಕಣ್ಣೂರುನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುನ್ನಿ ಸಂಘ ಕುಟುಂಬದ ಉಲಮಾ-ಉಮರಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಯವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here