ʼಜನಿವಾರವನ್ನು ತೆಗೆಸುವ ಪ್ರಯತ್ನ ಮಾಡಿದರೆ ನಮ್ಮ ಸರಕಾರ ಸುಮ್ಮನೆ ಇರುವುದಿಲ್ಲʼ- ಶಾಸಕ ಅಶೋಕ್‌ ರೈ

0

ಪುತ್ತೂರು:ಬ್ರಾಹ್ಮಣ ವಿದ್ಯಾರ್ಥಿಗಳಲ್ಲಿ ಜನಿವಾರ ತೆಗೆಯುವಂತೆ ಹೇಳಿ ಸಿಇಟಿ ಪರೀಕ್ಷೆ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಪ್ರತಿಕ್ರಯಿಸಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ಶಾಸಕ ಅಶೋಕ್‌ ರೈ ಅವರು ʼಸಿಇಟಿ ಪರೀಕ್ಷೆ ಬರೆಯುವ ಹುಡುಗನ ಜನಿವಾರ ತೆಗೆಯಲು ಅಧಿಕಾರಿ ಹೇಳಿರುವಂತಹುದು ವಿವಾದಕ್ಕೆ ಕಾರಣವಾಗಿದೆ. ಜನಿವಾರವನ್ನು ಮುಟ್ಟುವ ಹಕ್ಕು ಯಾರಿಗೂ ಇಲ್ಲ.ಜನಿವಾರವನ್ನು ಮುಟ್ಟಿದರೆ ಜಾಗೃತೆ.ಯಾವುದೇ ಅಧಿಕಾರಿ ಜನಿವಾರವನ್ನು ತೆಗೆಸುವ ಪ್ರಯತ್ನ ಮಾಡಿದರೆ ನಮ್ಮ ಸರಕಾರ ಸುಮ್ಮನೆ ಇರುವುದಿಲ್ಲ.ರಾಜ್ಯದ, ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವಲ್ಲಿ ಸಮಾಜ ಕೂಡ ಬೆನ್ನ ಹಿಂದೆ ನಿಂತಿದೆ.ಆದರಿಂದ ಸರಕಾರ ಇದನ್ನು ಗಂಭೀರವಾಗಿ ತೆಗದುಕೊಳ್ಳುತ್ತದೆ.ಇನ್ನು ಮುಂದೆ ಎಕ್ಸಾಂ ಬರೆಯುವ ಯಾವ ಹುಡುಗನಿಗೂ ಯಾವ ಅಧಿಕಾರಿಯೂ ಕೂಡ ಈ ಜನಿವಾರವನ್ನು ತೆಗೆಯುವಂತದಿಲ್ಲ. ಸರಕಾರ ನಿಮ್ಮ ಬೆನ್ನ ಹಿಂದೆ ನಿಲ್ತದೆ. ನಿಮ್ಮ ಪರವಾಗಿ ನಿಲ್ತದೆ.ಮುಟ್ಟಿದರೆ ಜಾಗೃತೆ ಎಂದು ಈ ಮೂಲಕ ಅಧಿಕಾರಿಗೆ ಖಡಕ್‌ ಸಂದೇಶ ಕಳುಹಿಸಲು ನಾನು ಇಚ್ಚೆ ಪಡ್ತೆನೆ. ಯಾವುದೇ ವಿಚಾರಕ್ಕೂ ಆ ಸಮಾಜದ ಜೊತೆ ನಮ್ಮ ಸರಕಾರ ಇದೆ, ನಾನು ಇದ್ದೇನೆʼ ಎಂದರು.

LEAVE A REPLY

Please enter your comment!
Please enter your name here