ಅರಿಯಡ್ಕ ಜಮಾಅತ್ ವತಿಯಿಂದ ಇಬ್ಬರು ಹಜ್ಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಹಜ್ಜ್ ಯಾತ್ರಾರ್ಥಿಗಳಿಬ್ಬರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಅರಿಯಡ್ಕ ಮದ್ರಸ ಹಾಲ್ ನಲ್ಲಿ ನಡೆಯಿತು. ಜಮಾಅತ್ ಖತೀಬ್ ಅಬ್ದುಲ್ ಜಲೀಲ್ ಸಖಾಫಿಯವರು ಹಜ್ಜ್ ಕರ್ಮದ ಮಹತ್ವ ಹಾಗೂ ವಿಧಿ ವಿಧಾನಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿಯವರು ತಾನು ಹಜ್ ನಿರ್ವಹಿಸಿದ ಸಂದರ್ಭದ ನೆನಪುಗಳನ್ನು ಮೆಲುಕು ಹಾಕಿ ಕೆಲವು ಸಲಹೆಗಳನ್ನು ಯಾತ್ರಾರ್ಥಿಗಳೊಂದಿಗೆ ಹಂಚಿಕೊಂಡರು.

ಈ ವರ್ಷದ ಹಜ್ಜ್ ಯಾತ್ರೆ ಕೈಗೊಳ್ಳುವ ಪಿ.ಎಂ ಶಾಫಿ ಮತ್ತು ಮುನೀರ್ ಕಾವೇರಿ ಯವರಿಗೆ ಜಮಾಅತ್ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಉಸ್ತಾದರುಗಳು ಸೇರಿ ಶಾಲು ಹೊದಿಸಿ ಶುಭ ಹಾರೈಸಿದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಬ್ಬಾಸ್ ಹಾಜಿ, ಉಪಾಧ್ಯಕ್ಷ ಎ. ಆರ್ ಇಬ್ರಾಹಿಂ, ಜೊತೆ ಕಾರ್ಯದರ್ಶಿ ಮಹಮ್ಮದ್ ಎ ಎಸ್, ಸದಸ್ಯರುಗಳಾದ ಪಿ. ಎಂ ಹನೀಫ್ ಲೀಮಾ, ಯೂಸುಫ್ ಕೋರಿಕಾರ್, ಯೂಸುಫ್ ಹಾಜಿ ಪಿ.ಎಂ, ಹನೀಫ್ ಪಟ್ಲಕಾನ, ಪಿ.ಎಂ ಆದಮ್ ಕುಂಞಿ, ಅಬೂಬಕ್ಕರ್ ಮುಸ್ಲಿಯರ್, ಅಬ್ಬಾಸ್ ಜೆ, ಸುಲೇಮಾನ್ ಡಿ, ಖಾದರ್ ಚಕ್ಕನಡ್ಕ, ಮಹಮ್ಮದ್ ಕೆ, ಕರೀಮ್ ಹಾಜಿ ಕಾವೇರಿ, ಅಬ್ಬಾಸ್ ಅಂಗಡಿ, ಕಾಸಿಂ ಪಿ, ಇಬ್ರಾಹಿಂ ಮಡಿಕೇರಿ, ಅಬೂಬಕ್ಕರ್ ಜೆ, ಸಲಾಂ ಝುಹ್ರಿ, ಸಂಶುದ್ದೀನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಸದರ್ ಉಸ್ತಾದ್ ಅಬ್ದುಲ್ ಕರೀಂ ಬಾಹಸನಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here