ಕಡಬ: ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ ಕೋಡಿಂಬಾಳ ಹಾಗೂ ಶ್ರೀ ಉಳ್ಳಾಕ್ಲು, ರಾಜನ್ ದೈವಸ್ಥಾನ, ಮಜ್ಜಾರು ಇಲ್ಲಿನ ವಾರ್ಷಿಕ ನೇಮೋತ್ಸವ ಏ.23ರಿಂದ ಏ.24ರವರೆಗೆ ನಡೆಯಲಿದೆ.
ಏ.23ರಂದು ಶ್ರೀ ಮಹಾವಿಷ್ಣು ದೇವರ ಸನ್ನಿಧಾನದಲ್ಲಿ ಪೂರ್ವಾಹ್ನ ಶ್ರೀ ಮಹಾವಿಷ್ಣು ಭಜನಾ ವೃಂದ ಇವರಿಂದ ಭಜನೆ ನಡೆಯಲಿರುವುದು, ಬಳಿಕ ಶ್ರೀ ದೇವರಿಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಕಲಶ ಪೂಜೆ, ಗಣಪತಿ ಹೋಮ, ಕಲಶಾಭಿಷೇಕ, ಜಾಗದ ನಾಗ ತಂಬಿಲ ಮತ್ತು ಪಂಜುರ್ಲಿ ದೈವಕ್ಕೆ ತಂಬಿಲ ನಡೆಯಲಿದೆ. ಸಂಜೆ 6 ಗಂಟೆಗೆ ದೈವಗಳ ಭಂಡಾರ ತೆಗೆದು ರಾತ್ರಿ ಉಳ್ಳಾಕ್ಲು, ಉಳ್ತಾಲ್ತಿ, ಪುರುಷ ದೈವ ಪರಿವಾರ ದೈವಗಳಿಗೆ ನೇಮ, ಪಟ್ಟನ್ದೈವ ವ್ಯಾಘ್ರ ಚಾಮುಂಡಿ, ಪಂಜುರ್ಲಿ ಪರಿವಾರ ದೈವಗಳ ನೇಮ ನಡೆಯಲಿದೆ. ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಏ.24ರಂದು ಬೆಳಿಗ್ಗೆ ರಾಜನ್ ದೈವದ ನೇಮ ನಡೆದು ಪ್ರಸಾದ ವಿತರಣೆ, ಪ್ರಾರ್ಥನೆ, ಹರಿಕೆ ಸಲ್ಲಿಕೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಕೆ. ಕೃಷ್ಣಪ್ರಸಾದ ಭಟ್ ಎಡಪತ್ಯ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.