ಕಡಬ: ಪಂಜ ವಲಯ ಅರಣ್ಯ ವ್ಯಾಪ್ತಿಯ ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ ಅರಣ್ಯಾಽಕಾರಿಗಳ ತಂಡ ಕೆಜಿಗಟ್ಟಲೆ ಕಾಡು ಪ್ರಾಣಿಯ ಮಾಂಸ ಬಂದೂಕು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.
ನೂಜಿಬಾಳ್ತಿಲ ಗ್ರಾಮದ ಪಟ್ಟಣ ತೇಗಿಲ್ ಕಳಜಾಲು ನಿವಾಸಿ ವರ್ಗಿಸ್ ತೋಮಸ್ ಎಂಬವರಿಗೆ ಸೇರಿದ ಮನೆಗೆ ದಾಳಿ ಮಾಡಲಾಗಿದ್ದು ಆರೋಪಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮನೆಯ ಫ್ರಿಡ್ಜ್ ನಲ್ಲಿ ಕಾಡು ಪ್ರಾಣಿಯ ಮಾಂಸ ಮತ್ತು ಪದಾರ್ಥ ಇದ್ದುದನ್ನು ಪತ್ತೆ ಹಚ್ಚಿದ್ದಾರೆ.
ದಾಳಿ ಸಂದರ್ಭ ಕಾಡು ಕೋಣದ ಮಾಂಸ, ಒಂದು ಬಂದೂಕು ಮತ್ತು ಮಾಂಸ ಸಾಗಾಟಕ್ಕೆ ಬಳಸಿದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವರ್ಗೀಸ್ ತೋಮಸ್ ಪರಾರಿಯಾಗಿದ್ದರು ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ. ಪಂಜ ಉಪವಲಯ ಅರಣ್ಯಾಧಿಕಾರಿ ಅಜಿತ್, ಸುನಿಲ್, ಯಶೋಧರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
Home ಇತ್ತೀಚಿನ ಸುದ್ದಿಗಳು ನೂಜಿಬಾಳ್ತಿಲ: ಮನೆಯೊಂದಕ್ಕೆ ಅರಣ್ಯ ಇಲಾಖೆ ದಾಳಿ – ಕಾಡು ಪ್ರಾಣಿಯ ಮಾಂಸ ಸಹಿತ ಬಂದೂಕು ವಶ