ಪುತ್ತೂರು: ಪೆರ್ನೆ ಶ್ರೀ ರಾಮಚಂದ್ರ ಪ.ಪೂ ವಿದ್ಯಾಲಯದ ಆವರಣದಲ್ಲಿ MRPL ವತಿಯಿಂದ 42ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ ಎ.26ರಂದು ನಡೆಯಿತು.
ವಿಧಾನ ಪರಿಷತ್ ಸದಸ್ಯ, ಶಾಸಕ ಎಸ್ ಎಲ್ ಭೋಜೇಗೌಡ ನೂತನ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದರು

ಕಾರ್ಯಕ್ರಮವನ್ನು ದ,ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ದೀಪ ಪ್ರಜ್ವಲಣೆಗೈದು ಉದ್ಘಾಟಿಸಿದರು.ಮಂಗಳೂರು ಎಮ್ ಆರ್ ಪಿ ಎಲ್ ಸೀನಿಯರ್ ಮಾರ್ಕೆಟ್ ಮ್ಯಾನೇಜರ್ ದಯಾನಂದ ಪ್ರಭು, ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಮುಖ್ಯ ಅತಿಥಿಗಳಾಗಿ ಭಾಗವಹಸಿದರು. ಸಂಸ್ಥೆಯ ಸಂಚಾಲಕ ಹರೀಶ್ ಭಂಡಾರಿ ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಬದಲ್ಲಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಶೇಖರ್ ರೈ.ಕೆ, ಪ್ರೌಢಶಾಲೆ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ ಕೆ.ಎಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಲೋಬೊ,ಸಮಿತಿಯ ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ.ಪೂ ಕಾಲೇಜಿನ ಪ್ರಾಂಶುಪಾಲ ಶೇಖರ್ ರೈ ಸ್ವಾಗತಿಸಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ ಕೆ.ಎಂ ವಂದಿಸಿ, ಕನ್ನಡ ಪ್ರಾಧ್ಯಾಪಕ ಗಣೇಶ್ ರೈ ನಿರೂಪಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್ ಮತ್ತು 58 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ, ಸನ್ಮಾನ
ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್ ಮತ್ತು 58 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಸಂಜೆಯ ಬಳಿಕ ನಡೆಯಲಿದ್ದು, ವಯೋ ನಿವೃತ್ತಿಗೊಳ್ಳುತ್ತಿರುವ ಹಿರಿಯ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ. ಆರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.