ಕುಂದಾಪುರದಲ್ಲಿ ಪ್ರವೀಣ್ ಕ್ಯಾಪಿಟಲ್ ಸಂಸ್ಥೆ ಉದ್ಘಾಟನೆ

0

ಪುತ್ತೂರು: ಈ ವರ್ಷ ಕರ್ನಾಟಕದಾದ್ಯಂತ 10 ಶಾಖೆಗಳು ತೆರೆಯಲಿದ್ದು, ಇದು ಸಂಸ್ಥೆಯ 14ನೇ ಶಾಖೆಯಾಗಿದೆ. ಈ ಆರ್ಥಿಕ ವರ್ಷದ ಪ್ರಥಮ ಶಾಖೆ ಕುಂದಾಪುರದ್ದೇ ಆಗಿದೆ. ಮೇಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಹಾಗೂ ಬಾಗಲಕೋಟೆಗಳಲ್ಲಿ ಶಾಖೆಗಳನ್ನು ಆರಂಭಿಸುತ್ತಿದೆ. ಬಳಿಕ ಬೆಂಗಳೂರಿನಲ್ಲಿ ಕಚೇರಿ ಆರಂಭವಾಗಲಿದೆ. ಗ್ರಾಹಕರ ಸೇವೆಯೇ ನಮ್ಮ ಪ್ರಥಮ ಆದ್ಯತೆ ಎಂದು ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮೋಫ್ ಜೆ. ರೈ ಹೇಳಿದರು.

ಅವರು ಖ್ಯಾತ ಪಾನೀಯ ಬ್ಯ್ರಾಂಡ್ ‘ಬಿಂದು’ ಮಾಲಕತ್ವ ಹೊಂದಿರುವ ಎಸ್.ಜಿ. ಗ್ರೂಪ್‌ನ ಅಂಗ ಸಂಸ್ಥೆ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್‌ನ 14ನೇ ಶಾಖೆಯನ್ನು ಲಕ್ಷ್ಮೀ ನಾರಾಯಣ ದೇವಸ್ಥಾನದ ಎದುರಿನ ಶ್ರೀ ಸಾಯಿ ಸೆಂಟರ್‌ನ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳಿಸಿ ಮಾತನಾಡಿದರು.

ಪ್ರವೀಣ್ ಕ್ಯಾಪಿಟಲ್ ಪ್ರೈ. ಲಿಮಿಟೆಡ್ ಸಂಸ್ಥೆಯು 1994ರಲ್ಲಿ ಸ್ಥಾಪನೆಯಾಗಿದ್ದು ಮಂಗಳೂರಿನಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ. ಹೊಸ ಮತ್ತು ಹಳೆಯ ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ ನೀಡುತ್ತಿದ್ದು, ವಾಹನ, ಆಸ್ತಿಯ ವ್ಯಹಹಾರಕ್ಕೆ ಸಾಲ ನೀಡುತ್ತದೆ. ಗ್ರಾಹಕರಿಗೆ ಉತ್ತಮ ಪಾರದರ್ಶಕ ಸೇವೆ ನೀಡುತ್ತ ಬಂದಿದೆ. ಅನೇಕ ಕುಟುಂಬಗಳನ್ನು ಸ್ವಾವಲಂಬಿಯನ್ನಾಗಿಸಿದೆ ಎಂದರು.

ಸಂಸ್ಥೆಯ ಉಪ ಮಹಾ ವ್ಯವಸ್ಥಾಪಕ ಶ್ರೀವತ್ಸರಾಜ್ ಎಂ.ಜಿ., ಸೀನಿಯರ್ ರಿಕವರಿ ಮ್ಯಾನೇಜರ್ ಕೇಶವ ಹೆಚ್. ಎ., ರೀಜನಲ್ ಮ್ಯಾನೇಜರ್ ಉದಯ್ ಶ್ಯಾಮ್, ಬ್ಯ್ರಾಂಚ್ ಮ್ಯಾನೇಜ‌ರ್ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಹ್ಯಾಪಿ ಕಾರ್ಸ್ ಸಂಸ್ಥೆಯ ಮುದಸ್ಸಿರ್ ಮತ್ತು ನಿಹಾಲ್, ಎಸ್.ಜಿ ಗ್ರೂಪ್ಸ್ ನ ವಿತರಕ ಪ್ರಭಾಕ‌ರ್ ಸಂಸ್ಥೆಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here