ಪುತ್ತೂರು:ನಿವೃತ್ತ ಮುಖ್ಯಶಿಕ್ಷಕ, ಬಲ್ನಾಡು ಗ್ರಾಮದ ಅಟ್ಲಾರು ‘ರಜತಶ್ರೀ’ ನಿವಾಸಿ ಎಸ್.ರಾಮ ಭಟ್ (85ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹ ಅಟ್ಲಾರಿನಲ್ಲಿ ಏ.17ರಂದು ನಿಧನ ಹೊಂದಿದರು.
ಹಿಂದಿ ಭಾಷಾ ಪ್ರವೀಣರಾಗಿದ್ದ ರಾಮ ಭಟ್ಟರು ಆರಂಭದಲ್ಲಿ ಸರಪಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಬಳಿಕ ಬೆಳ್ಳಾರೆ, ಉಪ್ಪಳಿಗೆ, ಮುಂಡೂರು, ಕೈಕಾರ ಮುಂತಾದ ಕಡೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದರು.ಸಾಹಿತ್ಯ ಆಸಕ್ತಿಯನ್ನು ಹೊಂದಿದ್ದ ರಾಮ ಭಟ್ಟರು, ಅಂಗುಲಿಮಾಲ, ಕಲ್ಲುಗಳು ಕೂಗಿದವು,ಧರ್ಮ ಸ್ಥಾಪನೆ ಮುಂತಾದ ನಾಟಕಗಳನ್ನು ರಚಿಸಿದ್ದು, ಕೆಲವು ಪ್ರದರ್ಶನಗೊಂಡಿವೆ.ಭಾಮಿನಿ ಷಟ್ಪದಿಯಲ್ಲಿ ಇವರು ಶ್ರೀರಾಮ ಪಟ್ಟಾಭಿಷೇಕ ರಚಿಸಿದ್ದರು.
ಮೃತರು ಪತ್ನಿ ಶಂಕರಿ, ಪುತ್ರರಾದ ಕನ್ನಡಪ್ರಭ ಮಂಗಳೂರಿನ ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್, ಪುತ್ತೂರು ಸುಮುಖ ಜುವೆಲ್ಲರಿ ಮಾಲೀಕ ಶಿವಪ್ರಸಾದ್, ಪುತ್ತೂರು ಗಿರಿಶ್ರೀ ಸ್ಟುಡಿಯೋ ಮಾಲೀಕ ರಾಧೇಶ್, ಪುತ್ತೂರು ವಿವೇಕಾನಂದ ಪದವಿ ಕಾಲೇಜು ಉಪನ್ಯಾಸಕ ಡಾ|ವಿಷ್ಣುಕುಮಾರ್, ಪುತ್ರಿಯರಾದ ಪೆರ್ಲದ ವಿಜಯಶ್ರೀಶಿವಶಂಕರ್ ಭಟ್,ಕಡೆಂಗೋಡ್ಲು ಗಾಯತ್ರಿ ರಾಮಚಂದ್ರ ಭಟ್,ಸೊಸೆಯಂದಿರಾದ ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿಆತ್ಮಭೂಷಣ್, ಮಾನಸಶಿವಪ್ರಸಾದ್,ಮೊಮ್ಮಕ್ಕಳಾದ ಶ್ರೀಧ್ವನಿ,ಶ್ರೀಭವ,ಚೈತ್ರ ಅವರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.