ಎರುಂಬು ದಿವ್ಯ ಜ್ಯೋತಿ ಮಿತ್ರವೃಂದದ ವಾರ್ಷಿಕೋತ್ಸವ ಸಂಭ್ರಮ 2025

0

ವಿಟ್ಲ: ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಸುಮಾರು 35 ವರ್ಷಗಳ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆಗಳ ಮೂಲಕ ಗುರುತಿಸಲ್ಪಟ್ಟ ದಿವ್ಯಜ್ಯೋತಿ ಮಿತ್ರವೃಂದದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರಗಿತು.

ಮಿತ್ರವೃಂದದ ಸಹಸಂಸ್ಥೆ ದಿವ್ಯಜ್ಯೋತಿ ಯಕ್ಷವೃಂದದ ವಿದ್ಯಾರ್ಥಿಗಳ ರಂಗಪ್ರವೇಶವು ನಾಟ್ಯಗುರುಗಳಾದ ಶಿವಾನಂದ ಶೆಟ್ಟಿ ಪೆರ್ಲ ರವರ ನಿರ್ದೇಶನದಲ್ಲಿ ನಡೆದು ಯಕ್ಷಗಾನದ ಪೂರ್ವರಂಗ ಮತ್ತು “ಕೃಷ್ಣಲೀಲೆ – ಕಂಸವದೆ” ಎಂಬ ಪ್ರಸಂಗದೊಂದಿಗೆ ಪ್ರದರ್ಶನಗೊಂಡಿತು. ಸುಮಾರು 32 ವಿದ್ಯಾರ್ಥಿಗಳು ಈ ರಂಗಪ್ರವೇಶದಲ್ಲಿ ಗೆಜ್ಜೆ ಕಟ್ಟಿ ಯಕ್ಷ ಪ್ರಪಂಚಕ್ಕೆ ಪಾದಾರ್ಪಣೆಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಕಲಾಬoಧು ಗುಬ್ಯ ಶ್ರೀಧರ ಶೆಟ್ಟಿರವರು ಅಧ್ಯಕ್ಷತೆ ವಹಿಸಿದ್ದರು.


ಇದೇ ಸಂದರ್ಭದಲ್ಲಿ ಯಕ್ಷ ನಾಟ್ಯ ಗುರು ಶಿವಾನಂದ ಶೆಟ್ಟಿ ಪೆರ್ಲರವರ ಯಕ್ಷ ಸಾಧನೆಗಾಗಿ ಗೌರವಿಸಲಾಯಿತು. ದೈವಪಾತ್ರಿ ಶಿವಪ್ಪ ಮೂಲ್ಯ ಮೆಣಸಿನಗಂಡಿ ಯವರನ್ನು “ಸೇವಾಭಿನಂದನಾ” ಸನ್ಮಾನ ದೊಂದಿಗೆ ಗೌರವಿಸಲಾಯಿತು. ವ್ಯಸನ ಮುಕ್ತರಾಗಿ ಊರಿನ ಸಾಧಕರಾದ ಆನಂದ ಎ ಯವರನ್ನು ಅಭಿನಂದಿಸಲಾಯಿತು. ಅತಿಥಿಗಳಾಗಿ ಸಂತೋಷ್ ಶೆಟ್ಟಿ ಪೆಲ್ತಡ್ಕ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ನಿಟಿಲಾಕ್ಷ ಶೆಟ್ಟಿ ಮುಳಿಯ, ಜಗಜೀವನರಾಮ್ ಮೈರ, ಲಕ್ಷ್ಮೀಶ ಕಡಮಣ್ಣಾಯ, ವಿಶ್ವನಾಥ ಭಟ್ ಕಾನ , ಪ್ರಕಾಶ್ ರೈ ಕಲ್ಲಂಗಳ ಮೊದಲಾದವರು ಉಪಸ್ಥಿತರಿದ್ದರು ಗೌರವಾಧ್ಯಕ್ಷ ಮೊಹನದಾಸ್ ರೈ ಎರುಂಬುರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಅಧ್ಯಕ್ಷ ರಾಧಾಕೃಷ್ಣ ವಂದಿಸಿದರು. ರೂಪ ಚಂದ್ರಹಾಸ ಕುಲಾಲ್ ದಂಪತಿಗಳ ಸಹಕಾರದೊಂದಿಗೆ ಅನ್ನಸಂತರ್ಪಣಾ ಸೇವೆ ಜರಗಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಜ್ಞಾನ ಮಹಿಳಾ ಮಂಡಳಿಯ ಇದರ ಸದಸ್ಯರಿಂದ ವಿನೂತನ ಶೈಲಿಯ”ಸಾಂಸ್ಕೃತಿಕ ವೈಭವ” ಕಾರ್ಯಕ್ರಮವು ನಡೆಯಿತು.
ನೂತನವಾಗಿ ಸಂಯೋಜನೆಗೊಂಡ ನಾಟಕ ತಂಡ “ದಿವ್ಯಜ್ಯೋತಿ ಕಲಾವಿದರಿಂದ ದಿನಕರ ಭಂಡಾರಿ ಕಣಂಜಾರು ವಿರಚಿತ ಮೋಹನದಾಸ್ ರೈ ಎರುಂಬು ನಿರ್ದೇಶನದ ಸಾಮಾಜಿಕ ಸಾಂಸಾರಿಕ, ಹಾಸ್ಯಮಯ ನಾಟಕ “ಮದಿಮೆದ ಇಲ್ಲಡ್ ” ನಡೆಯಿತು.

LEAVE A REPLY

Please enter your comment!
Please enter your name here