ಉಪ್ಪಿನಂಗಡಿ: ಇಂದು ಪಾದುಕ ಯಾತ್ರೆ ಆಗಮನ

0

ಉಪ್ಪಿನಂಗಡಿ: ಪರಮಪೂಜ್ಯ ಸದ್ಗುರು ಶ್ರೀ ಸುಧೀಂದ್ರತೀರ್ಥ ಗುರುಗಳ ಪಾದುಕಯಾತ್ರೆ ಎ.24ರಂದು ಸಂಜೆ ಪುತ್ತೂರಿನಿಂದ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯಕ್ಕೆ ಆಗಮಿಸಲಿದೆ.
ಪಾದುಕ ಯಾತ್ರೆ ಪೂರ್ಣಕುಂಭ ಸ್ವಾಗತ ನೀಡಿ ರಾತ್ರಿ ಪೂಜೆ ನಡೆಯಲಿದೆ.
ಎ.25ರಂದು ಪೂರ್ವಾಹ್ನ 7ಗಂಟೆಗೆ ವ್ಯಾಸೋಪಾಸನೆ- ವಿಷ್ಣು ಸಹಸ್ರನಾಮ ಪಠಣ, ಮಧ್ಯಾಹ್ನ ಶ್ರೀ ಗುರುಪಾದುಕ ಪೂಜೆ, ಮಧ್ಯಾಹ್ನ ಪೂಜೆಯಾಗಿ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಶ್ರೀ ಗುರು ನೃತ್ಯರೂಪಕ, ಗುರು ಪಾದುಕ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಎ.26ರಂದು ಧಾರ್ಮಿಕ ವಿಧಿ-ವಿಧಾನ ನಡೆದು ರಾತ್ರಿ ಶ್ರೀಗುರು ಪಾದುಕಾ ಪೇಟೆ ಉತ್ಸವ ನಡೆಯಲಿದೆ. ರಾತ್ರಿ ಪೂಜೆ ನಡೆಯಲಿದೆ. ಎ.27ರಂದು ಧಾರ್ಮಿಕ ವಿಧಿ- ವಿಧಾನಗಳು ನಡೆದು, ರಾತ್ರಿ ಶ್ರೀ ಗುರುಪಾದುಕ ಯಾತ್ರೆಯನ್ನು ಉಜಿರೆಗೆ ಬೀಳ್ಕೊಡುವುದಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here