ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಜ್ಞಾನ ಜ್ಯೋತಿ ಬೇಸಿಗೆ ಶಿಬಿರದ ಶಿಬಿರಾರ್ಥಿಗಳಿಂದ ಹೊರ ಸಂಚಾರ, ಪ್ರೇಕ್ಷಣಿಯ ಸ್ಥಳ ವೀಕ್ಷಣೆ ಮಾಡಲಾಯಿತು. ಕುರಿಯಾಜೆ ತಿರುಮಲೇಶ್ ಭಟ್ ಇವರ ಉದ್ಯಾನವನದಲ್ಲಿ ವಿವಿಧ ಪ್ರೇಕ್ಷಣಿಯ ಸ್ಥಳವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ತಿರುಮಲೇಶ್ ಭಟ್ ಅವರು ಮಕ್ಕಳಿಗೆ ತಮ್ಮ ವನದಲ್ಲಿ ಬೆಳೆಸಿದ ವಿವಿಧ ತಳಿಯ ವಿದೇಶಿ ಗಿಡಗಳು ಹಾಗೂ ವಿದೇಶಿ ಹಸುಗಳ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಮೇಶ್ ಗೌಡ ಅಗಳಿ, ವಿಜೇತ್ ಮುಂಡಾಳ, ಅನಿಲ್ ಖಂಡಿಗ, ರಕ್ಷಿತ್ ಕೂಂಕ್ಯ, ನಾರ್ಣಪ್ಪ ಗೌಡ ಕೂಂಕ್ಯ, ದಿನೇಶ್ ಆಚಾರ್ಯ ಸವಣೂರು, ಶಿವರಾಮ ಗೌಡ ಅಗಳಿ, ರಾಧಾಕೃಷ್ಣ ಅಗಳಿ, ಹಾಗೂ ಶಿಬಿರದ ನಿರ್ದೇಶಕ ರಾಕೇಶ್ ಆಚಾರ್ಯ ಬನಾರಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಬೆಳಂದೂರು: ಜ್ಞಾನ ಜ್ಯೋತಿ ಬೇಸಿಗೆ ಶಿಬಿರದ ಮಕ್ಕಳಿಂದ ಹೊರ ಸಂಚಾರ- ಪ್ರೇಕ್ಷಣಿಯ ಸ್ಥಳ ವೀಕ್ಷಣೆ