ಕಾಶ್ಮೀರದ ಪಹಲ್ಗಾಮ್ ದಾಳಿ ಖಂಡಿಸಿ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

0

ಪುತ್ತೂರು:ಕಾಶ್ಮೀರದ ಪಹಲ್ಗಾಮ್‌ದಲ್ಲಿ ಹಿಂದೂಗಳ ಗುರಿಯಾಗಿಸಿ ಭಯೋತ್ಪಾದಕರ ದಾಳಿ ಖಂಡಿಸಿ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಎ23ರಂದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.

ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಇಸ್ರೇಲ್ ಸೈನ್ಯ ಘಾಝಾದಲ್ಲಿ ಹಮಾಸ್ ಉಗ್ರರನ್ನು ಹೆಡೆಮುರಿಕಟ್ಟಿ, ನಾಶ ಮಾಡಿದಂತೆ ಕಾಶ್ಮೀರದ ಪಹಲ್ಗಾಮ್ ಉಗ್ರರ ಕೃತ್ಯಗಳಿಗೆ ತೀಕ್ಷವಾಗಿ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. ಕಾಶ್ಮೀರ ಘಟನೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜಕಾರಣಿಗಳು, ಬುದ್ದಿ ಜೀವಿಗಳು ಬಾಯಿ ಬಿಡುತ್ತಿಲ್ಲ. ಖಂಡಿಸುತ್ತಿಲ್ಲ. ಅಮಾಯಕ ಮುಗ್ದ ಜೀವಿಗಳನ್ನು ಬಲಿಯಾಗಿದ್ದು ಇದರಲ್ಲಿ ನಮ್ಮ ಮನೆಯವರಾಗುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಅಂಬಿಕಾ ಮಹಾ ವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಾಜೆ ಮಾತನಾಡಿ, 2019ರಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಭಯೋತ್ಪಾದನೆ ನಿಂತಿತ್ತು. ಆ ಬಳಿಕ ಕಾಶ್ಮೀರ ಯಾವ ಪ್ರದೇಶಕ್ಕೂ ತೆರಳುವುದಕ್ಕೂ ಮುಕ್ತವಾಗಿತ್ತು. ಆರ್ಟಿಕಲ್ 370 ರದ್ದಾದ ಬಳಿಕ ಆ ರಾಜ್ಯಕ್ಕೆ ಚುನಾವಣೆ ನಡೆದು ಅಲ್ಲಿ ರಾಜ್ಯ ಸರಕಾರ ಆಡಳಿತ ಬಂದ ನಂತರ ಇಂತಹ ಕೃತ್ಯಗಳು ನಡೆಯುತ್ತಿದ್ದು ಕಾಶ್ಮೀರ ರಾಜ್ಯ ಸರಕಾರದ ಆಡಳಿತವೇ ನೇರ ಹೊಣೆಯಾಗಿದೆ.

ಅಡಳಿತ ನಡೆಸುವ ಸರಕಾರವೇ ಭೀಬತ್ಸ ಕೃತ್ಯಕ್ಕೆ ಸಾಕ್ಷಿಯಾಗಿದೆ. ಕಾಶ್ಮೀರದ ಶೋಷಣೆ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ದ ಹೇಳಿಕೆ, ಖಂಡನೆಗೆ ಸೀಮಿತವಾಗದೇ ತಕ್ಕ ಶಾಸ್ತಿಯಾಗಬೇಕು. ಪಾಕಿಸ್ಥಾನದ ಕುಮ್ಮಕ್ಕಿನಿಂದ ದಾಳಿ ನಡೆದಿದ್ದು ಪಾಕಿಸ್ಥಾನ ಪ್ರೇರಿತ ದಾಳಿಯಾಗಿದೆ. ದಾಳಿ ನಡೆಸಿದವರನ್ನು ಹಾಗೂ ಇದಕ್ಕೆ ಪ್ರೇರಣೆ ನೀಡಿದವರಿಗೂ ತಕ್ಕ ಶಾಸ್ತಿಯಾಗಬೇಕು. ಮತ್ತೋಮ್ಮೆ ಸರ್ಜಿಕಲ್ ಸ್ಟ್ರೈಕ್ ಆಗಬೇಕು. ಹಿಂದಿನ ಸರಕಾರ ಮಾಡಿದ ತಪ್ಪಿನಿಂದ ಕಾಶ್ಮೀರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಧರ್ಮಶಿಕ್ಷಣ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರ ದುರಂತದಿಂದ ಭಾರತೀಯರ ಹೃದಯಗಳಿಗೆ ಆಗಾತವಾಗಿದೆ. ಈ ದುರಂತವನ್ನು ಯಾರೂ ತಡೆದುಕೊಳ್ಳುವ ವಿಚಾರವಲ್ಲ. ಇದನ್ನು ಕೇವಲ ಖಂಡನೆಯಿಂದ ತೃಪ್ತಿಯಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗುವಂತೆ ಪ್ರಧಾನಿ ಹಾಗೂ ಗೃಹ ಸಚಿವರ ಆದೇಶಿಸಬೇಕು. ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಭಾರತಕ್ಕೆ ಸೇರುವ ತನಕ ತೃಪ್ತಿಯಿಲ್ಲ. ಅಧಿಕಾರದ ಗದ್ದುಗೆಗಾಗಿ ಅಡಳಿತ ನಡೆಸುವವರು ನಾನಾ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಧರ್ಮ ಶಿಕ್ಷಣ ತಾಲೂಕು ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಮುಸ್ಲಿಮರು ಎಲ್ಲರೂ ಭಯೋತ್ಪಾದಕರಲ್ಲ. ಪಾಕಿಸ್ತಾನದ ಭಯೋತ್ಪಾದಕ ಮುಸ್ಲಿಮರು ಭಾರತಕ್ಕೆ ಹಾನಿಯುಂಟುಮಾಡುತ್ತಿದ್ದಾರೆ. ನಾವು ಭಯೋತ್ಪಾದಕರ ವಿರೋಧಿಗಳು ಮಾತ್ರ. ಮುಸ್ಲಿಮರ ವಿರೋಧಿಗಳಲ್ಲ. ಭಾರತದಲ್ಲಿ ಮುಸ್ಲಿಮರಿಗೆ ಇರುವಷ್ಟು ರಕ್ಷಣೆ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಯಾರೂ ಭಯೋತ್ಪಾದಕರನ್ನು ಬೆಂಬಲಿಸಬಾರದು. ದೇಶದ ರಕ್ಷಣೆ ಹಿಂದುಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗಕರೀಕರ ಸಹಕಾರ ಅಗತ್ಯ. ದೇಶದ ರಕ್ಷಣೆಯಲ್ಲಿ ಮುಸ್ಲಿಮರೂ ಕೈಜೋಡಿಸಬೇಕು ಎಂದರು

