ಪುತ್ತೂರು: ಪುಣಚ ಮನೆಲ ಕ್ರಿಸ್ತರಾಜ ದೇವಾಲಯದಲ್ಲಿ ಪವಿತ್ರ ಗುರುವಾರದಂದು ಯೇಸು ಕ್ರಿಸ್ತರು ಶಿಷ್ಯರ ಪಾದವನ್ನು ತೊಳೆಯುವ ಪ್ರತೀಕವಾಗಿ ಚರ್ಚ್ ಧರ್ಮಗುರು ವಂ.ಸ್ಟಾನಿಸ್ಲಸ್ ರೊಡ್ರಿಗಸ್ ರವರು ಚರ್ಚ್ ನ 12 ಮಂದಿಯ ಪಾದವನ್ನು ತೊಳೆದು ಯೇಸು ಕ್ರಿಸ್ತರು ಮಾಡಿದ ಕಾರ್ಯವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಟೆಲ್ಲಿಸ್, ಕಾರ್ಯದರ್ಶಿ ಫಿಲೋಮಿನಾ ಡಿಸೋಜ , ವಾಳೆಯ ಗುರಿಕಾರಾದ ಎವರೆಸ್ಟ್ ಮೊಂತೇರೋ, ಪೀಟರ್ ಡಿಸೋಜಾ, ಝೇವಿಯರ್ ಡಿಸೋಜಾ, ಕಥೋಲಿಕ್ ಸಭಾದ ಅಧ್ಯಕ್ಷ ಸಿಪ್ರಿಯನ್ ಮೊಂತೆರೋ ಧರ್ಮಭಗಿನಿಯರು ಪಾಲ್ಗೊಂಡಿದ್ದರು.