ಪುತ್ತೂರಿನಲ್ಲಿ ‘ಏರ್‌ಟೆಲ್ ಸ್ಟೋರ್’ ಶುಭಾರಂಭ

0

ನವೀನತೆಯ ಹೊಸ ಬಾಗಿಲು ತೆರೆದಂತಾಗಿದೆ: ಅಬ್ದುರ್ರಹ್ಮಾನ್ ಯುನಿಕ್

ಉಪ್ಪಿನಂಗಡಿ: ಪುತ್ತೂರಿನ ಹೃದಯ ಭಾಗದಲ್ಲಿರುವ ಹಳೆ ಅರುಣಾ ಟಾಕೀಸ್ ಬಳಿಯ ಮಹಾಲಕ್ಷ್ಮೀ ಕೋಲ್ಡ್ ಹೌಸ್ ಎದುರುಗಡೆ ಏರ್‌ಟೆಲ್ ಸಂಸ್ಥೆಯ ಅಧಿಕೃತ ಶೋ ರೂಂ ‘ಏರ್‌ಟೆಲ್ ಸ್ಟೋರ್’ ಎ.24ರಂದು ಶುಭಾರಂಭಗೊಂಡಿತು.


ಏರ್‌ಟೆಲ್‌ನ ಝೋನಲ್ ಸೇಲ್ಸ್ ಮೆನೇಜರ್ ಜೋಯಪ್ಪ ಸಿ.ಎಸ್. ದೀಪ ಬೆಳಗುವ ಮೂಲಕ ಏರ್‌ಟೆಲ್ ಸ್ಟೋರ್ ಅನ್ನು ಉದ್ಘಾಟಿಸಿದರು. ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಉಪ್ಪಿನಂಗಡಿ ಮತ್ತು ಪುತ್ತೂರು ತಾಲೂಕಿನ ಏರ್‌ಟೆಲ್‌ನ ಅಧಿಕೃತ ವಿತರಕರಾಗಿರುವ ಪ್ರಶಾಂತ್ ಡಿಕೋಸ್ತ ಅವರು, ಕಳೆದ 20ವರ್ಷಗಳಿಂದ ಏರ್‌ಟೆಲ್‌ನ ವಿತರಕರಾಗಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಈಗ ಪುತ್ತೂರು ನಗರದಲ್ಲಿಯೂ ಏರ್‌ಟೆಲ್‌ನ ಹೊಸ ಶೋರೂಂ ಇಂದು ಶುಭಾರಂಭಗೊಂಡಿದ್ದು, ಪುತ್ತೂರಿನಲ್ಲಿ ನವೀನತೆಯ ಹೊಸ ಬಾಗಿಲು ತೆರೆದಂತಾಗಿದೆ. ಈ ಶೋರೂಂ ಕೇವಲ ಒಂದು ಮಳಿಗೆಯಲ್ಲ. ಈ ಮೂಲಕ ಪುತ್ತೂರಿನ ಜನರ ಸಂಪರ್ಕ ಹತ್ತಿರವಾಗಲಿದೆ. ಉತ್ತಮ ಸೇವೆ ಜನರಿಗೆ ಲಭಿಸಲಿದೆ. ಇದರಿಂದಾಗಿ ಪುತ್ತೂರಿನಲ್ಲಿ ಇಂಟರ್‌ನೆಟ್ ವೇಗ ಜಾಸ್ತಿಯಾಗಲಿದೆ. ಇದರೊಂದಿಗೆ ಇತರ ಸೌಲಭ್ಯಗಳು ಜಾಸ್ತಿಯಾಗಲಿವೆ. ಜನತೆಯ ವಿಶ್ವಾಸಾರ್ಹ ಬ್ರಾಂಡ್ ಆದ ಏರ್‌ಟೆಲ್‌ನ ಈ ಹೊಸ ಶೋರೂಂನಲ್ಲಿ ನೀವು ಸಹಭಾಗಿಗಳಾಗಿ. ಎತ್ತನ ಕೋಗಿಲೆ, ಎತ್ತನ ಮಾಮರ ಎತ್ತನಿಂದೆತ್ತನ ಸಂಬಂಧದಂತೆ ಇಂದು ಏರ್‌ಟೆಲ್‌ನ ಸಂಬಂಧ ಜನರ ಬದುಕಿನೊಂದಿಗೆ ಬೆರೆತಿದೆ ಎಂದರು.


ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲಕರಾದ ಸತೀಶ್ ನಾಯಕ್, ಏರಿಯಾ ಸೇಲ್ಸ್ ಮೆನೇಜರ್ ಮುಹಮ್ಮದ್ ಅನೀಸ್ ಉಪಸ್ಥಿತರಿದ್ದರು.


ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಏರ್‌ಟೆಲ್ ವಿತರಕರಾಗಿರುವ ಪ್ರಶಾಂತ್ ಡಿಕೋಸ್ತ ಅವರು, ಏರ್‌ಟೆಲ್‌ಗೆ ಸಂಬಂಧಪಟ್ಟ ಎಲ್ಲಾ ಸಿಮ್ ಕಾರ್ಡ್‌ಗಳೂ, ಎಂಎನ್‌ಪಿ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಏರ್‌ಟೆಲ್ ವೈಫೈಯೊಂದಿಗೆ ಡಿ.ಟಿ.ಎಚ್. ಹಾಗೂ ಅನಿಯಮಿತ ಡಾಟ ಸೇರಿದಂತೆ ಏರ್‌ಟೆಲ್‌ಗೆ ಸಂಬಂಧಪಟ್ಟ ಎಲ್ಲಾ ಸೇವೆಗಳು ಒಂದೇ ಸೂರಿನಲ್ಲಿ ಇದೀಗ ಲಭ್ಯವಾಗುವಂತಾಗಿದೆ. ಆದ್ದರಿಂದ ಸರ್ವರೂ ಸಹಕಾರ ನೀಡಬೇಕು ಎಂದರು.


ಈ ಸಂದರ್ಭ ಏರ್‌ಟೆಲ್‌ನ ಹೊಸ ಸೌಲಭ್ಯಗಳನ್ನು ಕೇಕ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಭರತ್ ವಂದಿಸಿದರು. ಭುವನೇಶ್ವರಿ, ಜಯಲಕ್ಷ್ಮೀ, ಲಾವಣ್ಯ, ಸಚಿನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here