ಪುತ್ತೂರು: ಮಂಗಳೂರಿನಿಂದ-ಸುಬ್ರಹ್ಮಣ್ಯದವರೆಗೆ ಬೆಳಗ್ಗಿನ ಜಾವ ತೆರಳುವ ಪ್ರಯಾಣಿಕರ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ಟಿಕೆಟ್ ವಿತರಣೆಗೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿಯಿದ್ದು, ಇಲಾಖೆಗೆ ಲಕ್ಷಾಂತರ ರೂ. ನಷ್ಟ ಸಂಭವಿಸುವಂತಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು-ಕಬಕ ಪುತ್ತೂರು ನಡುವೆ ಓಡಾಡುತ್ತಿದ್ದ ಪ್ರಯಾಣಿಕರ ರೈಲನ್ನು ಕೆಲದಿನಗಳ ಹಿಂದೆ ಸುಬ್ರಹ್ಮಣ್ಯವರೆಗೆ ವಿಸ್ತರಣೆ ಮಾಡಲಾಗಿದೆ.
ಮಂಗಳೂರಿನಿಂದ ಬೆಳಗ್ಗೆ 4ಕ್ಕೆ ಹೊರಡುವ ರೈಲು 5.20ಕ್ಕೆ ಕಬಕ ಪುತ್ತೂರು ತಲುಪುತ್ತದೆ. ಆದರೆ ಇಲ್ಲಿನ ಟಿಕೆಟ್ ಕೌಂಟರ್ ತೆರೆಯುವುದು ಬೆಳಗ್ಗೆ 8 ಗಂಟೆಗೆ. ಈ ರೈಲಿನಲ್ಲಿ ಸುಬ್ರಹ್ಮಣ್ಯ ಸಂಚರಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡುವ ವ್ಯವಸ್ಥೆಯೇ ಇಲ್ಲ ಎಂಬ ಆರೋಪ ವ್ಯಕ್ತವಾಗಿದೆ.