‘ಚಿಣ್ಣರು ಚಿನ್ನವಾಗಿರಲಿ’ ಸಮಸ್ತ ಮದರಸ ‘ಪಾರ್ಟ್ನರ‍್ಸ್ ಮೀಟ್’ ಪಂಚಮಾಸಿಕ ಅಭಿಯಾನ

0

ಪುತ್ತೂರು: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದರಸಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿನೂತನ ಶೈಲಿಯಲ್ಲಿ ಪಠ್ಯ ಪುಸ್ತಕಗಳು ಪರಿಷ್ಕರಣೆಗೊಂಡ ಹಿನ್ನಲೆಯಲ್ಲಿ ಪೋಷಕರ ಸಭೆಗಳನ್ನು ಕೂಡ ವಿಶಿಷ್ಟ ರೀತಿಯಲ್ಲಿ ಆಯೋಜಿಸಲು ಸಮಸ್ತ ಆದೇಶಿಸಿದೆ.
ಸಮಸ್ತದ ಶಿಕ್ಷಣಾಧಿಕಾರಿಗಳಾದ ಮುಫತ್ತಿಸ್ ಗಳ ನೇತೃತ್ವದಲ್ಲಿ “ಚಿಣ್ಣರು ಚಿನ್ನವಾಗಿರಲಿ” ಎಂಬ ಶೀರ್ಷಿಕೆಯಲ್ಲಿ ಏಪ್ರಿಲ್-ಆಗಸ್ಟ್ ಪಂಚ ಮಾಸಿಕ ಅಭಿಯಾನ ನಡೆಯಲಿದ್ದು ಪೇರೆಂಟ್ಸ್ ಮೀಟ್ ಬದಲಾಗಿ ಪಾರ್ಟ್ನರ್ಸ್ ಮೀಟ್ ಎಂಬುದಾಗಿ ಕಾರ್ಯಕ್ರಮದ ಆಯೋಜನೆಯಲ್ಲಿಯೇ ಹೊಸತನವನ್ನು ತರಲಾಗಿದೆ.‌


ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಪ್ರಕ್ರಿಯೆಗಳಲ್ಲಿ ಹಾಗೂ ಮದರಸ ಆಡಳಿತ ನಿರ್ವಹಣೆಯ ಕರ್ತವ್ಯಗಳಲ್ಲಿ ಸಮಾನ ಪಾಲುದಾರರಾಗಿರಬೇಕೆಂಬುದು ಈ ಅಭಿಯಾನದ ಉದ್ದೇಶವಾಗಿದ್ದು ಮಕ್ಕಳ ಬೆಳವಣಿಗೆ, ಪ್ರತಿಭೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪಾಲಕರೊಂದಿಗೆ ಭವಿಷ್ಯ ನಿರ್ಮಾಣಕ್ಕಾಗಿ ದಿಟ್ಟ ಹೆಜ್ಜೆಯಿಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ.
ಮಕ್ಕಳಲ್ಲಿರುವ ಚಿನ್ನದಂತ ಮೌಲ್ಯಗಳನ್ನು ಬೆಳಗಿಸಲು ಮದರಸ ಮತ್ತು ಮನೆ ಹೇಗೆ ಸಹಭಾಗಿಯಾಗಬೇಕೆಂಬುದರ ಬಗ್ಗೆ ಪ್ರಭಾವಶಾಲಿ ಪ್ರಭಾಷಣಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಪ್ರಗತಿ ಕುರಿತು ಪಾಲಕರು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ, ಮಕ್ಕಳ ಮುಂದಿನ ಶೈಕ್ಷಣಿಕ ಹಾದಿಯಲ್ಲಿ ಮದರಸದೊಂದಿಗೆ ಜೊತೆಯಾಗಿ ಕೆಲಸ ಮಾಡುವ ಸಂಕಲ್ಪ, ಪಾಲಕರು ಶಿಕ್ಷಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ, ತಮ್ಮ ಮಕ್ಕಳ ಬಗ್ಗೆಯಾದ ವಿಚಾರಣೆಗಳು, ಮಕ್ಕಳ ಕಲೆ ಮತ್ತು ಪಠ್ಯೇತರ ಚಟುವಟಿಕೆಗಳ ಪ್ರದರ್ಶನಗಳು, ಆಲ್ಫಾ ಜನರೇಶನ್ ವಿದ್ಯಾರ್ಥಿಗಳನ್ನು ಆಧುನಿಕ ಅಲಂಕಾರಗಳ ಜೊತೆಗೆ ಆಧ್ಯಾತ್ಮಿಕ ಶಿಕ್ಷಣಕ್ಕೂ ಒತ್ತು ನೀಡಿ ಚಿನ್ನದಂತೆ ಬಾಹ್ಯ ಮತ್ತು ಆಂತರಿಕವಾಗಿ ಪ್ರಶೋಭಿತರಾಗಿಸಲು ವಿವಿಧ ರೀತಿಯ ಮೋಟಿವೇಶನ್‌ಗಳು ಈ ಅಭಿಯಾನದಲ್ಲಿ ನಡೆಯಲಿದೆ.
ಸಂತಾನಗಳು ಸೌಂದರ್ಯವಾಗಿದ್ದಾರೆ ಎಂಬ ಪವಿತ್ರ ಕುರ್‌ಆನಿನ ಆಶಯ ಈ ಕಾರ್ಯಕ್ರಮದ ಸ್ಫೂರ್ತಿಯಾಗಿದ್ದು, ಮಕ್ಕಳ ಕುತೂಹಲದಲ್ಲಿರುವ ನವಜೀವನದ ಅಲೆ, ಅವರ ಕನಸುಗಳಲ್ಲಿ ಇರುವ ಭವಿಷ್ಯದ ಬೆಳಕು, ಬುದ್ಧಿ-ಪ್ರೀತಿ-ಕೌಶಲ-ಸಹಾನುಭೂತಿ ತುಂಬಿದ ಅವರ ಮನಸ್ಸಿನ ಸೌಂದರ್ಯವನ್ನು ನಾವು ಗುರುತಿಸಿ ಅವರನ್ನು ಬೆಳೆಸಿ ಅವರೊಂದಿಗೆ ಬೆಳೆಯುದನ್ನು ನಾವು ಕಲಿಯಬೇಕಿದೆ.

ಈ ನಿಟ್ಟಿನಲ್ಲಿ ಪ್ರತಿ ಮದರಸಗಳನ್ನು ಕೇಂದ್ರೀಕರಿಸಿ ಈ ಸಂಭ್ರಮವನ್ನು ಆಯೋಜಿಸಲಾಗುತ್ತದೆಯೆಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here