ಪುತ್ತೂರು:ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳದಲ್ಲಿರುವ ಗ್ರಾಮದೈವ ಶ್ರೀಶಿರಾಡಿ ದೈವಸ್ಥಾನದಲ್ಲಿ ಎ.30 ಹಾಗೂ ಮೇ.1ರಂದು ನಡೆಯಲಿರುವ ವರ್ಷಾವಧಿ ನೇಮೋತ್ಸವಕ್ಕೆ ಎ.24ರಂದು ಗೊನೆ ಮುಹೂರ್ತ ನೆರವೇರಿತು.
ದೈವಸ್ಥಾನದ ಗೌರವಾಧ್ಯಕ್ಷ ಯತಿರಾಜ್ ಜೈನ್ ಕೈಪಂಗಳಗುತ್ತು, ಅಧ್ಯಕ್ಷ ಎ.ವಿ ನಾರಾಯಣ ಅಲುಂಬುಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಖಜಾಂಚಿ ಕೆ.ಗುರುಪ್ರಸಾದ್ ಆಳ್ವ, ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.