ವಿಶ್ವದಲ್ಲಿರುವ ಒಂದಲ್ಲ ಒಂದು ಪುಸ್ತಕ ಒಂದು ಆಲೋಚನೆಗಳನ್ನು ಜನರ, ಓದುಗರ ಮುಂದಿಡುತ್ತದೆ. ಅದು ಒಳ್ಳೆಯದೋ, ಕೆಟ್ಟದ್ದೋ ಎರಡನೇ ಮಾತು ಆದರೆ ಅದರಲ್ಲಿ ಒಂದಷ್ಟು ಜ್ಞಾನವನ್ನು ಕೊಡುವ, ಪರಿಪೂರ್ಣವಾಗಿಸುವ ಸಂಗತಿಗಳು ಇದ್ದೇ ಇರುತ್ತದೆ. ಪುಸ್ತಕದಿಂದ ಮಸ್ತಕವನ್ನು ತುಂಬಿಸುವ ಅಗತ್ಯತೆಯೂ ಬಹಳಷ್ಟಿದೆ.
ಈಗ ಜಗತ್ತಿನ ಪುಸ್ತಕದ ಕಡೆಗಿಂತಲೂ ಕರ್ನಾಟಕದ ಜನರ ಮನಸ್ಸನ್ನು ಗೆದ್ದ ಪುಸ್ತಕದ ಕುರಿತು ಒಂದೆರಡು ಮಾತನಾಡೋಣ. ಈ ಪುಸ್ತಕ ಕುಗ್ಗಿದವನನ್ನು ಹಿಗ್ಗಿಸುವ ಶಕ್ತಿಯುಳ್ಳ ಅಕ್ಷರ ಸಂಜೀವಿನಿ ಎಂದು ಸಂಬೋಧಿಸಿದರೂ ತಪ್ಪಾಗಲಾರದು. ನನ್ನಿಂದ ಸಾಧ್ಯವಿಲ್ಲ ಎಂದವನಿಗೆ ಸಾಧ್ಯವಾಗಿಸುವ ಒಂದು ದಾರಿಯಾಗಿಯೂ, ಸಂಬಂಧಗಳಿಗೆ ಬೇಕಾದ ಸಾರವಾಗಿಯೂ, ನಿಲ್ಲಬಲ್ಲ ಕೈಪಿಡಿ ಯಾವುದಾಗಿರಬಹುದು ಎಂದು ನೀವು ಓದುತ್ತಿದ್ದರೆ ಅದಕ್ಕುತ್ತರ ʼಮನಸು ಮಾತಾಡಿತುʼ.
ಅನೇಕ ನೈಜ ವ್ಯಕ್ತಿಗಳ ಆಧಾರಿತವಾಗಿ, ಅವರದೇ ಮಾತುಗಳಿಂದ ಕನ್ನಡಿಗರ ಹೃದಯ ಗೆದ್ದ ಕನ್ನಡದ ಪತ್ರಕರ್ತ ಹಾಗೂ ಬರಹಗಾರ ಎ ಆರ್ ಮಣಿಕಾಂತ್ ಅವರು ನೀಡಿದ ನಿಲೀಮಾ ಪ್ರಕಾಶನದ ಅಮೃತ ಸಂಜೀವಿನಿ ಪುಸ್ತಕವೇ ಮನಸು ಮಾತಾಡಿತು…
ಯುವಜನಾಂಗದಲ್ಲಿ ಜೀವನೋತ್ಸಾಹ ಬೆಳೆಸುವ,ಸ್ಫೂರ್ತಿಯನ್ನು ತುಂಬುವ ಕೆಲಸವನ್ನು ಈ ಪುಸ್ತಕ ಮಾಡಬಹುದು, ಐಕಾನ್ ಗಳಿಲ್ಲದೇ ದಾರಿತಪ್ಪಿರುವ ಇಂದಿನ ಪೀಳಿಗೆಗೆ ಈ ಪುಸ್ತಕದಲ್ಲಿರುವ ಪಾತ್ರಗಳು ಮಾದರಿಯಾಗಬಹುದು.ಮಣಿಕಾಂತ್ ತಮ್ಮ ಲೇಖನಕ್ಕಾಗಿ ಆಯ್ದುಕೊಳ್ಳುವ ವ್ಯಕ್ತಿಗಳು ಯಾರೂ ಪ್ರಸಿದ್ಧರಲ್ಲ, ಅವರೆಲ್ಲರೂ ಸಮಾಜದ ಕೆಳಸ್ತರದಿಂದ ಬಂದವರು, ಶೋಷಿತರು, ಅತ್ಯಾಚಾರಕ್ಕೊಳಗಾದವರು, ಕಡುಬಡವರು, ಅಂಗವಿಕಲರು, ಮಾನಸಿಕ ಅಸ್ವಸ್ಥರು. ಹಾಗಂತ ಅವರ್ಯಾರೂ ತಮ್ಮ ಗತಿಸ್ಥಿತಿಗೆ ಕೊರಗುವ ಜಾಯಮಾನದವರಲ್ಲ, ತಮ್ಮ ಪಾಲಿಗೆ ದಕ್ಕಿದ್ದಿಷ್ಟೇ ಎಂದು ಸುಮ್ಮನೇ ಕೂರುವ ಅಲ್ಪತೃಪ್ತರೂ ಅಲ್ಲ. ಅವರು ನಮಗಿಂತ ದೊಡ್ಡ ಕನಸು ಕಾಣುತ್ತಾರೆ, ತಮ್ಮ ಮಿತಿಯನ್ನು ಮೀರಿ ನಿಲ್ಲುತ್ತಾರೆ. ಅಸಾಧ್ಯ ಅನ್ನುವುದನ್ನು ಸಾಧಿಸಿ ತೋರಿಸುತ್ತಾರೆ, ನಾರ್ಮಲ್ ಆಗಿರುವ ನಮ್ಮ ನಿಮ್ಮಂಥವರಿಗೆ ಮಾದರಿಯಾಗುತ್ತಾರೆ.
ಕಡಿಮೆ ಬೆಲೆಗೆ ದೊರೆಯುವ ಪುಸ್ತಕವೂ ಇದಾಗಿದ್ದು,ಪುಸ್ತಕ ಒದಿದವನಿಗೆ ಇದರ ತೂಕ ಬೆಲೆಗಿಂತಲೂ ಹೆಚ್ಚು ಅನ್ನಿಸದೆ ಇರದು.ಇಷ್ಟೆಲ್ಲ ಅಂಶಗಳನ್ನು ಹೊಂದಿರುವ ಈ ಪುಸ್ತಕವೊಂದು ನಿಮ್ಮ ಬಳಿ ಇದ್ದರೆ ಖಂಡಿತಾ ನಿಮ್ಮ ಮನಸ್ಸು ಮಾತನಾಡದೆ ಇರದು…..ಇನ್ನೇಕೆ ತಡ ನಿಮ್ಮ ಮನಸ್ಸಲ್ಲಿಯೂ ಮಾತಾಡಿಸಿ ಈ ಪುಸ್ತಕವನ್ನು ಕೆಳಗಿರುವ ಲಿಂಕ್ ಮೂಲಕ ಸಂಪರ್ಕಿಸಿ ನೀವು ಮಾತಾಡಿಕೊಳ್ಡ್ರಲ್ಲ
👇👇👇👇
https://shorturl.at/dqwYd
*https://pustakamane.com/shop-2 (ಪುಸ್ತಕ ಮನೆ contact number – 9606474289)
ಎ. ಆರ್ ಮಣಿಕಾಂತ್ ಅವರ ಪರಿಚಯ
ಮಣಿಕಾಂತ್ ಮೂಲತಃ ಮಂಡ್ಯದವರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಎಂಬ ಊರಿನವರು. ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರು. ಅವರು ಪತ್ರಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಓದುಗರ ವಲಯದಲ್ಲಿ ಪರಿಚಿತರಾದವರು. ಎಂಟು ವರ್ಷಗಳ ಕಾಲ ‘ವಿಜಯ ಕರ್ನಾಟಕ’ದಲ್ಲಿ ಕೆಲಸ ನಿರ್ವಹಿಸಿ ‘ಈ ಗುಲಾಬಿಯು ನಿನಗಾಗಿ’, ‘ಮರೆಯಲಿ ಹ್ಯಾಂಗ’, ‘ಉಭಯ ಕುಶಲೋಪರಿ ಸಾಂಪ್ರತ’ ಹಾಗೂ ‘ಹಾಡು ಹುಟ್ಟಿದ ಸಮಯ’ ಎಂಬ ಜನಪ್ರಿಯ ಅಂಕಣಗಳನ್ನು ಬರೆದಿದ್ದಾರೆ. ಹೆಚ್ಚು ಮಾರಾಟ ದಾಖಲೆಗಳನ್ನು ಕಂಡ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ‘ನೀಲಿಮಾ ಪ್ರಕಾಶನ’ ಎಂಬುದು ಅವರ ಪುಸ್ತಕ ಪ್ರಕಾಶನ ಸಂಸ್ಥೆ.
ಬರಹ: ಅಕ್ಷಯ್ ಕುಮಾರ್ ಎ