ಪುತ್ತೂರಿನ ಹೆಮ್ಮೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ವಿವೇಕಾನಂದ ಪಾಲಿಟೆಕ್ನಿಕ್

0

ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿವೇಕಾನಂದ ಪಾಲಿಟೆಕ್ನಿಕ್‌ಗೆ 40ರ ನಡುಹರೆಯದ ಸಂಭ್ರಮ. ತಾಂತ್ರಿಕ ಪರೀಕ್ಷಾ ಮಂಡಳಿ ಬೆಂಗಳೂರು ಇದರೊಂದಿಗೆ ಸಂಯೋಜನೆಗೊಂಡಿದ್ದು ನವದೆಹಲಿಯ ಎಐಸಿಟಿಇಯಿಂದ ಮಾನ್ಯತೆ ಪಡೆದಿದೆ. ಈ ಪಾಲಿಟೆಕ್ನಿಕ್ ಕರ್ನಾಟಕದ ಅತ್ಯುತ್ತಮ ಶಿಕ್ಷಣಸಂಸ್ಥೆ ಎಂಬುದಾಗಿ ಗುರುತಿಸಿಕೊಂಡಿದೆ. ಹಲವಾರು ಗರಿಮೆಗಳನ್ನು ತನ್ನ ಮುಡಿಗೆ ಏರಿಸಿಕೊಂಡಿರುವ ಈ ಸುಸಜ್ಜಿತ ವಿದ್ಯಾಸಂಸ್ಥೆ ಊರ, ಪರವೂರ ಗ್ರಾಮೀಣ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಅಡಿಯಲ್ಲಿ ಪಳಗಿ ಆತ್ಮಾಭಿಮಾನದಿಂದ ಬದುಕುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಸಹಕರಿಸಿದೆ. ಉತ್ತಮ ಪರಿಸರ, ಉತ್ತಮ ಶಿಕ್ಷಕ ವೃಂದ ಹಾಗೂ ಆಡಳಿತ ವ್ಯವಸ್ಥೆಯನ್ನೂ ಹೊಂದಿರುವ ಈ ಸಂಸ್ಥೆಯು ಪುತ್ತೂರಿನ ನೆಹರುನಗರದ ಪ್ರಶಾಂತ ವಾತಾವರಣದಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿ ಮೌಲ್ಯಯುತ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ.


ಈ ವಿದ್ಯಾಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್, ಆಟೋಮೊಬೈಲ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಷಯಗಳಲ್ಲಿ 3 ವರ್ಷಗಳ ಡಿಪ್ಲೋಮಾ ತರಬೇತಿ ನೀಡಲಾಗುತ್ತಿದೆ. ಡಿಪ್ಲೊಮಾ ಶಿಕ್ಷಣ ಪಡೆಯಲು ಕನಿಷ್ಠ ವಿದ್ಯಾರ್ಹತೆ S S L C  ಆಗಿರಬೇಕು.

ಡಿಪ್ಲೊಮಾ ಪದವಿ ಪಡೆದವರ ಅನುಕೂಲಗಳು ಈ ರೀತಿ ಇರುತ್ತದೆ:
*3 ವರ್ಷಗಳ ಪಾಲಿಟೆಕ್ನಿಕ್ ಕೋರ್ಸ್‌ಗಳ ಬಳಿಕ ನೇರವಾಗಿ ಇಂಜಿನಿಯರಿಂಗ್‌ನ 2 ನೇ ವರ್ಷಕ್ಕೆ ಪ್ರವೇಶ.
*PUC ವಿಜ್ಞಾನ ವಿಭಾಗ ಮತ್ತು ITI ಪಾಸಾದ ವಿದ್ಯಾರ್ಥಿಗಳಿಗೆ ಡಿಪ್ಲೋಮಾದ 2ನೇ ವರ್ಷಕ್ಕೆ ನೇರ ದಾಖಲಾತಿ.
*ಕಂಪೆನಿಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ಪೂರಕ ನೈಪುಣ್ಯಕ್ಕಾಗಿ ಡಿಪ್ಲೋಮಾದ ಕೊನೆಯ ಸೆಮಿಸ್ಟರ್‌ನಲ್ಲಿ Internship Training..
*ಇಂಜಿನಿಯರಿಂಗ್ ಸೇರಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ತರಬೇತಿ
*ಹಲವಾರು ಪ್ರತಿಷ್ಟಿತ ಕಂಪೆನಿಗಳಿಗೆ ಕಾಲೇಜಿನ ಕ್ಯಾಂಪಸ್‌ನಿಂದಲೇ ನೇರ ನೇಮಕಾತಿ.
*ಸುಸಜ್ಜಿತ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯಗಳು, ವಿಶಾಲವಾದ ಆಟದ ಮೈದಾನ ಹಾಗೂ ನುರಿತ ಶಿಕ್ಷಕರನ್ನು ಹೊಂದಿದೆ.
*ಸರಕಾರದಿಂದ ಕೊಡಮಾಡುವ ಎಲ್ಲಾ ವಿದ್ಯಾರ್ಥಿ ವೇತನಗಳು ಹಾಗೂ ಆಡಳಿತ ಮಂಡಳಿಯ ವತಿಯಿಂದ ನೀಡುವ ದತ್ತಿನಿಧಿ ವಿದ್ಯಾರ್ಥಿವೇತನಗಳು ಲಭ್ಯ.
*ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಉತ್ತಮ ವಸತಿನಿಲಯದ ವ್ಯವಸ್ಥೆ ಇದೆ.
*ಆರ್ಥಿಕವಾಗಿ ಹಿಂದುಳಿದಿರುವ ಅರ್ಹ ಬಡವಿದ್ಯಾರ್ಥಿಗಳಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಶುಲ್ಕ ರಿಯಾಯಿತಿ ನೀಡಲಾಗುತ್ತದೆ.

ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹಲವಾರು ಜನ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಹಲವು ಹಿರಿಯ ವಿದ್ಯಾರ್ಥಿಗಳು ತಮ್ಮ ಕಂಪನಿಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕೂಡಾ ನೀಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘ (ವಿಹಂಗಮ) ಕಾಲೇಜಿನ ಪ್ರಗತಿಗೆ ಸಹಕಾರ ನೀಡುತ್ತಿದೆ. ಹಿಂದೆ 2011-12 ರಲ್ಲಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಳಸಿದ ನೀರು ಶುದ್ಧೀಕರಣ ಘಟಕ ಸ್ಥಾಪನೆ ಬಗ್ಗೆ ಹಲವು ಲಕ್ಷಗಳ ಸಂಗ್ರಹದೊಂದಿಗೆ 2-25KLD ಶುದ್ದೀಕರಣ ಘಟಕ ಸ್ಥಾಪನೆ ಆಗಿರುತ್ತದೆ. ಅಟೋಮೊಬೈಲ್ ಲ್ಯಾಬಿಗೆ ಪ್ರದೀಪ ಬೊಬ್ಬೆಕೇರಿಯವರು ಕಾರಿನ ಕೊಡುಗೆಯನ್ನು ನೀಡಿದ್ದು ಅದನ್ನು ಕಾಲೇಜು ಉತ್ತಮವಾಗಿ ಬಳಸಿಕೊಂಡಿದೆ. ಪ್ರಸಕ್ತ ಸಾಲುಗಳಲ್ಲಿ ಹರೀಶ ಪ್ರಭು ಎಂಬುವವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ನೀಡುತ್ತಿದ್ದ್ದಾರೆ. ಮಾರ್ಕ್‌ಟೆಲಿಕಾಂನ ಮಾಲಕರಾದ ಶಶಿರಾಜ್‌ರವರು ತಮ್ಮ ತಂಡದೊಂದಿಗೆ ಇಂದಿನ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರಗಳು, ಸಂದರ್ಶನ ಎದುರಿಸುವ ಬಗೆಯ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗಕ್ಕೆ ದೇವಿಪ್ರಸಾದ್ ಶೆಟ್ಟಿಯವರು ಪ್ರಿಂಟರನ್ನು ದೇಣಿಗೆ ಕೊಟ್ಟಿರುತ್ತಾರೆ. ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಸೇರಿ ಪೆಡಸ್ಟಾಲ್ ಪ್ಯಾನ್ ಹಾಗೂ ಪ್ರಿಂಟರ್ ಇತ್ಯಾದಿಗಳನ್ನು ನೀಡಿರುತ್ತಾರೆ. ಕೆಲವು ವರ್ಷದ ತರಗತಿಗಳ ತಂಡದವರು ಒಟ್ಟಾಗಿ ಸೇರಿ ಕನ್ಯಾನ ಶ್ರೀಭಾರತಿ ಆಶ್ರಮದಲ್ಲಿ ಒಂದು ದಿನ ಕಳೆದು, ಅವರಿಗೆ ದೇಣಿಗೆ ನೀಡುವ ಮೂಲಕ ಸಮಾಜಸೇವೆಯನ್ನೂ ಮಾಡುತಿದ್ದಾರೆ. ಹಿರಿಯವಿದ್ಯಾರ್ಥಿಗಳು ವಾರ್ಷಿಕವಾಗಿ ಪಾಲಿಟೆಕ್ನಿಕ್‌ನಲ್ಲಿ ಸೇರಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. ಒಟ್ಟಾಗಿ ಹೇಳುವುದಾದರೆ ವಿವೇಕಾನಂದ ಪಾಲಿಟೆಕ್ನಿಕ್ ನನ್ನ ಕಾಲೇಜು, ನನ್ನ ಜವಾಬ್ದಾರಿ ಎಂಬುದಾಗಿ ಭಾವಿಸಿರುವ ಹಿರಿಯ ವಿದ್ಯಾರ್ಥಿಗಳು ಹಲವಾರು ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಕಛೇರಿಯನ್ನು ಸಂಪರ್ಕಿಸಲು 08251-231197,233698, 9481757510 ಮತ್ತು 9449662178. Email: vppputtur@gmail.com ಬಳಸಿಕೊಳ್ಳಬಹುದು. ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ.

LEAVE A REPLY

Please enter your comment!
Please enter your name here