ಕೃಷಿ ನಾಶಗೊಳಿಸುವ ಹಾವಳಿಯಿಂದ ಪರಿಹಾರ ಕೊಡಿಸುವಂತೆ ಅಖಿಲ ಭಾರತೀಯ ಕಿಸಾನ್ ಮೋರ್ಚಾದಿಂದ ಎ ಸಿಯವರ ಮೂಲಕ ಅರಣ್ಯ ಸಚಿವರಿಗೆ ಮನವಿ

0

ಪುತ್ತೂರು: ರೈತರ ಪ್ರಮುಖ ಸಮಸ್ಯೆ ಕೃಷಿ ನಾಶ ಇದಕ್ಕೆ ಪ್ರಮುಖ ಕಾರಣವಾದ ಮಂಗ,ನವಿಲು, ಹಂದಿ ಹಾವಳಿ ಇದಕ್ಕೆ ಶಾಶ್ವತ ಪರಿವಾರ ಕಲ್ಪಿಸಲು ಮಂಗಗಳಿಗೆ ಮಂಕಿ ಪಾರ್ಕ್, ನವಿಲುಗಳಿಗೆ ನವಿಲು ಪಾರ್ಕ್‌, ಹಂದಿಗಳನ್ನು ನಿಯಂತ್ರಿಸಲು ಕೋವಿಯನ್ನು ಬಳಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಕಿಸಾನ್ ಮೋರ್ಚಾ (AIKM) ಇದರ ವತಿಯಿಂದ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪುತ್ತೂರಿನ ಎ ಸಿ ಸ್ಟೆಲ್ಲಾ ವರ್ಗಿಸ್‌ ಅವರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ರಾಮಣ್ಣ ವಿಟ್ಲ, ಮಹಾವೀರ್ ಜೈನ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಕಾರ್ಯದರ್ಶಿಗಳಾದ ಪ್ರೇಮ ವಿಟ್ಲ, ಸುಧಾರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ, ಮೊಯ್ದು ವಿಟ್ಲ, ಸಜೇಶ್ ವಿಟ್ಲ, ಸುಲೈಮಾನ್ ಕೆಲಿಂಜ, ಸಂಜೀವ ನಾಯಕ್,ಬೆಳ್ತಂಗಡಿ, ದಾಮೋದರ ಹಿರೇಬಂಡಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here