ಮಂಗಳೂರು: ಮಂಗಳ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಪದವಿ ಪ್ರದಾನ-ಪುತ್ತೂರಿನ ಪ್ರಿಯಾ ಎಸ್.ಎಂ ಗೆ ಜನರಲ್ ನರ್ಸಿಂಗ್‌ನಲ್ಲಿ ಚಿನ್ನದ ಪದಕ 

0

ಮಂಗಳೂರು: ಮಂಗಳ ಸಮೂಹ ವಿದ್ಯಾ ಸಂಸ್ಥೆಯ 2024-25ನೇ ಸಾಲಿನ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಡಾ.ಬಿ.ಆರ್ ಅಂಬೇಡ್ಕ‌ರ್ ಭವನದಲ್ಲಿ ಮಂಗಳ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಗಣಪತಿ ಪಿ. ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಶುಭಹಾರೈಸಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಿಯಾ ಎಸ್, ಎಂ(ಜನರಲ್ ನರ್ಸಿಂಗ್) ,ಧನುಷ್ ಉದಯ್ ನಾಯಕ್ (ಬಿಎಸ್‌ಸಿ ಇಮೇಜಿಂಗ್ ಟೆಕ್ನಾಲಜಿ), ಸೌಂದರ್ಯ ಎಂ.ಆರ್.(ಫಿಸಿಯೋಥೆರಪಿ), ಚಂದನ ಎಂ.ಪಿ (ಬಿಎಸ್‌ಸಿ ನರ್ಸಿಂಗ್‌), ಸೀಮಾ ಚೇತ್ರಿ (ಓಫ್ತಾಲ್ಮೀಕ್ ಟೆಕ್ನಾಲಜಿ)ಯವರಿಗೆ ರಾಷ್ಟ್ರೀಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ವೃತ್ತಿಗಳ ಆಯೋಗ ಸದಸ್ಯ, ಪದ್ಮಶ್ರೀ ಸಮೂಹ ಸಂಸ್ಥೆ ಬೆಂಗಳೂರಿನ ಅಧ್ಯಕ್ಷ ಪ್ರೊ. ರಾಜೇಶ್ ಶೆಣೈ ಅವರು ಸ್ವರ್ಣ ಪದಕ ನೀಡಿ ಗೌರವಿಸಿ ಶುಭ ಹಾರೈಸಿದರು.

ಮಂಗಳೂರಿನ ವೆನ್ಹಾಕ್ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಮತ್ತು ಆರೋಗ್ಯಾಧಿಕಾರಿಯಾದ ಡಾ. ಶಿವಪ್ರಕಾಶ್‌ ಮೊದಲಾದವರಿದ್ದರು.

ಪ್ರಿಯಾ ಎಸ್.ಎಂ. ಅವರು ಪಾಲ್ತಾಡಿ ಗ್ರಾಮದ ಮಂಜುನಾಥನಗರ ಮಲ್ಲಿಕಾರ್ಜುನ ಎಸ್.ಎನ್ ಮತ್ತು ಕುಸುಮಾ ಐ.ಟಿ.ಅವರ ಪುತ್ರಿ.

ಪಾಲ್ತಾಡಿ ಮಂಜುನಾಥನಗರ ಹಿ.ಪ್ರಾ.ಶಾಲೆ,ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆ,ಸವಣೂರು ವಿದ್ಯಾರಶ್ಮಿ ವಿದ್ಯಾಲಯ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ.

LEAVE A REPLY

Please enter your comment!
Please enter your name here