ಬಡಗನ್ನೂರು: ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗನ್ನೂರು ಶಾಲಾ ಎಸ್.ಡಿ.ಎಂ.ಸಿ. ಮತ್ತು ಹಿರಿಯ ವಿದ್ಯಾರ್ಥಿ ಸಂಘ ಬಡಗನ್ನೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅನುದಾನದಲ್ಲಿ ನಿರ್ಮಾಣಗೊಂಡ ಶಾಲಾ ನೂತನ ಸಭಾಂಗಣ ಅಭಿಮಾನ ಇದರ ಲೋಕಾರ್ಪಣೆ ಹಾಗೂ ಎಲ್.ಕೆ.ಜಿ ತರಗತಿ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಏ.19 ರಂದು ಬಡಗನ್ನೂರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲಾ ಆವರಣದಲ್ಲಿ ನಡೆಯಿತು.

ಎಲ್. ಕೆ. ಜಿ ತರಗತಿ ಉದ್ಘಾಟನೆ
ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಪುತ್ತೂರು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ರಿಬ್ಬನ್ ಕತ್ತರಿಸುವ ಮೂಲಕ ಎಲ್ ಕೆ ಜಿ ತರಗತಿ ಉದ್ಘಾಟನೆ ಮಾಡಿದರು. ಬಳಿಕ ಪುತ್ತೂರು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ದೊರೆಯುತ್ತದೆ. ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಅಭ್ಯಾಸ ಮಾಡುವ ಮೂಲಕ ಮಕ್ಕಳ ಜ್ಞಾನ ಭಂಡಾರ ಹೆಚ್ಚಿಸುವ ಕೆಲಸ ಶಿಕ್ಷಕರಿಂದ ನಡೆಯುತ್ತಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸುಮಾರು 6 ಸಾವಿರ ಶಾಲೆಗಳಲ್ಲಿ ಏಕ ಶಿಕ್ಷಕರಿಂದ ಸಂಸ್ಥೆ ನಡೆಸುವ ಪ್ರಮೇಯ ಉಂಟಾಗಿದೆ. ಇದರಿಂದ ಸಾಮಾನ್ಯ ವರ್ಗಕ್ಕಿಂತ ಕೆಳಗಿನ ಬಡ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ರಾಜಕೀಯ ರಹಿತ ಹೋರಾಟ ಮಾಡಬೇಕಾಗಿದೆ. ಮಕ್ಕಳ ಬೆಳವಣಿಗೆಗೆ ಶಿಕ್ಷಕರ ಜೊತೆ ಷೋಷಕರ ಜವಾಬ್ದಾರಿ ಇದೆ ಎಂದ ಅವರು ಮುಂದಿನ ದಿನಗಳಲ್ಲಿ ತಮ್ಮ ಅನುದಾನದ ಹೆಚ್ಚಿನ ಭಾಗವನ್ನು ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದರು.
ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಡಗನ್ನೂರು ಗ್ರಾ. ಪಂ ಸದಸ್ಯರುಗಳಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ, ಗಿರಿಮನೆ, ಬಡಗನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ. ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಜಿ ಮಹಮ್ಮದ್ ಬಡಗನ್ನೂರು, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರಾದ ಬಾಲಕೃಷ್ಣ ರೈ ಕುದ್ಕಾಡಿ, ಜಯಂತ ರೈ ಕುದ್ಕಾಡಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಉಜಿರೆ ಎಸ್ ಡಿಯಂ ಕಾಲೇಜಿನ ಉಪನ್ಯಾಸಕ ಡಾ.ರವೀಶ್ ಪಡುಮಲೆ, ಪ್ರಗತಿಪರ ಕೃಷಿಕರಾದ ಕೃಷ್ಣ ರೈ ಕುದ್ಕಾಡಿ ಬಡಗನ್ನೂರು ಹಿರಿಯ ವಿದ್ಯಾರ್ಥಿ ಸಂಘ ಸಲಹೆಗಾರರ ಸತೀಶ್ ರೈ ಕಟ್ಟಾವು, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ, ಸಲಾವುದ್ದೀನ್ ಪದಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಸಲಹೆಗಾರ ಜನಾರ್ದನ ಪೂಜಾರಿ ಪದಡ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ
ರಾತ್ರಿ ಸಭಾ ಕಾರ್ಯಕ್ರಮವು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ , ಬಾಬು ಮೂಲ್ಯ, ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ, ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ರೋಡ್, ಸದಸ್ಯರಾದ ಸುಜಾತ ಮೈಂದನಡ್ಕ, ಧರ್ಮೇಂದ್ರ ಪದಡ್ಕ, ಸವಿತಾ ನೆರೋತ್ತಡ್ಕ, ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಗುರು ರಾಮಣ್ಣ ಗೌಡ, ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಗುರು ಶಂಕರಿ ನಾರಾಯಣ ಪಾಟಾಳಿ, ಬಡಗನ್ನೂರು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮುಖ್ಯಗುರು ಹರಿಣಾಕ್ಷಿ ಎ., ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷರು ಸುರೇಶ್ ರೈ ಪಳ್ಳತ್ತಾರು, ಪಡುಮಲೆ ಶ್ರೀ ಶಾಸ್ತಾರ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿದ ಅಧ್ಯಕ್ಷ ಸುರೇಶ್ ರೖೆ ಪಳ್ಳತ್ತಾರು ವಂದಿಸಿದರು. ಶಾಲಾ ಶಿಕ್ಷಕಿಯರಾದ ರಮ್ಯಾ ಹಾಗೂ ವಿಜಯಲಕ್ಷಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಮಧುಶ್ರೀ, ಗೌರವ ಶಿಕ್ಷಕಿ ಸೌಮ್ಯ ಸಹಕರಿಸಿದರು.
ಸಾಂಸ್ಕೃತಿಕ ಕಲರವ
ಸಂಜೆ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ಮಕ್ಕಳಿಂದ ‘ಸಾಂಸ್ಕೃತಿಕ ಕಲರವ’ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಯೋಜನೆಯಲ್ಲಿ ಶಿವಕುಮಾರ್ ರೈ ನಿರ್ದೇಶನದ ‘ಆಸರೆ ಕಲಾವಿದರು’ ಪಡುಮಲೆ ಇವರ ಅಭಿನಯದ ತುಳು ಹಾಸ್ಯಮಯ ನಾಟಕ ‘ಈರ್ ಏರ್ಂಬೆರೆ…..?’ ನಡೆಯಲಿರುವುದು.
ಅಭಿನಂದನಾ ಕಾರ್ಯಕ್ರಮ
ಶಾಲ ನೂತನ ಸಭಾಂಗಣ ನಿರ್ಮಾಣ ಕಾರ್ಯದಲ್ಲಿ 1ಲಕ್ಷದ 5ಸಾವಿರ ಸಹಾಯ ಧನ ನೀಡಿರುವ ತಿಲೋತ್ತಮ ರೖೆ ಪಡುಮಲೆ ಹಾಗೂ 50,000 ಸಹಾಯ ಧನ ನೀಡಿರುವ ಬಾಲಕೃಷ್ಣ ರೖೆ ಕುದ್ಕಾಡಿ, ನಾರಾಯಣ ರೈ ಕುದ್ಕಾಡಿ, ಸಲಾವುದ್ದೀನ್ ಪದಡ್ಕ, ಜನಾರ್ದನ ಪೂಜಾರಿ ಪದಡ್ಕ ಅವರನ್ನು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಶಾಲು ಹೊದಿಸಿ ಹೂ ಸ್ಮರಣಿಕೆ ನೀಡಿ ಗೌರವಿಸಿದರು.