ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ತುಳು ಅಪ್ಪೆ ಕೂಟದಿಂದ ʼತುಳುನಾಡ ಬಲಿಯೇಂದ್ರʼ ಯಕ್ಷಗಾನ ತಾಳಮದ್ದಳೆಯನ್ನು ನಟರಾಜ ವೇದಿಕೆಯಲ್ಲಿ ನಡೆಸಲಾಯಿತು.

ಹಿಮ್ಮೇಳದಲ್ಲಿ ಮಲ್ಲಿಕಾ, ಅಜಿತ್ ಶೆಟ್ಟಿ ಸಿದ್ದಕಟ್ಟೆ ಭಾಗವತರಾಗಿ ,ಚಂಡೆಯಲ್ಲಿ ಪರೀಕ್ಷಿತ್ ,ಮದ್ಧಳೆಯಲ್ಲಿ ಅಚಿಂತ್ಯ, ಮುಮ್ಮೇಳದಲ್ಲಿ ಬಲಿಯೇಂದ್ರನಾಗಿ ಹರಿಣಾಕ್ಷಿ ಜೆ ಶೆಟ್ಟಿ, ವಾಮನನಾಗಿ ಶ್ರೀಶಾವಾಸವಿ(ವಿದ್ಯಶ್ರೀ)ತುಳುನಾಡು ,ಶುಕ್ರಾಚಾರ್ಯರಾಗಿ ವೀಣಾ ನಾಗೇಶ್ ತಂತ್ರಿ ಮತ್ತು ವೀಣಾ ಸರಸ್ವತಿ ನಿಡ್ವಣ್ಣಾಯ, ದೇವೇಂದ್ರನಾಗಿ ಭಾರತಿ ರೈ ಕೌಡಿಚಾರ್ ,ಕಲಿಪುರುಷನಾಗಿ ಪ್ರೇಮಲತಾ ರಾವ್, ವಿಂದ್ಯಾವಳಿಯಾಗಿ ಶಂಕರಿ ಪಟ್ಟೆ ಸಹಕರಿಸಿದರು. ಅದೇ ರೀತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೇಶ್ ಬೆಜ್ಜಂಗಳ ಇವರು ನೆರವೇರಿಸಿ ಶಾಲು ಹಾಗೂ ದೇವರ ಪ್ರಸಾದ ನೀಡಿ ಗೌರವಿಸಿದರು ,ಶ್ರುತಿ ವಿಸ್ಮಿತ್ ಬಲ್ನಾಡು ಮತ್ತು ಶುಭ ಸಹಕರಿಸಿದರು.