ದ್ವಿತೀಯ ಬಿ.ಎ ವಿದ್ಯಾರ್ಥಿನಿ ಯಕ್ಷಿತಾ ಮಾತನಾಡಿ, ಪ್ರವಾಸಿ ತಾಣವಾದ ಕಾಶ್ಮೀರದಲ್ಲಿ ಧರ್ಮದ ಹೆಸರಿನಲ್ಲಿ ಹಿಂದುಗಳ ಹತ್ಯೆಯಾಗುತ್ತಿದೆ. ಬಾಂಗ್ಲಾ ದೇಶದಲ್ಲಿ ನಡೆಯುತ್ತಿದ್ದ ಕೃತ್ಯಗಳು ಕಾಶ್ಮೀರಕ್ಕೂ ಬಂದಿದ್ದು ಮುಂದೆ ನಮಗೂ ಬರಬಹುದು. ಹೀಗಾಗಿ ನಾವು ಒಗ್ಗಟ್ಟಾಗಬೇಕಾದ ಆವಶ್ಯಕತೆಯಿದೆ. ಕಾಶ್ಮೀರ ವಿದ್ಯಾರ್ಥಿಗಳಿಗೆ ಪುತ್ತೂರಿನಲ್ಲಿ ಸರಕ್ಷಿತವಾಗಿ ವಿದ್ಯಾಭ್ಯಾಸ ಪಡೆಯಬಹುದು. ಆದರೆ ಪುತ್ತೂರಿನ ವಿದ್ಯಾರ್ಥಿಗಳಿಗೆ ಕಾಶ್ಮೀರದಲ್ಲಿ ರಕ್ಷಣೆಯಿಲ್ಲ. ನಮ್ಮ ಸೈನಿಕರಿಗೆ ನಾವು ನೈತಿಕ ಬೆಂಬಲ ನೀಡಬೇಕು ಎಂದರು.

ಧರ್ಮ ಶಿಕ್ಷಣ ಸಮಿತಿಯ ಮಾಧವ ಸ್ವಾಮಿ, ವಿಶ್ವಹಿಂದು ಪರಿಷತ್‌ನ ಜನಾರ್ದನ ಬೆಟ್ಟ, ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚಂದ್ರಕಾಂತ ಘೋರೆ ಸ್ವಾಗತಿಸಿ, ವಂದಿಸಿದರು.

ಕಾಶ್ಮೀರದಿಂದ ಹಿಂದುಗಳನ್ನು ಹೊರಹಾಕುವ ಪ್ರಮುಖ ಉದ್ದೇಶದಿಂದ ಹಿಂದುಗಳನ್ನು ಗುರಿಯಾಗಿ ಈ ರೀತಿ ದಾಳಿಗಳು ನಡೆಯುತ್ತಿದೆ. 1990ರಲ್ಲಿ ಘಟನೆ ಮತ್ತೆ ಪುನರಾವರ್ತನೆಯಾಗುತ್ತಿದೆ. ಅಮರನಾಥ ಯಾತ್ರೆ ಬ್ಯಾನ್ ಮಾಡುವ ಉದ್ದೇಶದಿಂದಲೂ ಈ ಪ್ರಯತ್ನ ನಡೆಯುತ್ತಿದೆ. ಯಾವತ್ತೂ ಹಿಂದುಗಳು ಎದೆಗುಂದುವುದಿಲ್ಲ. ಮತ್ತೊಮ್ಮೆ ಕಾಶ್ಮೀರದತ್ತ ಧಾವಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಶ್ಮೀರ ಬಿಡುವ ಪ್ರಶ್ನೆಯೇ ಇಲ್ಲ. 140ಕೋಟಿ ಹಿಂದುಗಳು ಭಾರತದಲ್ಲಿರುವ ತನಕ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದುಗಳನ್ನು ಕಾಶ್ಮೀರದಿಂದ ನಿರ್ವಸಿತರನ್ನಾಗಿ ಮಾಡಲು ಸಾಧ್ಯವಿಲ್ಲ.
-ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು, ಅಂಬಿಕಾ ಸಮೂಹ ಸಂಸ್ಥೆಗಳು

LEAVE A REPLY

Please enter your comment!
Please enter your name here