ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ರವರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಹೂವಿನ ಅಲಂಕಾರ

0

ಪುತ್ತೂರು: ಜಾತ್ರೋತ್ಸವ ಅಂದರೆ ದೇವರು ಮತ್ತು ದೇವಸ್ಥಾನದ ಅಲಂಕಾರವೂ ಹೆಚ್ಚಿನ ಗಮನ ಸೆಳೆಯುವಂತಿರುತ್ತದೆ. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಭಾರಿಯ ಜಾತ್ರೋತ್ಸವದ ಸಂದರ್ಭದಲ್ಲಿ ದೇವಾಲಯದ ಒಳಾಂಗಣಕ್ಕೆ ಹೂವಿನ ಅಲಂಕಾರವನ್ನು   ಮೈಸೂರಿನ  ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜಿರವರು ಸೇವಾರೂಪದಲ್ಲಿ ಮಾಡಿಸಿದ್ದಾರೆ.


ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ನೇರ್ಲಾಜೆ  ದಿ. ರಾಮದಾಸ್ ಹಾಗೂ ದಿ. ಸುಂದರಿ ರಾಮದಾಸ್ ರವರ ಪುತ್ರ ದಿವಾಕರ ದಾಸ್ ರವರು  ತನ್ನ ಉದ್ಯಮದೊಂದಿಗೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬರುತ್ತಿದ್ದಾರೆ.  ತನ್ನ ಗ್ರಾಮದ ಸಹಿತ ಹಲವಾರು ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ನಿತ್ಯ ನಿರಂತರವಾಗಿ ತನ್ನನ್ನು ತಾನು‌ ತೊಡಗಿಸಿಕೊಳ್ಳುತ್ತಿದ್ದಾರೆ. ಕಳೆದ ಹಲವಾರು ವರುಷಗಳಿಂದ ಕೋಲ್ಪೆ ಶ್ರೀ‌ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ  ಜಾತ್ರೋತ್ಸವದ ಸಂದರ್ಭದಲ್ಲಿ ದೇವಾಲಯಕ್ಕೆ  ವಿಶೇಷ ಹೂವಿನ ಅಲಂಕಾರವನ್ಮು ಮಾಡಿಸುತ್ತಾ ಬರುತ್ತಿದ್ದಾರೆ. ಈ ಬಾರಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಲಕ್ಷಾಂತರ ರೂಪಾಯಿ ವೆಚ್ಚದ ಹೂವಿನಿಂದ  ಕ್ಷೇತ್ರವನ್ನು ಅಲಂಕರಿಸಿದ್ದಾರೆ. ಉಳಿದಂತೆ ಹಲವಾರು ದೇವಸ್ಥಾನಗಳಿಗೆ ಹೂವಿನ ಅಲಂಕಾರವನ್ನು  ಮಾಡಿಸುತ್ತಾ ಬರುತ್ತಿದ್ದಾರೆ‌. ಇಷ್ಟು ಮಾತ್ರವಲ್ಲದೆ ತಮ್ಮ ಊರಿನಲ್ಲಿ ಶಾಲೆಗೆ ಕಟ್ಟಡ ನಿರ್ಮಾಣ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆರ್ಥಿಕ ನೆರವು, ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ, ಹಲವು ಟ್ರಸ್ಟ್ ಗಳ ಮುಖಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಪುಸ್ತಕ ವಿತರಣೆ, ಅನೇಕ ದೇವಾಲಯ-ಮಂದಿರಗಳ ಅಭಿವೃದ್ಧಿಗೆ ಸಹಾಯ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿರಂತರವಾಗಿ ಸಹಕಾರ ನೀಡುವುದರೊಂದಿಗೆ ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳು ನಿತ್ಯ ನಿರಂತರವಾಗಿ ಇವರಿಂದ ಮಾಡಲ್ಪಡುತ್ತಿದೆ.

ಸೇವೆಗೆ ಸಿಕ್ಕ ಅವಕಾಶ
ಇದೊಂದು  ಸೇವೆಗೆ ಸಿಕ್ಕ ಅವಕಾಶವಾಗಿದೆ. ಉದ್ಯಮದ ನಿಮಿತ್ತ ಮೈಸೂರಿನಲ್ಲಿದ್ದರೂ ಹುಟ್ಟಿದ ಊರಿನ ದೇವಸ್ಥಾನ – ದೈವಸ್ಥಾನಗಳಿಗೆ ನಿರಂತರವಾಗಿ ಸಹಕಾರ ನೀಡುತ್ತಾ ಬರುತ್ತಿದ್ದೇನೆ. ಉದ್ಯಮದಲ್ಲಿ‌ ಬಂದ ಲಾಭದ ಒಂದಂಶವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸುತ್ತಿದ್ದೇನೆ. ನಮ್ಮ ಕೋಲ್ಪೆ ಶ್ರೀ‌ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಹೂವಿನ ಅಲಂಕಾರ ಮಾಡಿಸುತ್ತಾ ಬಂದಿದ್ದೇನೆ. ಈ ಭಾರಿ ಪುತ್ತೂರಿನ ಮಹಾಲಿಂಗೇಶ್ವರನ ಸನ್ನಿದಿಗೂ ಹೂವಿನ ಅಲಂಕಾರ ಮಾಡಿಸುವ ಅವಕಾಶ ಬಂದೊದಗಿದೆ. 

ದಿವಾಕರ ದಾಸ್ ನೇರ್ಲಾಜೆ
ಆಡಳಿತ ನಿರ್ದೇಶಕರು ಎಸ್.ಎಲ್.ವಿ.ಬುಕ್ಸ್ ಇಂಡಿಯ ಪ್ರೈ.ಲಿ.

LEAVE A REPLY

Please enter your comment!
Please enter your name here